

ನವದೆಹಲಿ: ರಾಜ್ಯಸಭಾ ಸಂಸದರಾದ ರಾಘವ್ ಛಡ್ಡಾ, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಸೇರಿದಂತೆ ಬಿಜೆಪಿಗೆ ಪಕ್ಷಾಂತರಗೊಂಡ ಪಕ್ಷದ ಎಂಪಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಎಎಪಿ ನಾಯಕ ಸಂಜಯ್ ಸಿಂಗ್, ಪಂಜಾಬ್ ಜನರ ಬೆನ್ನಿಗೆ ಚೂರಿಯಿಂದ ಇರಿದ ಈ ದೇಶದ್ರೋಹಿಗಳನ್ನು ಎಂದಿಗೂ ಮರೆಯುವುದಿಲ್ಲ. ಪಂಜಾಬ್ ಜನರು ಈ ಏಳು ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸಿಂಗ್ ಹೇಳಿದರು.
ಅಮಿತ್ ಶಾ ಆಡಿದ ನೀಚ ಆಟ ಕ್ಷಮಿಸಲಾಗದು ಎಂದು ಸಂಜಯ್ ಸಿಂಗ್ ಹೇಳಿದರು. ಇಂದು ನನಗೆ ತುಂಬಾ ದುಃಖವಾಗಿದೆ ಎಂದು ಅವರು ಹೇಳಿದರು. ನಮ್ಮ ಸಂಸದರನ್ನು ಬೇಟೆಯಾಡಲಾಗುತ್ತಿದೆ. ಅವರನ್ನು ಅವರದೇ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಇಡಿ ಮತ್ತು ಸಿಬಿಐ ಬಳಸಿಕೊಳ್ಳಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಇಡಿ ಅಶೋಕ್ ಮಿತ್ತಲ್ ಅವರ ಮನೆ ಮೇಲೆ ದಾಳಿ ನಡೆಸಿತ್ತು ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಬಿಜೆಪಿ ಆಪರೇಷನ್ ಕಮಲ ಮೂಲಕ ಭಗವಂತ್ ಮಾನ್ ಅವರ ಕೆಲಸವನ್ನು ತಡೆಯಲು ದೊಡ್ಡ ಪ್ರಮಾಣದಲ್ಲಿ ರಾಜಕೀಯ ಆಟವನ್ನು ಆಡಲಾಗುತ್ತಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಪಂಜಾಬ್ ಸರ್ಕಾರ ರಾಜ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಕೆಲಸ ಮಾಡುತ್ತದೆ. ಪಂಜಾಬ್‌ನಲ್ಲಿ ಯಾರಾದರೂ ಯಾವುದೇ ಅನಾರೋಗ್ಯದಿಂದ ಬಳಲುತ್ತಿದ್ದರೆ, 10 ಲಕ್ಷ ರೂಪಾಯಿಗಳವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಅಂತಹ ಸರ್ಕಾರವನ್ನು ತಡೆಯಲು ಮತ್ತು ಮುರಿಯಲು ಬಿಜೆಪಿ ಕೆಲಸ ಮಾಡಿದೆ. ಇಂದು, ಏಳು ಎಎಪಿ ರಾಜ್ಯಸಭಾ ಸಂಸದರು ಪಕ್ಷವನ್ನು ತೊರೆದಿದ್ದಾರೆ. ಪಂಜಾಬ್‌ನ ಜನರು ಈ ಏಳು ಹೆಸರುಗಳನ್ನು ಕ್ಷಮಿಸುವುದಿಲ್ಲ. ಎಎಪಿ ರಾಘವ್ ಚಡ್ಡಾ ಅವರಿಗೆ ಏನು ಕೊಟ್ಟಿರಲಿಲ್ಲ, ಅವರು ಕೂಡ ಬಿಜೆಪಿಗೆ ಸೇರಿದರು. ಎಎಪಿ ಈ ಎಲ್ಲ ನಾಯಕರನ್ನು ತಳಮಟ್ಟದಿಂದ ಬೆಳೆಸಿ ಸಂಸತ್ತಿಗೆ ಕರೆತಂದಿತ್ತು. ಆದರೆ ಈ ಏಳು ಜನರು ಪಂಜಾಬ್ ಜನರಿಗೆ ದ್ರೋಹ ಮಾಡಿದ್ದಾರೆ ಎಂದರು.
ಭಗವಂತ್ ಮಾನ್ ಅವರ ಕೆಲಸಕ್ಕೆ ಅಡ್ಡಿಪಡಿಸಲು ನೀವು ಮಾಡಿದ ಕಾರ್ಯಗಳನ್ನು ಪಂಜಾಬ್ ಜನರು ಎಂದಿಗೂ ಕ್ಷಮಿಸುವುದಿಲ್ಲ. ನಾನು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಹೇಳಲು ಬಯಸುತ್ತೇನೆ. ಇಂದು ಪಂಜಾಬ್‌ನಂತಹ ಉತ್ತಮ ಸರ್ಕಾರದ ವಿರುದ್ಧ 'ಆಪರೇಷನ್ ಕಮಲ' ಆಟ ಆಡಲಾಗುತ್ತಿದೆ... 'ಆಪರೇಷನ್ ಕಮಲ' ನಡೆಸಲು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ" ಎಂದು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಹೇಳಿದರು.
Advertisement