
ಬಿಹಾರ: ಮಹತ್ವದ ಬೆಳವಣಿಗೆಯೊಂದರಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿ ಅವರನ್ನು ಒಳಗೊಂಡ ವಿವಾದಾತ್ಮಕ AI ವಿಡಿಯೋವನ್ನು ಹಿಂಪಡೆಯುವಂತೆ, ಪಾಟ್ನಾ ಹೈಕೋರ್ಟ್ ಕಾಂಗ್ರೆಸ್‌ಗೆ ಸೂಚನೆ ನೀಡಿದೆ.
ದಿವಂಗತ ಹೀರಾಬೆನ್ ಮೋದಿ ಅವರು ಪ್ರಧಾನಿ ಮೋದಿ ಕನಸಿನಲ್ಲಿ ಬಂದು ತಮ್ಮ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಕೋಪ ಮಾಡಿಕೊಂಡಿದ್ದ AI ವಿಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಈ ವಿಡಿಯೋ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.
ವೀಡಿಯೋ ಮೋದಿ ಅವರ ತಾಯಿಗೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ವಿಡಿಯೋದಲ್ಲಿ ಪ್ರಧಾನಿ ಅವರ ತಾಯಿಗೆ ಅವಮಾನ ಮಾಡಿಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು. ಇದೀಗ ಪಾಟ್ನಾ ಹೈಕೋರ್ಟ್ ಕೂಡಲೇ ಈ ವಿಡಿಯೋವನ್ನು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದು ಹಾಕುವಂತೆ ಸೂಚಿಸಿದ್ದು, ನ್ಯಾಯಾಲಯದ ತೀರ್ಪಿನಿಂದ ಕಾಂಗ್ರೆಸ್ ಮುಖಭಂಗ ಅನುಭವಿಸುವಂತಾಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಎಐ ಚಿತ್ರವನ್ನು ತೆಗೆದು ಹಾಕುವಂತೆ ಹಂಗಾಮಿ ಮುಖ್ಯ ನ್ಯಾಯಾಧೀಶ ಪಿ.ಬಿ.ಬಜಂತ್ರಿ ಆದೇಶಿಸಿದ್ದಾರೆ.
ಬಿಹಾರ ಕಾಂಗ್ರೆಸ್ ಹಂಚಿಕೊಂಡಿದ್ದ 36 ಸೆಕೆಂಡುಗಳ ಎಐ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಮಲಗುವ ಕೋಣೆಗೆ ಆಗಮಿಸಿ ಬೆಡ್ ಮೇಲೆ ಮಲಗುತ್ತಾರೆ….ನಂತರ ಅವರ ಕನಸಿನಲ್ಲಿ ತಾಯಿ ಕಾಣಿಸಿಕೊಂಡು, ಬಿಹಾರದಲ್ಲಿ ನನ್ನ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದೀಯಾ ಎಂದು ಗದರಿಸುವಂತೆ ಎಐ ವಿಡಿಯೋವನ್ನು ಸೃಷ್ಟಿಸಲಾಗಿದೆ.
Advertisement