
ಚೆನ್ನೈ: ಒಬ್ಬ ನಾಯಕ ಭಾರಿ ಜನಸಮೂಹವನ್ನು ಆಕರ್ಷಿಸಿದ ಮಾತ್ರಕ್ಕೆ ಇಡೀ ಸಮೂಹವು ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎಂದು ವಿಜಯ್ ಗೆ ನಟ ಕಮಲ್ ಹಾಸನ್ ಹೇಳಿದ್ದಾರೆ.
2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಸ್ಪರ್ಧೆ ಮಾಡಲಿದ್ದಾರೆ. ಇದಕ್ಕಾಗಿ ವಿವಿಧ ಕಡೆಗಳಲ್ಲಿ ರ‍್ಯಾಲಿ ಮಾಡುತ್ತಿದ್ದಾರೆ. ಈ ವೇಳೆ ಲಕ್ಷಾಂತರ ಜನರು ಸೇರುತ್ತಿದ್ದಾರೆ. ಇದರಿಂದ ವಿಜಯ್ ಚುನಾವಣೆಯಲ್ಲಿ ಗೆಲ್ಲೋದು ನಿಶ್ಚಿತ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದು ರ‍್ಯಾಲಿಗೆ ಬಂದವರೆಲ್ಲರೂ ನಿಮಗೆ ವೋಟ್ ಹಾಕುವುದಿಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ.
ಇದು ವಿಜಯ್ಗೆ ಮಾತ್ರವಲ್ಲ, ತಮಗೂ ಅನ್ವಯ ಆಗುತ್ತದೆ ಎಂದಿದ್ದಾರೆ. ಇಡೀ ಸಮೂಹವು ವಿಜಯ್ಗೆ ವೋಟ್ ಮಾಡೋದಿಲ್ಲ. ಅರ್ಥಾತ್, ಎಲ್ಲವೂ ಮತವಾಗಿ ಮಾರ್ಪಡುವುದಿಲ್ಲ. ಇದು ಎಲ್ಲಾ ನಾಯಕರಿಗೂ ಅನ್ವಯ ಆಗುತ್ತದೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ನಾಯಕರು ಎಂದು ನಾನು ಹೇಳಿರುವಾಗ, ವಿಜಯ್ ಅವರನ್ನು ಬಿಡಲು ಹೇಗೆ ಸಾಧ್ಯ? ನನ್ನನ್ನು ಸೇರಿದಂತೆ ದೇಶದ ಪ್ರತಿ ನಾಯಕನಿಗೂ ಇದು ಅನ್ವಯ ಆಗುತ್ತದೆ. ನೀವು ಜನರನ್ನು ಸೆಳೆಯಬಹುದು ಆದರೆ ಅದನ್ನು ಮತವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಸರಿಯಾದ ಹಾದಿಯಲ್ಲಿ ಹೋಗಿ. ಧೈರ್ಯದಿಂದ ಮುಂದುವರಿಯಿರಿ ಮತ್ತು ಜನರಿಗೆ ಒಳ್ಳೆಯದನ್ನು ಮಾಡಿ. ಇದು ಎಲ್ಲಾ ನಾಯಕರಿಗೆ ನನ್ನ ಮನವಿ ಎಂದು ಹೇಳಿದ್ದಾರೆ.
Advertisement