
ಪಹಲ್ಗಾಮ್ ದಾಳಿಗೆ ಬಲಿಯಾದವರ ಕುಟುಂಬ ಸದಸ್ಯರು ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ತಂದೆ, ಪತಿ, ಸಹೋದರನನ್ನು ಕಳೆದುಕೊಂಡವರು ತಮ್ಮ ಪರಿಸ್ಥಿತಿಗೆ ಹಳಿಯುತ್ತಾ, ಸರ್ಕಾರದ ಆಪರೇಷನ್ ಸಿಂದೂರ ವ್ಯರ್ಥ ಪ್ರಯತ್ನ ಎಂದು ಹೇಳಿದ್ದಾರೆ.
ಭಾರತ vs ಪಾಕಿಸ್ತಾನ ಪಂದ್ಯವನ್ನು ಆಯೋಜಿಸಲಾಗುತ್ತಿದೆ ಎಂದು ನಮಗೆ ತಿಳಿದಾಗ, ನಮಗೆ ತುಂಬಾ ದುಃಖವಾಯಿತು. ಭಾರತ ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ಸಂಪರ್ಕ ಉಳಿಸಿಕೊಳ್ಳಬಾರದು. ನೀವು ಪಂದ್ಯವನ್ನು ಆಡಲು ಬಯಸಿದರೆ, ಭಯೋತ್ಪಾದಕರ ಗುಂಡಿಗೆ ಬಲಿಯಾದ 16 ವರ್ಷದ ನನ್ನ ಸೋದರ ಮರಳಿ ಬರುತ್ತಾನೆಯೇ, ಆಪರೇಷನ್ ಸಿಂದೂರ್ ಈಗ ವ್ಯರ್ಥವಾಗಿದೆ ಎಂದು ತೋರುತ್ತದೆ ಸಾವನ್ ಪರ್ಮರ್ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.
ಆಪರೇಷನ್ ಸಿಂದೂರ್ ಇನ್ನೂ ಮುಗಿಯದಿದ್ದರೆ ಪಂದ್ಯವನ್ನು ಏಕೆ ನಡೆಸಲಾಗುತ್ತಿದೆ ಎಂದು ಅವರ ತಾಯಿ ಕಿರಣ್ ಯತೀಶ್ ಪರ್ಮಾರ್ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ. ತಮ್ಮವರನ್ನು ಕಳೆದುಕೊಂಡವರ ಗಾಯ ಇನ್ನೂ ವಾಸಿಯಾಗಿಲ್ಲ ಎನ್ನುತ್ತಾರೆ ಅವರು.
ಈ ಪಂದ್ಯ ನಡೆಯಬಾರದು. ನಾನು ಪ್ರಧಾನಿ ಮೋದಿಯವರನ್ನು ಕೇಳಲು ಬಯಸುತ್ತೇನೆ, ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ, ಹಾಗಾದರೆ ಈ ಭಾರತ vs ಪಾಕಿಸ್ತಾನ ಪಂದ್ಯ ಏಕೆ ನಡೆಯುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಅವರು ಎಷ್ಟು ದುಃಖಿತರಾಗಿದ್ದಾರೆಂದು ನೋಡಲು ದೇಶದ ಪ್ರತಿಯೊಬ್ಬರೂ ಹೋಗಲು ನಾನು ಬಯಸುತ್ತೇನೆ. ನಮ್ಮ ನೋವಿನ ಗಾಯಗಳು ವಾಸಿಯಾಗಿಲ್ಲ ಎನ್ನುತ್ತಾರೆ ಅವರು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು 26 ಪ್ರವಾಸಿಗರನ್ನು ಕೊಂದು ಹಾಕಿದ್ದರು.
Advertisement