'ಸಿಂಗಂ' ಅಣ್ಣಾಮಲೈಗೆ ಟಿಕೆಟ್ ಮಿಸ್ ಆಗಿದ್ದಾ, ಸ್ಪರ್ಧೆಗೆ ಹಿಂದೇಟು ಹಾಕಿದ್ದಾ ? ಸಂಸದ ತೇಜಸ್ವಿ ಸೂರ್ಯ ಏನೆಂದರು?

ಅಣ್ಣಾಮಲೈ ಸ್ಪರ್ಧಿಸುವುದಿಲ್ಲ ಎಂಬುದು ಸ್ಪಷ್ಟವಾದ ನಂತರ, ಎಐಎಡಿಎಂಕೆ 27 ಕ್ಷೇತ್ರಗಳನ್ನು ಹಂಚಿಕೆ ಮಾಡಿ ಗುರುತಿಸಿದ 10 ದಿನಗಳ ಬಳಿಕ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು.
K Annamalai and MP Tejasvi Surya (File photo)
ಕೆ ಅಣ್ಣಾಮಲೈ, ಸಂಸದ ತೇಜಸ್ವಿ ಸೂರ್ಯ(ಸಂಗ್ರಹ ಚಿತ್ರ)
Updated on

ಚೆನ್ನೈ: ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ 27 ಅಭ್ಯರ್ಥಿಗಳನ್ನು ಅಂತಿಮಗೊಳಿಸಲು 10 ದಿನಗಳ ಕಾಲ ತೆಗೆದುಕೊಂಡಿದ್ದು, ತ್ವರಿತ ನಿರ್ಧಾರಗಳಿಗೆ ಹೆಸರಾಗಿರುವ ಪಕ್ಷಕ್ಕೆ ಇದು ಅಪರೂಪದ ವಿಳಂಬವಾಗಿದೆ.

ಪಕ್ಷದ ಹೈಕಮಾಂಡ್, ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವುದನ್ನು ವಿಳಂಬಗೊಳಿಸಿದ್ದಕ್ಕೆ ಪ್ರಮುಖ ಕಾರಣ, ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಈ ಬಾರಿ ಸ್ಪರ್ಧಿಸಲು ಒಪ್ಪಿಸುವ ಪ್ರಯತ್ನಗಳಾಗಿದ್ದವು. ಆದರೆ, ಅಣ್ಣಾಮಲೈ ತಮ್ಮ ನಿರ್ಧಾರದಲ್ಲಿ ದೃಢವಾಗಿ ನಿಂತು ಸ್ಪರ್ಧಿಸಲು ನಿರಾಕರಿಸಿದ್ದು, ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಭರವಸೆ ನೀಡಿದರು.

ಅಣ್ಣಾಮಲೈ ಸ್ಪರ್ಧಿಸುವುದಿಲ್ಲ ಎಂಬುದು ಸ್ಪಷ್ಟವಾದ ನಂತರ, ಎಐಎಡಿಎಂಕೆ 27 ಕ್ಷೇತ್ರಗಳನ್ನು ಹಂಚಿಕೆ ಮಾಡಿ ಗುರುತಿಸಿದ 10 ದಿನಗಳ ಬಳಿಕ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು.

ಅಣ್ಣಾಮಲೈ ಮಾತ್ರವಲ್ಲದೆ, ಎಸ್.ಜಿ. ಸೂರ್ಯಹ್, ವಿನೋಜ್ ಪಿ. ಸೆಲ್ವಂ, ಅಶ್ವತ್ಥಾಮನ್ ಮುಂತಾದ ಯುವ ನಾಯಕರ ಹೆಸರುಗಳು ಪಟ್ಟಿಯಲ್ಲಿ ಕಾಣಿಸದೇ, ಹಿರಿಯ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ನಾಲ್ವರು ಪ್ರಸ್ತುತ ಶಾಸಕರಲ್ಲಿ ಮೂವರಿಗೆ ಟಿಕೆಟ್ ಕೊಡಲಾಗಿದೆ. ಅವರಲ್ಲಿ ಇಬ್ಬರಿಗೆ ಕ್ಷೇತ್ರ ಬದಲಾವಣೆ ಮಾಡಲಾಗಿದೆ. ನಾಲ್ಕನೇ ಶಾಸಕರ ಸೊಸೆ ಮೋಡಕುರುಚಿ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ.

ಅಣ್ಣಾಮಲೈ ಅವರು ಎಐಎಡಿಎಂಕೆ ಜೊತೆಗೆ ಮೈತ್ರಿ ಸುಗಮಗೊಳಿಸಲು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅವರು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರೊಂದಿಗೆ ಕೆಲವು ಭಿನ್ನಾಭಿಪ್ರಾಯ ಹೊಂದಿದ್ದು, ಇಬ್ಬರ ನಡುವಿನ ಸಂಬಂಧ ಸುಗಮವಾಗಿಲ್ಲ.

K Annamalai and MP Tejasvi Surya (File photo)
'ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಾನೇ ನಿರ್ಧರಿಸಿದೆ': ಟಿಕೆಟ್ ನಿರಾಕರಣೆ ವದಂತಿಗೆ ಅಣ್ಣಾಮಲೈ ಸ್ಪಷ್ಟನೆ

ಸಿಂಗನಲ್ಲೂರು ಕ್ಷೇತ್ರವನ್ನು ಎಐಎಡಿಎಂಕೆ ನೀಡದಿರುವುದು, ಅಣ್ಣಾಮಲೈ ಸ್ಪರ್ಧಿಸಿ ಆ ಪ್ರದೇಶದಲ್ಲಿ ಪಕ್ಷಕ್ಕೆ ಸವಾಲಾಗದಂತೆ ತಡೆಯುವ ಉದ್ದೇಶದಿಂದ ಎನ್ನಲಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕೊಯಂಬತ್ತೂರು ಕ್ಷೇತ್ರದಲ್ಲಿ ಅಣ್ಣಾಮಲೈ ರನ್ನರ್-ಅಪ್ ಆಗಿ, ಎಐಎಡಿಎಂಕೆಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು.

ಅಣ್ಣಾಮಲೈ ಅವರು ಹಿಂದೆ ಬಿಜೆಪಿ ಸ್ವತಂತ್ರವಾಗಿ ಕೆಲವು ಚುನಾವಣೆಗಳಲ್ಲಿ ಸ್ಪರ್ಧಿಸಬೇಕು ಎಂದು ಸಾರ್ವಜನಿಕವಾಗಿ ಹೇಳಿದ್ದರು. ಅವರು ಪುದುಕ್ಕೋಟೈ ಜಿಲ್ಲೆಯಲ್ಲಿ ಪಕ್ಷದ ಬಲ ಕಡಿಮೆ ಇದ್ದರೂ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿರುವುದನ್ನು ಪ್ರಶ್ನಿಸಿದ್ದಾಗಿ ತಿಳಿದುಬಂದಿದೆ. ಪಶ್ಚಿಮ ತಮಿಳುನಾಡಿನಲ್ಲಿ ಪಕ್ಷದ ಬಲವಿದ್ದರೂ ಅಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಪಡೆಯಲು ಪ್ರಯತ್ನಿಸದಿರುವುದಕ್ಕೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಮಾರ್ಚ್ 25ರಂದು ಕ್ಷೇತ್ರ ಹಂಚಿಕೆ ಪ್ರಕ್ರಿಯೆ ತ್ವರಿತವಾಗಿ ನಡೆದಿದ್ದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿ, ಒಂದು ದಿನದಲ್ಲೇ ಕ್ಷೇತ್ರಗಳನ್ನು ಅಂತಿಮಗೊಳಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾಗಿ ಮೂಲಗಳು ತಿಳಿಸಿವೆ. ಎಐಎಡಿಎಂಕೆ ಮೊದಲೇ ಪಿಎಂಕೆಗಾಗಿ ಕೆಲವು ಕ್ಷೇತ್ರಗಳನ್ನು ಗುರುತಿಸಿ, ಅವುಗಳ ಮೇಲೆ ಬಿಜೆಪಿ ಹಕ್ಕು ಕೇಳಬಾರದು ಎಂದು ಹೇಳಿದ ಹಿನ್ನೆಲೆ, ಬಿಜೆಪಿಗೆ ಇಷ್ಟದ ಕ್ಷೇತ್ರಗಳು ಸಿಗಲಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.

ಹಂಚಿಕೆಗೊಂಡ ಕ್ಷೇತ್ರಗಳ ಬಗ್ಗೆ ಬಿಜೆಪಿ ಬೆಂಬಲಿಗರೊಳಗೂ ಆಕ್ರೋಶ ವ್ಯಕ್ತವಾಗಿದ್ದು, ಕೆಲವು ಕ್ಷೇತ್ರಗಳನ್ನು ಬದಲಾಯಿಸಲು ಬಿಜೆಪಿ ಎಐಎಡಿಎಂಕೆಯನ್ನು ಸಂಪರ್ಕಿಸಿದರೂ, ಆ ಮನವಿ ತಿರಸ್ಕರಿಸಲಾಗಿದೆ.

ಪಕ್ಷದ ಹಲವಾರು ನಾಯಕರು ಅಣ್ಣಾಮಲೈ ಅವರಿಗೆ ಸ್ಪರ್ಧಿಸಲು ಮನವಿ ಮಾಡಿದರೂ, ಅವರು ತಮ್ಮ ನಿರ್ಧಾರದಲ್ಲಿ ಸ್ಥಿರವಾಗಿದ್ದರು. ಅಣ್ಣಾಮಲೈ ಸ್ಪರ್ಧಿಸಿದರೆ ಪಕ್ಷಕ್ಕೆ ಬೆಂಬಲಿಗರ ನಡುವೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿತ್ತು ಮತ್ತು ಎನ್‌ಡಿಎ ಒಳಗಿನ ಏಕತೆಗೂ ಸಂದೇಶ ಸಿಗುತ್ತಿತ್ತು ಎಂದು ಮೂಲಗಳ ಅಭಿಪ್ರಾಯವಾಗಿದೆ.

ಸ್ನೇಹಿತ ತೇಜಸ್ವಿ ಸೂರ್ಯ ಪ್ರತಿಕ್ರಿಯೆ

ಅಣ್ಣಾಮಲೈಯವರ ಬಗ್ಗೆ ತನ್ನದೇ ವ್ಯಾಖ್ಯಾನ ನೀಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ. ಅಣ್ಣಾಮಲೈ ಅವರನ್ನು ಸೇರಿಸದಿದ್ದರೂ, ಅವರನ್ನು ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕ ಎಂದು ವರ್ಣಿಸಿದರು.

ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ ಅವರು, ಅಣ್ಣಾಮಲೈ ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಎಲ್ಲಾ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಜವಾಬ್ದಾರಿಯನ್ನು ಪಕ್ಷ ನೀಡಿದೆ ಎಂದು ಹೇಳಿದರು.

ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಮಾತ್ರವಲ್ಲ, ದೇಶದಾದ್ಯಂತ ಅಪಾರ ಬೆಂಬಲ ಹೊಂದಿರುವ ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕರು. ಅವರಿಗೆ ತಮಿಳುನಾಡಿನ ಎಲ್ಲಾ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಹೊಣೆಗಾರಿಕೆ ನೀಡಲಾಗಿದೆ. ಇಂದಿಗೂ ಅವರು ಕೇರಳದಲ್ಲಿದ್ದಾರೆ, ಅಲ್ಲಿ ಕೂಡ ಅವರಿಗೆ ಉತ್ತಮ ಬೆಂಬಲವಿದೆ. ಪುಡುಚೇರಿಯಲ್ಲಿಯೂ ಅವರು ಪ್ರಚಾರ ನಡೆಸುತ್ತಿದ್ದಾರೆ, ಅಲ್ಲಿ ಜನರು ಅವರನ್ನು ಬಹಳ ಮೆಚ್ಚುತ್ತಾರೆ.

ಅಣ್ಣಾಮಲೈ ಅವರ ಜನಪ್ರಿಯತೆ ಮತ್ತು ರಾಜ್ಯಾದ್ಯಂತ ನಡೆಯುತ್ತಿರುವ ಅವರ ಪ್ರಚಾರದಿಂದ ಬಿಜೆಪಿ ಅಭ್ಯರ್ಥಿಗಳು ರಾಜ್ಯದಾದ್ಯಂತ ಗೆಲುವು ಸಾಧಿಸುತ್ತಾರೆ ಎಂಬುದರಲ್ಲಿ ನನಗೆ ತುಂಬಾ ವಿಶ್ವಾಸ ಇದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com