ಲಡಾಕ್ ಲಡಾಯಿ: ಅ. 7 ರ ಮಾತುಕತೆಗೆ ಮುನ್ನ ಪೂರ್ವ ಸಿದ್ಧತಾ ಸಭೆಗೆ ಗೃಹ ಸಚಿವಾಲಯ ಕರೆ

ಬರುವ ಅಕ್ಟೋಬರ್ 7 ರಂದು ಕೇಂದ್ರ ಮತ್ತು ಲಡಾಖ್ ನಾಯಕರ ನಡುವಿನ ಮಾತುಕತೆಗೆ ಮುಂಚಿತವಾಗಿ, ಲಡಾಖ್ ನಾಯಕರ ಏಳು ಸದಸ್ಯರ ನಿಯೋಗವು ಇಂದು ದೆಹಲಿಯಲ್ಲಿ ಗೃಹ ಸಚಿವಾಲಯ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಲಿದೆ.
In this photo from Sept. 24, 2025, smoke rises from buildings including the local office of the BJP set ablaze during protests in Leh town, Ladakh on Wednesday
ಲಡಾಖ್‌ನ ಲೇಹ್ ಪಟ್ಟಣದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡ ಬಿಜೆಪಿಯ ಸ್ಥಳೀಯ ಕಚೇರಿ ಸೇರಿದಂತೆ ಕಟ್ಟಡಗಳಿಂದ ಹೊಗೆ ಬರುತ್ತಿರುವುದು
Updated on

ಶ್ರೀನಗರ: ಲಡಾಖ್‌ನಲ್ಲಿ ಇತ್ತೀಚೆಗೆ ನಡೆದ ಗಲಭೆಗೆ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರೇ ಕಾರಣ ಎಂದು ದೂಷಿಸಿದ್ದ ಗೃಹ ಸಚಿವಾಲಯ (MHA), ಲೇಹ್ ಅಪೆಕ್ಸ್ ಸಂಸ್ಥೆ (LAB)ಯನ್ನು ಸಂಪರ್ಕಿಸಿದೆ.

ಬರುವ ಅಕ್ಟೋಬರ್ 7 ರಂದು ಕೇಂದ್ರ ಮತ್ತು ಲಡಾಖ್ ನಾಯಕರ ನಡುವಿನ ಮಾತುಕತೆಗೆ ಮುಂಚಿತವಾಗಿ, ಲಡಾಖ್ ನಾಯಕರ ಏಳು ಸದಸ್ಯರ ನಿಯೋಗವು ಇಂದು ದೆಹಲಿಯಲ್ಲಿ ಗೃಹ ಸಚಿವಾಲಯ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಲಿದೆ.

LAB ಸಹ-ಅಧ್ಯಕ್ಷ ಚೆರಿಂಗ್ ಡೋರ್ಜಯ್ ಅವರು, ನಿನ್ನೆ ಲೇಹ್‌ನಲ್ಲಿ LAB ಸದಸ್ಯರು ಮತ್ತು MHA ಪ್ರತಿನಿಧಿಗಳ ನಡುವೆ ಸಭೆ ನಡೆಯಿತು ಎಂದು ತಿಳಿಸಿದ್ದಾರೆ. ಕಳೆದ ಬುಧವಾರದ ಹಿಂಸಾಚಾರಲ್ಲಿ ನಾಲ್ವರು ಮೃತಪಟ್ಟು 80 ಮಂದಿ ಗಾಯಗೊಂಡಿದ್ದರು.

In this photo from Sept. 24, 2025, smoke rises from buildings including the local office of the BJP set ablaze during protests in Leh town, Ladakh on Wednesday
Ladakh violence ಗೆ ಸೋನಮ್ ವಾಂಗ್‌ಚುಕ್ ಪ್ರಚೋದನಕಾರಿ ಹೇಳಿಕೆಗಳೇ ಕಾರಣ: ಕೇಂದ್ರ ಸರ್ಕಾರ

ಹಿಂಸಾಚಾರದ ನಂತರ, ಪ್ರತಿಭಟನೆಗಳನ್ನು ತಡೆಗಟ್ಟಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಅಧಿಕಾರಿಗಳು ಲೇಹ್ ಜಿಲ್ಲೆಯಲ್ಲಿ ಕರ್ಫ್ಯೂ ಮತ್ತು ನೆರೆಯ ಕಾರ್ಗಿಲ್‌ನಲ್ಲಿ ಸೆಕ್ಷನ್ 163 ರ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಿದ್ದಾರೆ. ಪೊಲೀಸರು ಸುಮಾರು 50 ಜನರನ್ನು ಬಂಧಿಸಿದ್ದಾರೆ. ಕರ್ಫ್ಯೂ ತರಹದ ನಿರ್ಬಂಧಗಳು ಮುಂದುವರಿದಿವೆ.

ಅಕ್ಟೋಬರ್ 7 ರ ಮಾತುಕತೆಗೆ ಮುನ್ನ ನಾಳೆ ಅಥವಾ 28 ರಂದು ದೆಹಲಿಯಲ್ಲಿ ಪೂರ್ವಸಿದ್ಧತಾ ಅಧಿವೇಶನ ನಡೆಯಲಿದೆ ಎಂದು LAB ಮತ್ತು MHA ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ LAB ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA) ದಿಂದ ತಲಾ ಮೂವರು ಪ್ರತಿನಿಧಿಗಳು, ಲಡಾಖ್ ಸಂಸದ ಹಾಜಿ ಹನೀಫಾ ಜಾನ್ ಭಾಗವಹಿಸಲಿದ್ದಾರೆ.

ಅಕ್ಟೋಬರ್ 7 ರಂದು ಮಾತುಕತೆಗಾಗಿ ಗೃಹ ಸಚಿವಾಲಯ ಲಡಾಖ್ ನಾಯಕರನ್ನು ದೆಹಲಿಗೆ ಆಹ್ವಾನಿಸಿದೆ. ಕೊನೆಯ ಸುತ್ತಿನ ಸಭೆ ಮೇ 27 ರಂದು ನಡೆಯಿತು.

In this photo from Sept. 24, 2025, smoke rises from buildings including the local office of the BJP set ablaze during protests in Leh town, Ladakh on Wednesday
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ: Sonam Wangchuk ಸಂಸ್ಥೆ ಪರವಾನಗಿ ರದ್ದುಪಡಿಸಿದ ಕೇಂದ್ರ ಸರ್ಕಾರ

ಸೆಪ್ಟೆಂಬರ್ 27 ರ ಸಭೆಯು ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ಲಡಾಖ್ ನಾಯಕರು ಮತ್ತು MHA ನಡುವಿನ ಅಕ್ಟೋಬರ್ 7 ರ ಮಾತುಕತೆಗೆ ಪೂರ್ವಸಿದ್ಧತಾ ಸಭೆಯಾಗಿದೆ. ಪೂರ್ವಸಿದ್ಧತಾ ಸಭೆಯಲ್ಲಿ ಲಡಾಖ್‌ನಲ್ಲಿನ ಪರಿಸ್ಥಿತಿ ಮತ್ತು ಅಕ್ಟೋಬರ್ 7 ರ ಮಾತುಕತೆಯ ಕಾರ್ಯಸೂಚಿಯನ್ನು ಚರ್ಚಿಸಲಾಗುವುದು ಎಂದು KDA ನಾಯಕ ಸಜ್ಜದ್ ಕಾರ್ಗಿಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ(The New Indian Express) ತಿಳಿಸಿದ್ದಾರೆ.

ಲೇಹ್ ಮತ್ತು ಕಾರ್ಗಿಲ್‌ನ ರಾಜಕೀಯ, ಸಾಮಾಜಿಕ, ವ್ಯಾಪಾರ ಮತ್ತು ಧಾರ್ಮಿಕ ಗುಂಪುಗಳ ಒಕ್ಕೂಟವಾದ LAB ಮತ್ತು KDA, ಅಕ್ಟೋಬರ್ 7 ರ ಮಾತುಕತೆಗೆ ರಾಜ್ಯ ಸ್ಥಾನಮಾನ ಮತ್ತು ಆರನೇ ವೇಳಾಪಟ್ಟಿಯ ಸ್ಥಾನಮಾನವನ್ನು ಕಾರ್ಯಸೂಚಿಯಲ್ಲಿ ಇಡಬೇಕೆಂದು ಒತ್ತಾಯಿಸಿವೆ.

ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ, ಲೇಹ್ ನಿವಾಸಿಗಳು ಆರಂಭದಲ್ಲಿ ಈ ಕ್ರಮವನ್ನು ಸ್ವಾಗತಿಸಿದರು, ಆದರೆ ಕಾರ್ಗಿಲ್‌ನಲ್ಲಿರುವವರು ಅದನ್ನು ವಿರೋಧಿಸಿದರು. ನಂತರ, ಲೇಹ್‌ನ ಗುಂಪುಗಳು ಕಾರ್ಗಿಲ್‌ನ ರಾಜಕೀಯ, ಧಾರ್ಮಿಕ ಮತ್ತು ವ್ಯಾಪಾರ ನಾಯಕರೊಂದಿಗೆ ಕೈಜೋಡಿಸಿ ಲಡಾಖ್‌ನ ಗುರುತು ಮತ್ತು ದುರ್ಬಲ ಪರಿಸರವನ್ನು ಕಾಪಾಡುವ ಗುರಿಯನ್ನು ಹೊಂದಿರುವ ನಾಲ್ಕು ಪ್ರಮುಖ ಬೇಡಿಕೆಗಳಿಗಾಗಿ ಜಂಟಿಯಾಗಿ ಆಂದೋಲನ ನಡೆಸಿದರು.

ಅಂದಿನಿಂದ LAB ಮತ್ತು KDA ಲಡಾಖ್, ಜಮ್ಮು ಮತ್ತು ದೆಹಲಿಯಲ್ಲಿ ಸರಣಿ ಪ್ರತಿಭಟನೆಗಳು ಮತ್ತು ಧರಣಿಗಳನ್ನು ನಡೆಸಿದ್ದು, ಕೇಂದ್ರದ ಮೇಲೆ ತಮ್ಮ ನಾಲ್ಕು ಅಂಶಗಳ ಕಾರ್ಯಸೂಚಿಯನ್ನು ಈಡೇರಿಸುವಂತೆ ಒತ್ತಾಯಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com