
ಚಂಡೀಗಢ: ಬ್ರಿಟನ್ ನಲ್ಲಿ ಭಾರತೀಯ ಮೂಲದ 20ರ ವರ್ಷದ ಸಿಖ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಮತ್ತು ಹಲ್ಲೆ ನಡೆಸಿ, ಜನಾಂಗೀಯ ನಿಂದನೆ ಮಾಡಿದ ಆರೋಪದ ಮೇಲೆ ಯುನೈಟೆಡ್ ಕಿಂಗ್‌ಡಂನ ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು 30 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದು "ಜನಾಂಗೀಯ ಪ್ರೇರಿತ ಅಪರಾಧ" ಎಂದು ಕರೆಯಲಾಗುತ್ತಿದೆ.
"ಓಲ್ಡ್‌ಬರಿಯಲ್ಲಿ ಜನಾಂಗೀಯ ಪ್ರೇರಿತ ಅತ್ಯಾಚಾರದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಇಂದು ಸಂಜೆ(ಭಾನುವಾರ) ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಟೇಮ್ ರೋಡ್ ಪ್ರದೇಶದಲ್ಲಿ ನಡೆದ ಹಲ್ಲೆಯ ವಿಚಾರಣೆಯ ಭಾಗವಾಗಿ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅತ್ಯಾಚಾರದ ಶಂಕೆಯ ಮೇಲೆ ಬಂಧಿಸಲಾಗಿದೆ ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ತನಿಖೆ ಮುಂದುವರೆದಂತೆ ಮಹಿಳೆಗೆ ಬೆಂಬಲ ಸಿಗುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 9 ರಂದು ಬೆಳಿಗ್ಗೆ 8:30ರ ಸುಮಾರಿಗೆ ಟೇಮ್ ರೋಡ್ ಬಳಿ ನಡೆದ ಈ ಘಟನೆಯನ್ನು ಜನಾಂಗೀಯವಾಗಿ ಉಲ್ಬಣಿಸಿದ ದಾಳಿ ಎಂದು ಪೋಲಿಸರು ಪರಿಗಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಮೇಲೆ ದೌರ್ಜನ್ಯದ ವೇಳೆ ದಾಳಿಕೋರು ಜನಾಂಗೀಯ ನಿಂದನೆ ಮಾಡಿದ್ದಾರೆ. "ನೀನು ಈ ದೇಶಕ್ಕೆ ಸೇರಿದವಳಲ್ಲ" ಮತ್ತು "ನಿನ್ನ ದೇಶಕ್ಕೆ ತೊಲಗು" ಎಂದು ಬೆದರಿಕೆ ಹಾಕಿದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೋಲಿಸರು ತಿಳಿಸಿದ್ದಾರೆ.
Advertisement