'ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಇದು ಸೂಕ್ತ ಸಮಯ': ಸಂಸತ್ ಅಧಿವೇಶನ ಮುನ್ನ ಸರ್ವಪಕ್ಷಗಳಿಗೆ ಪ್ರಧಾನಮಂತ್ರಿ ಮೋದಿ ಕರೆ

ಸಂಸತ್ತಿನ ಎಲ್ಲಾ ಪಕ್ಷಗಳ ಸದನ ಸದಸ್ಯರಿಗೆ ಬರೆದ ಪತ್ರದಲ್ಲಿ, ಸಂವಿಧಾನ ತಿದ್ದುಪಡಿ ಅಂಗೀಕರಿಸಲು ಎಲ್ಲರೂ “ಒಂದೇ ಧ್ವನಿಯಲ್ಲಿ” ಒಗ್ಗೂಡಬೇಕು ಎಂದು ಒತ್ತಾಯಿಸಿದ್ದಾರೆ.
PM Narendra Modi
ಪ್ರಧಾನ ಮಂತ್ರಿ ನರೇಂದ್ರ ಮೋದಿ
Updated on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂದಿನ ಗುರುವಾರ ನಡೆಯಲಿರುವ ಸಂಸತ್ ಅಧಿವೇಶನಕ್ಕೆ ಮುನ್ನ ಎಲ್ಲಾ ಪಕ್ಷಗಳಿಗೆ ಪತ್ರ ಬರೆದು, ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ಜಾರಿಗೆ ಕಾನೂನು ಅಂಗೀಕರಿಸಲು ಅವರ ಬೆಂಬಲವನ್ನು ಕೋರಿದ್ದಾರೆ. ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ದೀರ್ಘಕಾಲದ ಆಸೆಯನ್ನು ಈಗ ವಾಸ್ತವವಾಗಿಸುವ ಸರಿಯಾದ ಸಮಯ ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಸತ್ತಿನ ಎಲ್ಲಾ ಪಕ್ಷಗಳ ಸದನ ಸದಸ್ಯರಿಗೆ ಬರೆದ ಪತ್ರದಲ್ಲಿ, ಸಂವಿಧಾನ ತಿದ್ದುಪಡಿ ಅಂಗೀಕರಿಸಲು ಎಲ್ಲರೂ “ಒಂದೇ ಧ್ವನಿಯಲ್ಲಿ” ಒಗ್ಗೂಡಬೇಕು ಎಂದು ಒತ್ತಾಯಿಸಿದ್ದಾರೆ. ಇದು ಮಹಿಳೆಯರು ಮತ್ತು ಭವಿಷ್ಯದ ಪೀಳಿಗೆಯ ಮೇಲಿನ ಜವಾಬ್ದಾರಿಯನ್ನು ತೋರಿಸುವ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನವು ಗುರುವಾರ ಮರು ಆರಂಭವಾಗಲಿದ್ದು, ಕ್ಷೇತ್ರ ಮರುಹಂಚಿಕೆ (Delimitation) ನಂತರ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಅಂಗೀಕರಿಸಲು ಸಭೆ ನಡೆಯಲಿದೆ.

ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಹೆಚ್ಚಿನ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಉತ್ತಮ. ಇದು ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಗಿಂತ ಮೇಲಿನ ವಿಷಯವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಬಹುಕಾಲದಿಂದ ಮಹಿಳೆಯರ ಪ್ರತಿನಿಧಿತ್ವ ಹೆಚ್ಚಿಸುವ ಅಗತ್ಯವನ್ನು ಒಪ್ಪಿಕೊಂಡಿರುವುದರಿಂದ, ಈಗ ಅದನ್ನು ಸಾಕಾರಗೊಳಿಸುವ ಸರಿಯಾದ ಸಮಯ ಎಂದು ಮೋದಿ ಹೇಳಿದ್ದಾರೆ.

‘ನಾರಿ ಶಕ್ತಿ ವಂದನ್ ಅಧಿನಿಯಮ’ ಜಾರಿಗೆ ತಮ್ಮ ಕೊಡುಗೆ ನೀಡುವ ಸಂಸದರು ಈ ಐತಿಹಾಸಿಕ ಪ್ರಯತ್ನದ ಭಾಗವಾಗಿರುವ ಹೆಮ್ಮೆಯನ್ನು ಸದಾ ಅನುಭವಿಸುತ್ತಾರೆ. ಈ ಅವಕಾಶವನ್ನು ನಾವು ಕೈಚೆಲ್ಲಬಾರದು ಎಂದರು.

PM Narendra Modi
2032-33 ವೇಳೆಗೆ ಲೋಕಸಭೆ-ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ: ಹೆಚ್.ಡಿ ಕುಮಾರಸ್ವಾಮಿ

ಈ ವಿಶೇಷ ಸಭೆ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅವಕಾಶವಾಗಿದೆ ಎಂದು ಅವರು ಒತ್ತಿ ಹೇಳಿದರು. 2023ರ ಸೆಪ್ಟೆಂಬರ್‌ನಲ್ಲಿ ಮಸೂದೆ ಅಂಗೀಕರಿಸಿದಾಗ, 33 ಶೇಕಡಾ ಮೀಸಲಾತಿಯನ್ನು ಸಾಧ್ಯವಾದಷ್ಟು ಬೇಗ ಜಾರಿಗೆ ತರಬೇಕೆಂಬ ಒಮ್ಮತ ಉಂಟಾಯಿತು.

ಈ ವಿಷಯದ ಕುರಿತು ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ ಮತ್ತು ಸಂವಿಧಾನ ಸಂಬಂಧಿತ ವಿಷಯಗಳಲ್ಲಿ ಪರಿಣತಿ ಹೊಂದಿರುವವರಿಂದ ಸಲಹೆಗಳನ್ನು ಪಡೆಯಲಾಗಿದೆ. ರಾಜಕೀಯ ಪಕ್ಷಗಳೊಂದಿಗೆ ಸಂವಾದವೂ ನಡೆದಿದ್ದು, ವ್ಯಾಪಕ ಚರ್ಚೆಗಳ ನಂತರ ಮಹಿಳಾ ಮೀಸಲಾತಿಯನ್ನು ಸಂಪೂರ್ಣ ಅರ್ಥದಲ್ಲಿ ಜಾರಿಗೆ ತರುವ ಸಮಯ ಬಂದಿದೆ ಎಂಬ ನಿರ್ಣಯಕ್ಕೆ ಬಂದಿದ್ದೇವೆ ಎಂದು ಹೇಳಿದರು.

PM Narendra Modi
'ಮಹಿಳಾ ಮೀಸಲಾತಿ ಬಂದರೆ ನನ್ನ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ; ಶಾಸಕರು ಫಾರಿನ್ ಟ್ರಿಪ್ ಹೋದ್ರೆ ಏನು ತಪ್ಪು'?: ಕೆ.ಎನ್ ರಾಜಣ್ಣ

2029ರ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಮಹಿಳಾ ಮೀಸಲಾತಿಯೊಂದಿಗೆ ನಡೆಸುವುದು ಅತ್ಯವಶ್ಯಕ. ಇದರಿಂದ ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಹೊಸ ಚೈತನ್ಯ ದೊರೆಯುತ್ತದೆ ಮತ್ತು ಸಾರ್ವಜನಿಕ ನಂಬಿಕೆ ಬಲಗೊಳ್ಳುತ್ತದೆ. ಆಡಳಿತದಲ್ಲಿ ಹೆಚ್ಚಿನ ಭಾಗವಹಿಸುವಿಕೆ ಮತ್ತು ಪ್ರತಿನಿಧಿತ್ವಕ್ಕೂ ಇದು ನೆರವಾಗುತ್ತದೆ ಎಂದು ಅವರು ಹೇಳಿದರು.

ಮಹಿಳೆಯರಿಗೆ ಅವಕಾಶ ದೊರೆಯುವಾಗ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮತ್ತು ನಾಯಕತ್ವ ವಹಿಸುವಾಗ ಮಾತ್ರ ಸಮಾಜ ಪ್ರಗತಿ ಕಾಣುತ್ತದೆ. ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ದೃಷ್ಟಿಯನ್ನು ಸಾಧಿಸಲು ಮಹಿಳೆಯರ ಸಕ್ರಿಯ ಪಾತ್ರ ಅತ್ಯಗತ್ಯ ಎಂದರು.

ಇಂದು ಸಾರ್ವಜನಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ನಾವು ನೋಡುತ್ತಿದ್ದೇವೆ. ಅಂತರಿಕ್ಷದಿಂದ ಕ್ರೀಡೆಗಳವರೆಗೆ, ಸೈನ್ಯದಿಂದ ಸ್ಟಾರ್ಟ್‌ಅಪ್‌ಗಳವರೆಗೆ, ಭಾರತದ ಪುತ್ರಿಯರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ ಎಂದು ಹೇಳಿದರು.

ಮಹಿಳಾ ಮೀಸಲಾತಿ ವಿಚಾರ ದಶಕಗಳ ಕಾಲ ಚರ್ಚೆಯಲ್ಲಿದ್ದು, 2023ರಲ್ಲಿ ದೇಶದ ಮಹಿಳೆಯರಿಗೆ ನೀಡಿದ ವಾಗ್ದಾನವನ್ನು ನೆರವೇರಿಸಲು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ. ಮಹಿಳೆಯರು ನಮ್ಮ ಜನಸಂಖ್ಯೆಯ ಅರ್ಧಭಾಗವನ್ನು ಪ್ರತಿನಿಧಿಸುತ್ತಾರೆ. ರಾಜಕೀಯ ಕ್ಷೇತ್ರದಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುವತ್ತ ಇದು ಮಹತ್ವದ ಹೆಜ್ಜೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com