ISI, ತೆಹ್ರೀಕ್-ಇ- ತಾಲಿಬಾನ್ ಹಿಂದೂಸ್ತಾನ್ ಜೊತೆಗೆ ನಂಟು: ಡೆಹ್ರಾಡೂನ್ ವ್ಯಕ್ತಿಯ ಬಂಧನ!

ವಾರಗಳ ತೀವ್ರ ನಿಗಾವಣೆ ಮತ್ತು ಗುಪ್ತಚರ ಮಾಹಿತಿ ನಂತರ ಈ ಬಂಧನವಾಗಿದೆ. ಪಾಕಿಸ್ತಾನಿ ಗುಪ್ತಚರದವರು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮತಾಂಧ ಯುವಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಸುಳಿವುಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Dehradun man held
ಬಂಧಿತ ಆರೋಪಿಯೊಂದಿಗೆ ಡೆಹ್ರಾಡೂನ್ ಪೊಲೀಸರು
Updated on

ಡೆಹ್ರಾಡೂನ್: ಮಹತ್ವದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯೊಂದರಲ್ಲಿ ಉತ್ತರಾಖಂಡದ ವಿಶೇಷ ಕಾರ್ಯಪಡೆ (STF) ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ 29 ವರ್ಷದ ವಿಕ್ರಾಂತ್ ಕಶ್ಯಪ್ ಎಂಬ ವ್ಯಕ್ತಿಯನ್ನು ಬಂಧಿಸಿದೆ. ಈತ ರಾಜ್ಯದಲ್ಲಿ ಭಯೋತ್ಪಾದಕ ಸಂಘಟನೆ ‘ತೆಹ್ರೀಕ್-ಎ-ತಾಲಿಬಾನ್ ಹಿಂದೂಸ್ತಾನ್’ (TTH)ಗೆ ನೆಲೆ ಒದಗಿಸಲು ಸಂಚು ರೂಪಿಸಿದ ಎನ್ನಲಾಗಿದೆ.

ವಾರಗಳ ತೀವ್ರ ನಿಗಾವಣೆ ಮತ್ತು ಗುಪ್ತಚರ ಮಾಹಿತಿ ನಂತರ ಈ ಬಂಧನವಾಗಿದೆ. ಪಾಕಿಸ್ತಾನಿ ಗುಪ್ತಚರದವರು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮತಾಂಧ ಯುವಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಸುಳಿವುಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) STF ಅಜಯ್ ಸಿಂಗ್ ಹೇಳಿದ್ದಾರೆ.

"ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಭಯೋತ್ಪಾದಕ ಸಂಘಟನೆಗಳು ದುರ್ಬಲ ಯುವಕರನ್ನು ಗುರಿಯನ್ನಾಗಿಸುತ್ತಿವೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತರಲು ಸ್ಲೀಪರ್ ಸೆಲ್‌ಗಳಾಗಿ ಕಾರ್ಯನಿರ್ವಹಿಸಲು ಅವರನ್ನು ರೂಪಿಸುತ್ತಿವೆ ಎಂದು ಅಜಯ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿ ಕಶ್ಯಪ್ ಪ್ರೇಮ್‌ನಗರದ ಝಜ್ರಾ ಪ್ರದೇಶದ ನಿವಾಸಿಯಾಗಿದ್ದು, ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಪ್ರಭಾವಕ್ಕೆ ಒಳಗಾಗಿದ್ದನು. ಈತ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ಅಭಿಮಾನಿಯಾಗಿದ್ದು, ಆತನ ಹತ್ಯೆಯಿಂದ ತೀವ್ರ ನೊಂದಿದ್ದ ಎಂಬುದು ತಿಳಿದುಬಂದಿದೆ.

ಇದನ್ನು ದುರ್ಬಳಕೆ ಮಾಡಿಕೊಂಡು, ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಪ್ರಚೋದನಕಾರಿ ರೀಲ್‌ಗಳು ಮತ್ತು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಅಂತಿಮವಾಗಿ ಆತನನ್ನು WhatsApp ಮತ್ತು Instagram ಮೂಲಕ ನೇರ ಸಂಪರ್ಕಕ್ಕೆ ಬಂದಿದ್ದರು. ಪೊಲೀಸ್ ಹೆಡ್‌ಕ್ವಾರ್ಟರ್ಸ್ ಮತ್ತು ಇತರ ಪ್ರಮುಖ ಸರ್ಕಾರಿ ಕಟ್ಟಡಗಳು ಸೇರಿದಂತೆ ಡೆಹ್ರಾಡೂನ್‌ನ ಸೂಕ್ಷ್ಮ ಸ್ಥಳಗಳ ಮೇಲೆ ನಿಗಾ ವಹಿಸಲು ಕಶ್ಯಪ್ ಅವರಿಗೆ ಸೂಚಿಸಲಾಯಿತು.

Dehradun man held
ಭಾರತದಲ್ಲಿ ದಾಳಿಗೆ ಸಂಚು: ಪಾಕ್‌ನ ISI, ಬಾಂಗ್ಲಾದೊಂದಿಗೆ ಸಂಪರ್ಕ ಹೊಂದಿದ್ದ 8 ಮಂದಿ ಬಂಧನ

‘ಗುಜ್ಜರ್’ ಎಂಬ ವ್ಯಕ್ತಿ ತನಗೆ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಹಣವನ್ನು ಒದಗಿಸುವುದಾಗಿ ಭರವಸೆ ನೀಡಿ, ಈ ಹೈ-ಸೆಕ್ಯುರಿಟಿ ವಲಯಗಳನ್ನು ಚಿತ್ರೀಕರಿಸುವಂತೆ ಆಪರೇಟರ್ ಗಳು ಒತ್ತಡ ಹೇರಿದ್ದರು ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನಿಂದ ಕಶ್ಯಪ್‌ ನಿಂದ ಒಂದು 32 ಬೋರ್ ಪಿಸ್ತೂಲ್, ಏಳು ಜೀವಂತ ಕಾಟ್ರಿಡ್ಜ್‌ಗಳು, ಸ್ಪ್ರೇ ಪೈಂಟ್ ಕ್ಯಾನ್ ಮತ್ತು ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದೆ. ಈ ಹಿಂದೆ ಪಂಜಾಬ್ ನ ನಭಾದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಸದ್ಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com