Su-30 MKI ಯುದ್ಧ ವಿಮಾನದಲ್ಲಿ ಅಡಚಣೆ; ಹಾರಾಟ ಸೇವೆ ವ್ಯತ್ಯಯ: ಪುಣೆ ವಿಮಾನ ನಿಲ್ದಾಣ ರನ್‌ವೇ ಮರು ಕಾರ್ಯಾಚರಣೆ

ವಿಮಾನ ನಿಲ್ದಾಣ ಮತ್ತು ಪೊಲೀಸ್ ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಲ್ಯಾಂಡಿಂಗ್ ಗೇರ್ ವೈಫಲ್ಯದಿಂದ ವಿಮಾನವು ಕಠಿಣ ಲ್ಯಾಂಡಿಂಗ್ ಅನುಭವಿಸಿದೆ.
Pune airport
ಪುಣೆ ವಿಮಾನ ನಿಲ್ದಾಣ
Updated on

ವಿಮಾನ ಲ್ಯಾಂಡಿಂಗ್ ವೇಳೆ ಉಂಟಾದ ಅಡಚಣೆ ಘಟನೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದ ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಈಗ ಮರುಸ್ಥಾಪನೆಗೊಂಡು ಕಾರ್ಯನಿರ್ವಹಣೆಗೆ ತೆರೆಯಲಾಗಿದೆ ಎಂದು IAF ತಿಳಿಸಿದೆ.

ಎಲ್ಲಾ ಸುರಕ್ಷತಾ ಪರಿಶೀಲನೆಗಳು ಮತ್ತು ಅನುಮೋದನೆಗಳು ಪೂರ್ಣಗೊಂಡಿದ್ದು, ಹಂತ ಹಂತವಾಗಿ ಕಾರ್ಯಾಚರಣೆಗಳನ್ನು ಪುನರಾರಂಭಿಸಲಾಗುತ್ತಿದೆ ಎಂದು ವಾಯುಪಡೆ ತಿಳಿಸಿದೆ. ಈ ಮೊದಲು ವಾಯುಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಮತ್ತು ನಾಗರಿಕ ಆಸ್ತಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಲಾಗಿತ್ತು. ಸಾಮಾನ್ಯ ಕಾರ್ಯಾಚರಣೆಗಳನ್ನು ಮರುಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕೂಡ ತಿಳಿಸಿತ್ತು.

ಸುಖೋಯ್ Su-30MKI ಯುದ್ಧ ವಿಮಾನವು ಟೇಕ್‌ಆಫ್ ಸಮಯದಲ್ಲಿ ಟೈರ್ ಸ್ಫೋಟಗೊಂಡ ಹಾರಾಟ ರದ್ದುಗೊಂಡಿತ್ತು. ಈ ಘಟನೆಯಿಂದ ರನ್‌ವೇಗೆ ಹಾನಿಯಾಗಿತ್ತು.

ಡ್ಯುಯಲ್-ಯೂಸ್ ವಿಮಾನ ನಿಲ್ದಾಣದಲ್ಲಿ ನಿನ್ನೆ ಶುಕ್ರವಾರ ರಾತ್ರಿ ಸುಮಾರು 22:25ಕ್ಕೆ ರನ್‌ವೇ ಮುಚ್ಚಲ್ಪಟ್ಟು 9 ವಿಮಾನಗಳ ಹಾರಾಟ ವ್ಯತ್ಯಯಗೊಂಡಿತ್ತು.

ಅಧಿಕಾರಿಗಳು ರನ್‌ವೇ ತೆರವುಗೊಳಿಸಿ ಕಾರ್ಯಾಚರಣೆಗಳನ್ನು ಮರುಸ್ಥಾಪಿಸಲು ಸುಮಾರು 4–5 ಗಂಟೆಗಳು ಬೇಕಾಗುತ್ತದೆ ಎಂದು ಹೇಳಿದ್ದರು. ನಾಗರಿಕ ವಿಮಾನಯಾನ ಇಲಾಖೆಯ ಕೇಂದ್ರ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದನ್ನು ದೃಢಪಡಿಸಿ, ಏರ್‌ಲೈನ್ಸ್‌ಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದರು.

Pune airport
ದೆಹಲಿ ವಿಮಾನ ನಿಲ್ದಾಣ: ವಿಮಾನಗಳು ಪರಸ್ಪರ ಡಿಕ್ಕಿ; ಅಕಾಸಾ, ಸ್ಪೈಸ್‌ಜೆಟ್ ರೆಕ್ಕೆಗಳು ತುಂಡು! Video

ಇಂದು ಬೆಳಗ್ಗೆ ಸುಮಾರು 7:30ರಿಂದ ಡಿಪಾರ್ಚರ್ ಕಾರ್ಯಾಚರಣೆಗಳು ಪುನರಾರಂಭಗೊಂಡಿದ್ದು, 8 ಗಂಟೆಯಿಂದ ಆಗಮನಗಳು ಪ್ರಾರಂಭವಾಗಿವೆ. ಹೀಗಾಗಿ ವಿಮಾನ ಸಂಚಾರ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ.

ಮಾರ್ಚ್ ತಿಂಗಳಲ್ಲಿ ಅಸ್ಸಾಂನಲ್ಲಿ ಸಂಭವಿಸಿದ Su-30MKI ವಿಮಾನ ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು. 2022ರಲ್ಲಿ ಪುಣೆಯಲ್ಲಿಯೂ ಇದೇ ರೀತಿಯ ಟೈರ್ ಸ್ಫೋಟಕ್ಕೆ ಸಂಬಂಧಿಸಿದ ವ್ಯತ್ಯಯ ಸಂಭವಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com