
ಭಿಕಾಂಗಾವ್ (ಮಧ್ಯಪ್ರದೇಶ): ಗರ್ಬಾ ನೃತ್ಯ ಮಾಡುವಾಗ ಏಕಾಏಕಿ ಕುಸಿದು ಬಿದ್ದು 19 ವರ್ಷದ ವಿವಾಹಿತ ಮಹಿಳೆ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ. ದುರ್ಗಾ ದೇವಸ್ಥಾನದಲ್ಲಿ ಗರ್ಬಾ ನೃತ್ಯ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿ ಮಹಿಳೆ ಸಾವನ್ನಪ್ಪಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದೇವಸ್ಥಾನದಲ್ಲಿ ತನ್ನ ಪತಿಯೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ಮಹಿಳೆ ಏಕಾಏಕಿ ಪ್ರಜ್ಞಾಹೀನಳಾಗಿ ನೆಲದ ಮೇಲೆ ಕುಸಿದು ಬಿದ್ದಿದ್ದಾಳೆ. ಇದಾದ ಕೆಲವೇ ಸೆಕೆಂಡುಗಳಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿರುವುದು ವಿಡಿಯೋದಲ್ಲಿದೆ.
ಭೀಕಂಗಾವ್ ತೆಹಸಿಲ್ ಪಲಾಸಿ ಗ್ರಾಮದ ದುರ್ಗಾ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ನಾಲ್ಕು ತಿಂಗಳ ಹಿಂದೆಯಷ್ಟೇ ಮೇ ತಿಂಗಳಲ್ಲಿ ವಿವಾಹವಾಗಿದ್ದ ದಂಪತಿ, ಒಟ್ಟಿಗೆ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿರುವಾಗ ಈ ದುರಂತ ನಡೆದಿದೆ.
ಆಕೆಯ ಹಠಾತ್ ಹೃದಯ ಸ್ತಂಭನಕ್ಕೆ ನಿಖರವಾದ ಕಾರಣವನ್ನು ವೈದ್ಯಕೀಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.ಯಾವುದೇ ವಯಸ್ಸಿನವರಿಗೂ ಹೃದಯಾಘಾತ ಸಂಭವಿಸಬಹುದು.
ದೈಹಿಕ ಚಟುವಟಿಕೆಯು ಕೆಲವೊಮ್ಮೆ ಎಷ್ಟೋ ಜನರಿಗೆ ಹೃದಯ ಸಂಬಂಧಿತ ಕಾಯಿಲೆ ಇದ್ದರೂ ತಪಾಸಣೆ ಮಾಡಿಸಿಕೊಂಡಿರುವುದಿಲ್ಲ. ಇಂಹವರು ಸ್ವಲ್ಪ ಹೆಚ್ಚಿನ ದೈಹಿಕ ಚಟವಟಿಕೆಗಳಲ್ಲಿ ತೊಡಗಿದಾಗ ಹೃದಯಾಘಾತವು ಉಂಟಾಗಬಹುದು ಎಂದು ವೈದ್ಯರು ಹೇಳುತ್ತಾರೆ.
Advertisement