ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ: Sonam Wangchuk ಸಂಸ್ಥೆ ಪರವಾನಗಿ ರದ್ದುಪಡಿಸಿದ ಕೇಂದ್ರ ಸರ್ಕಾರ

ಸೋನಮ್ ವಾಂಗ್ಚುಕ್‌ ಸ್ಥಾಪಿಸಿರುವ ಎಚ್‌ಐಎಲ್‌ ಮತ್ತು SECMOL ಸಂಸ್ಥೆಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು (ಎಫ್‌ಸಿಆರ್‌ಎ) ಉಲ್ಲಂಘಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
Sonam Wangchuk
ಸೋನಮ್ ವಾಂಗ್‌ಚುಕ್
Updated on

ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಸ್ಥಾಪಿಸಿದ ಸ್ಟೂಡೆಂಟ್ಸ್ ಎಜುಕೇಶನಲ್ ಅಂಡ್ ಕಲ್ಚರಲ್ ಮೂವ್‌ಮೆಂಟ್ ಆಫ್ ಲಡಾಖ್ ನ FCRA ಪರವಾನಗಿಯನ್ನು ಕೇಂದ್ರ ಸರ್ಕಾರ ಗುರುವಾರ ರದ್ದುಗೊಳಿಸಿದೆ.

ಸೋನಮ್ ವಾಂಗ್ಚುಕ್‌ ಸ್ಥಾಪಿಸಿರುವ ಎಚ್‌ಐಎಲ್‌ ಮತ್ತು SECMOL ಸಂಸ್ಥೆಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು (ಎಫ್‌ಸಿಆರ್‌ಎ) ಉಲ್ಲಂಘಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇನ್ನೂ ಯಾವುದೇ FIR ದಾಖಲಾಗಿಲ್ಲವಾದರೂ, CBI ಅಧಿಕಾರಿಗಳು ಕಳೆದ ವಾರದಿಂದ ಲಡಾಖ್‌ನಲ್ಲಿದ್ದು, HIAL ಮತ್ತು SECMOL ನ ಹಣಕಾಸು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. FCRA ಅನುಮತಿ ಇಲ್ಲದೆ ವಿದೇಶಿ ನಿಧಿಯನ್ನು ಸ್ವೀಕರಿಸಿದ ಆರೋಪದ ಕುರಿತು ಕೇಂದ್ರ ಗೃಹ ಸಚಿವಾಲಯದ ದೂರಿನ ಮೇರೆಗೆ ತನಿಖೆ ನಡೆಸಲಾಗಿದೆ.

PTI ಜೊತೆ ಮಾತನಾಡಿದ ವಾಂಗ್‌ಚುಕ್, CBI ತಂಡವು ಸುಮಾರು 10 ದಿನಗಳ ಹಿಂದೆ ಅಧಿಕೃತ ಆದೇಶದೊಂದಿಗೆ ಸಂಸ್ಥೆಗಳಿಗೆ ಭೇಟಿ ನೀಡಿತ. "ವಿದೇಶಿ ದೇಣಿಗೆ ಸ್ವೀಕರಿಸುವ ಮೂಲಕ ನಾವು FCRA ಮಾನದಂಡಗಳನ್ನು ಉಲ್ಲಂಘಿಸಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ಇವು UN, ಸ್ವಿಸ್ ವಿಶ್ವವಿದ್ಯಾಲಯ ಮತ್ತು ಇಟಾಲಿಯನ್ ಸಂಸ್ಥೆಯೊಂದಿಗೆ ಜ್ಞಾನ ಹಂಚಿಕೆ ಸೇವೆಗಳಿಗೆ ಪಾವತಿಗಳಾಗಿದ್ದು, ತೆರಿಗೆಗಳನ್ನು ಸರಿಯಾಗಿ ಪಾವತಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

Sonam Wangchuk
ಲಡಾಖ್ ಕಾರ್ಯಕರ್ತ Sonam Wangchuk ಸಂಸ್ಥೆಯ ವಿರುದ್ಧ FCRA ಉಲ್ಲಂಘನೆ ಆರೋಪ: ಸಿಬಿಐ ತನಿಖೆ

ತನಿಖಾ ತಂಡವು ಆರಂಭದಲ್ಲಿ 2022–24ರ ಅವಧಿಯ ಮೇಲೆ ಕೇಂದ್ರೀಕರಿಸಿತು, ಆದರೆ ನಂತರ 2020 ಮತ್ತು 2021 ಸೇರಿದಂತೆ ಹಿಂದಿನ ವರ್ಷಗಳ ಹಣಕಾಸಿನ ವಿವರಗಳನ್ನು ಪಡೆಯಲು ಪ್ರಾರಂಭಿಸಿತು ಎಂದು ಅವರು ಆರೋಪಿಸಿದ್ದಾರೆ. "ಅವರು ನಮ್ಮ ಶಾಲೆಗೆ ಸಹ ಹೋಗಿದ್ದರು, ಅದನ್ನು ದೂರಿನಲ್ಲಿ ಉಲ್ಲೇಖಿಸಲಾಗಿಲ್ಲ" ಎಂದು ವಾಂಗ್‌ಚುಕ್ ಹೇಳಿದರು. HIAL ಮತ್ತು SECMOL ಎರಡೂ ಲಡಾಖ್‌ನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಸ್ಟೈಫಂಡ್‌ಗಳನ್ನು ಒದಗಿಸುತ್ತವೆ ಎಂದು ಅವರು ಹೇಳಿದರು.

ಲಡಾಖ್‌ನಲ್ಲಿ ಹೆಚ್ಚಿದ ಉದ್ವಿಗ್ನತೆಯ ನಡುವೆ ಈ ಬೆಳವಣಿಗೆಗಳು ಬಂದಿವೆ. ಬುಧವಾರ, ಈ ಪ್ರದೇಶವು ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಹಿಂಸಾಚಾರಕ್ಕೆ ಸಾಕ್ಷಿಯಾಯಿತು, ಪ್ರತಿಭಟನಾಕಾರರು ಲೇಹ್‌ನಲ್ಲಿ ಬಿಜೆಪಿ ಕಚೇರಿಗಳು ಮತ್ತು ಹಿಲ್ ಕೌನ್ಸಿಲ್ ಮೇಲೆ ದಾಳಿ ಮಾಡಿದರು. ನಂತರ ವಾಹನಗಳಿಗೆ ಬೆಂಕಿ ಹಚ್ಚಿದರು, ಇದರಿಂದಾಗಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಅಶ್ರುವಾಯು ಪ್ರಯೋಗಿಸಿದರು.

ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಅದರ ಭೂಮಿ, ಸಂಸ್ಕೃತಿ ಮತ್ತು ಉದ್ಯೋಗಗಳನ್ನು ರಕ್ಷಿಸಲು ಸಂವಿಧಾನದ ಆರನೇ ವಿಧಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸಿ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com