ಜಾಗತಿಕ ಮಟ್ಟದಲ್ಲಿ AI ಮಾರುಕಟ್ಟೆಯಲ್ಲಿ ಟಾಪ್ 5 ದೇಶಗಳಲ್ಲಿ ಭಾರತ, ಬಳಕೆ ಮಾತ್ರ ನಗರ ಪ್ರದೇಶಕ್ಕೆ ಸೀಮಿತ

ವರದಿ ಪ್ರಕಾರ, ChatGPT ಪ್ಲಸ್ ಬಳಕೆದಾರರು ಬಳಸುವ ರೀಸನಿಂಗ್ ಟೋಕನ್‌ಗಳ ಆಧಾರದ ಮೇಲೆ, ವ್ಯಕ್ತಿಪರವಾಗಿ “ಥಿಂಕಿಂಗ್ ಕೆಪಾಬಿಲಿಟಿ” ಬಳಕೆಯಲ್ಲಿ ಭಾರತವು ಜಾಗತಿಕವಾಗಿ ಅಗ್ರ ಐದು ರಾಷ್ಟ್ರಗಳಲ್ಲಿ ಒಂದಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: OpenAI ಸಂಸ್ಥೆಯ ಇತ್ತೀಚಿನ “ಕೆಪಾಬಿಲಿಟಿ ಗ್ಯಾಪ್” ವರದಿ ಪ್ರಕಾರ, ಭಾರತವು ಪ್ರಗತಿಶೀಲ ಕೃತಕ ಬುದ್ಧಿಮತ್ತೆ (AI) ಬಳಕೆಯಲ್ಲಿ ವಿಶ್ವದ ಅಗ್ರ ಐದು ಮಾರುಕಟ್ಟೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆದರೆ, ಈ ಬಳಕೆ ಕೆಲವು ನಗರಗಳಲ್ಲಿ ಮಾತ್ರ ಹೆಚ್ಚು ಕೇಂದ್ರೀಕೃತವಾಗಿರುವುದಾಗಿ ಕಂಪನಿ ತಿಳಿಸಿದೆ.

ವರದಿ ಪ್ರಕಾರ, ChatGPT ಪ್ಲಸ್ ಬಳಕೆದಾರರು ಬಳಸುವ ರೀಸನಿಂಗ್ ಟೋಕನ್‌ಗಳ ಆಧಾರದ ಮೇಲೆ, ವ್ಯಕ್ತಿಪರವಾಗಿ “ಥಿಂಕಿಂಗ್ ಕೆಪಾಬಿಲಿಟಿ” ಬಳಕೆಯಲ್ಲಿ ಭಾರತವು ಜಾಗತಿಕವಾಗಿ ಅಗ್ರ ಐದು ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತೀಯ ಬಳಕೆದಾರರು ಕೋಡಿಂಗ್, ಡೇಟಾ ವಿಶ್ಲೇಷಣೆ ಮತ್ತು ಸಂಕೀರ್ಣ ಸಮಸ್ಯೆಗಳ ಪರಿಹಾರಕ್ಕಾಗಿ ಎಐ ಬಳಕೆಯನ್ನು ಹೆಚ್ಚಿಸುತ್ತಿದ್ದಾರೆ.

ಇದರ ಜೊತೆಗೆ, ಬಳಕೆಯಲ್ಲಿ ನಗರ-ಗ್ರಾಮ ಅಂತರವೂ ಕಂಡುಬಂದಿದೆ. ದೇಶದ ಒಟ್ಟು AI ಬಳಕೆದಾರರಲ್ಲಿ ಸುಮಾರು 50 ಶೇಕಡಾ ಮಂದಿ ಕೇವಲ ಟಾಪ್ 10 ನಗರಗಳಲ್ಲಿ ಮಾತ್ರ ನೆಲೆಸಿದ್ದಾರೆ, ಆದರೆ ಈ ನಗರಗಳ ಜನಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ 10 ಶೇಕಡಾಕ್ಕಿಂತ ಕಡಿಮೆಯಿದೆ. ಇದರಿಂದ, ಅಮೇರಿಕಾ, ಇಂಗ್ಲೆಂಡ್, ಬ್ರೆಜಿಲ್ ಮತ್ತು ಜರ್ಮನಿ ದೇಶಗಳಿಗಿಂತ ಭಾರತದಲ್ಲಿ AI ಬಳಕೆ ಸುಮಾರು ಮೂರು ಪಟ್ಟು ಹೆಚ್ಚು ಕೇಂದ್ರೀಕೃತವಾಗಿದೆ.

ದೆಹಲಿ, ಎನ್ ಸಿಆರ್ ಭಾಗದಲ್ಲಿ ದೇಶದಲ್ಲೇ ಅತಿ ಹೆಚ್ಚು ChatGPT ಬಳಕೆದಾರರ ಪ್ರಮಾಣವಿದ್ದು, ಬೆಂಗಳೂರು, ಹೈದರಾಬಾದ್, ದೆಹಲಿ ಮತ್ತು ಚೆನ್ನೈ ನಗರಗಳು ಸಹ ಪ್ರಮುಖ ಕೇಂದ್ರಗಳಾಗಿವೆ.

ಈಗ ಮುಖ್ಯ ಪ್ರಶ್ನೆಯೆಂದರೆ, ಎಐ ಪ್ರಯೋಜನಗಳು ಆರಂಭಿಕ ಬಳಕೆದಾರರು ಮತ್ತು ಪ್ರಮುಖ ನಗರಗಳನ್ನು ಮೀರಿದ್ದು, ದೇಶದ ಇತರ ಪ್ರದೇಶಗಳ ಜನರಿಗೆ ಎಷ್ಟು ವೇಗವಾಗಿ ತಲುಪುತ್ತವೆ ಎಂಬುದಾಗಿದೆ. ಈ ಅಂತರವನ್ನು ಕಡಿಮೆ ಮಾಡಲು ಪ್ರವೇಶವನ್ನು ವಿಸ್ತರಿಸುವುದು, ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ದೇಶದಾದ್ಯಂತ ಅರ್ಥಪೂರ್ಣ ಬಳಕೆಯನ್ನು ಉತ್ತೇಜಿಸುವುದು ಅಗತ್ಯ ಎಂದು Oliver Jay, ಇಂಟರ್‌ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಭಾರತವು ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಐ ಡೆವಲಪರ್ ಪರಿಸರ ವ್ಯವಸ್ಥೆಗಳಲ್ಲೂ ಒಂದಾಗಿದೆ. Codex ಬಳಕೆ ಫೆಬ್ರವರಿ 2026ರಲ್ಲಿ ಅದರ ಆಪ್ ಬಿಡುಗಡೆಗೊಂಡ ನಂತರ ಕೇವಲ ಎರಡು ವಾರಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ.

ಮುಖ್ಯ ನಗರಗಳಲ್ಲಿ ಡೇಟಾ ವಿಶ್ಲೇಷಣೆ ಬಳಕೆ ಹಿಂದುಳಿದ ನಗರಗಳಿಗಿಂತ 30 ಪಟ್ಟು ಹೆಚ್ಚಾಗಿದೆ. ಕೋಡಿಂಗ್ ಬಳಕೆ ನಾಲ್ಕು ಪಟ್ಟು ಹೆಚ್ಚು ಮತ್ತು ಕೋಡೆಕ್ಸ್ ಮೂಲಕ ಎಐ ಡೆವಲಪರ್ ಬಳಕೆ ಒಂಬತ್ತು ಪಟ್ಟು ಹೆಚ್ಚು ಇದೆ.

ಶಿಕ್ಷಣ ಮತ್ತು ಕಲಿಕೆಯ ಕ್ಷೇತ್ರದಲ್ಲಿ, ಅಸ್ಸಾಂ, ಒಡಿಶಾ, ಮಣಿಪುರ, ತ್ರಿಪುರಾ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಿಕೆ ಕಂಡುಬಂದಿದೆ. ಅಸ್ಸಾಂನಲ್ಲಿ ಒಟ್ಟು ಸಂದೇಶಗಳ 22 ಶೇಕಡಾ ಶಿಕ್ಷಣ ಮತ್ತು ಕಲಿಕೆಗೆ ಸಂಬಂಧಿಸಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಸುಮಾರು 20 ಶೇಕಡಾ ಹೆಚ್ಚಾಗಿದೆ.

ಆರೋಗ್ಯ ಮತ್ತು ಕ್ಷೇಮ ಕ್ಷೇತ್ರದಲ್ಲಿ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಚಂಡೀಗಢ, ಹಿಮಾಚಲ ಪ್ರದೇಶ ಮತ್ತು ಕೇರಳದಲ್ಲಿ ಹೆಚ್ಚಿನ ತೊಡಗಿಸಿಕೊಳ್ಳುವಿಕೆ ಕಂಡುಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 10ರಲ್ಲಿ ಒಂದು ಸಂದೇಶ ಆರೋಗ್ಯಕ್ಕೆ ಸಂಬಂಧಿಸಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ 32 ಶೇಕಡಾ ಹೆಚ್ಚಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com