19ನೇ ವಯಸ್ಸಿಗೆ 180 ಅಪ್ರಾಪ್ತ ಬಾಲಕಿಯರ ಜೊತೆ ಸೆಕ್ಸ್; 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೊ Viral: ತನ್ವೀರ್ ಅಹ್ಮದ್ ಯಾರು?

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಹಲವಾರು ಅಪ್ರಾಪ್ತ ಬಾಲಕಿಯರ ಆಕ್ಷೇಪಾರ್ಹ ಫೋಟೋಗಳು ಮತ್ತು ಅಶ್ಲೀಲ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಆರೋಪದ ಮೇಲೆ 19 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಆರೋಪಿ ಅಹ್ಮದ್ ತನ್ವೀರ್
ಆರೋಪಿ ಅಹ್ಮದ್ ತನ್ವೀರ್
Updated on: 

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಹಲವಾರು ಅಪ್ರಾಪ್ತ ಬಾಲಕಿಯರ ಆಕ್ಷೇಪಾರ್ಹ ಫೋಟೋಗಳು ಮತ್ತು ಅಶ್ಲೀಲ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಆರೋಪದ ಮೇಲೆ 19 ವರ್ಷದ ಯುವಕನನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು 350 ಅಶ್ಲೀಲ ವೀಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತ 180 ಅಪ್ರಾಪ್ತ ಬಾಲಕಿಯರನ್ನು ಪಠಾಯಿಸಿ ಅವರೊಂದಿಗೆ ಸೆಕ್ಸ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ರಾಜ್ಯಸಭಾ ಸದಸ್ಯ ಅನಿಲ್ ಬೋಂಡೆ, ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (SIT) ಮೂಲಕ ಈ ವಿಷಯವನ್ನು ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ತನ್ವೀರ್ ಅಹ್ಮದ್ ಯಾರು?

ಆರೋಪಿಯನ್ನು ಅಯಾನ್ ಅಹ್ಮದ್ ಅಲಿಯಾಸ್ ತನ್ವೀರ್ ಅಹ್ಮದ್ ಎಂದು ಗುರುತಿಸಲಾಗಿದೆ. ಆತ ಅಮರಾವತಿ ಜಿಲ್ಲೆಯ ಪರತ್ವಾಡ ನಿವಾಸಿ. ಕೆಲವು ಹುಡುಗಿಯರ ಜೊತೆಗಿರುವ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಏಪ್ರಿಲ್ 11ರಂದು ಆತನನ್ನು ಬಂಧಿಸಲಾಯಿತು. ಬಲಿಪಶುಗಳಲ್ಲಿ ಹಲವರು ಅಪ್ರಾಪ್ತ ವಯಸ್ಕರು ಎಂದು ಪರತ್ವಾಡ ಪೊಲೀಸರು ತಿಳಿಸಿದ್ದಾರೆ. ಆರೋಪಿ ಸಂತ್ರಸ್ತೆಯರಿಗೆ ಆಮಿಷವೊಡ್ಡಿದ್ದು ಅವರ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಕ್ಸ್ ವೀಡಿಯೊಗಳನ್ನು ಮಾಡಿ ನಂತರ ಅವುಗಳನ್ನು ಸಾಮಾಜಿಕ ಮಾಧ್ಯಮಗಳಿಗೆ ಅಪ್‌ಲೋಡ್ ಮಾಡಿ ಸಂತ್ರಸ್ತೆಯ ಮಾನಹಾನಿ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಆರೋಪಿ ಅಹ್ಮದ್ ತನ್ವೀರ್
ಮುಸ್ಲಿಮರನ್ನು ದನಗಳಂತೆ ನಡೆಸಿಕೊಳ್ಳುತ್ತೀರಿ; 8 ಲಕ್ಷ ಮುಸಲ್ಮಾನರನ್ನು ಪೂರ್ವ ಪಾಕಿಸ್ತಾನಕ್ಕೆ ಗಡೀಪಾರು ಮಾಡಿದಾಗ ಎಲ್ಲಿದ್ರಿ: ಅಸಾದುದ್ದೀನ್ ಓವೈಸಿ ಕಿಡಿ

ಪೊಲೀಸರು ಆರೋಪಿಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ವಸ್ತುಗಳ ಮಾರಾಟ ಮತ್ತು ವಿತರಣೆ), ಪೋಕ್ಸೋ ಕಾಯ್ದೆಯ ಸೆಕ್ಷನ್ 8 ಮತ್ತು ಐಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ವಿಷಯದಲ್ಲಿ ಯಾವುದೇ ಸಂತ್ರಸ್ತರು ಪೊಲೀಸರನ್ನು ಸಂಪರ್ಕಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸಂತ್ರಸ್ತೆಯರು ಮತ್ತು ಅವರ ಕುಟುಂಬಗಳು ಮುಂದೆ ಬಂದು ಪ್ರಕರಣದಲ್ಲಿ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಅವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಅವರಿಗೆ ಭರವಸೆ ನೀಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com