
ಗುವಾಹಟಿ: ಅಸ್ಸಾಂನ ಜನಪ್ರಿಯ ಗಾಯಕ ಜುಬೀನ್ ಗರ್ಗ್(52) ಅವರು ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ ನಿಧನರಾಗಿದ್ದಾರೆ.
"ಯಾ ಅಲಿ" ಖ್ಯಾತಿಯ ಗಾಯಕ ಸಿಂಗಾಪುರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಕೆಲವು ವರದಿಗಳ ಪ್ರಕಾರ, ಅವರು ವಿಲಕ್ಷಣ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಗಾರ್ಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ.
ಗಾಯಕ ಗರ್ಗ್ ಅವರು ಈಶಾನ್ಯ ಉತ್ಸವದಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ತೆರಳಿದ್ದರು ಮತ್ತು ಶುಕ್ರವಾರ ಪ್ರದರ್ಶನ ನೀಡಬೇಕಿತ್ತು.
ಜುಬೀನ್ ಬೋರ್ತಕುರ್ ಆಗಿ ಜನಿಸಿದ ಗಾಯಕ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಗರ್ಗ್ ಎಂದೇ ಮನೆಮಾತಾಗಿದ್ದರು. ಗಾಯಕ-ಗೀತರಚನೆಕಾರ, ಸಂಯೋಜಕ, ಸಂಗೀತ ನಿರ್ದೇಶಕ, ಸಂಗೀತ ನಿರ್ಮಾಪಕ, ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಮತ್ತು ಲೋಕೋಪಕಾರಿಯಾಗಿದ್ದರು. ಅವರು ಹೆಚ್ಚಾಗಿ ಅಸ್ಸಾಮಿ, ಬಂಗಾಳಿ ಮತ್ತು ಹಿಂದಿ ಭಾಷೆಯ ಹಾಡುಗಳನ್ನು ಹಾಡುತ್ತಿದ್ದರು.
ಗರ್ಗ್ ಅಸ್ಸಾಂನ ಗೋಲಾಘಾಟ್‌ನ ಫ್ಯಾಷನ್ ಡಿಸೈನರ್ ಗರಿಮಾ ಸೈಕಿಯಾ ಅವರನ್ನು ವಿವಾಹವಾಗಿದ್ದರು.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗಾಯಕ ಗರ್ಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು, "ಇದು ಒಂದು ದುರಂತ ಮತ್ತು ನೋವಿನ ಘಟನೆ. ನಾನು ಗುವಾಹಟಿಗೆ ಹಿಂತಿರುಗಿ ಅವರ ಪಾರ್ಥೀವ ಶರೀರವನ್ನು ಹೇಗೆ ತರಬಹುದು ಎಂಬುದರ ಕುರಿತು ಚರ್ಚಿಸುತ್ತೇನೆ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement