2026ರಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸಗಳಿಗೆ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ?

ಪ್ರಧಾನಿ ಮೋದಿ ಅವರು ಈ ವರ್ಷವೂ ಹಲವು ದೇಶಗಳಿಗೆ ಭೇಟಿ ನೀಡಿದ್ದು, ಈ ಭೇಟಿ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಿರಬಹುದು. ಆದರೆ,..
PM Modi's foreign visits cost over Rs 74.58 crore so far in 2026
ಪ್ರಧಾನಿ ಮೋದಿ
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸ ಯಾವಾಗಲೂ ಚರ್ಚೆಯ ವಿಷಯವಾಗಿದ್ದು, ಪ್ರತಿಪಕ್ಷಗಳು ಮೋದಿ ವಿದೇಶದಲ್ಲೇ ಇರುತ್ತಾರೆ ಎಂದು ಟ್ರೋಲ್ ಮಾಡಿವೆ. ಮೋದಿ ವಿದೇಶ ಪ್ರವಾಸದಲ್ಲಿ ಹೆಚ್ಚಿನ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಪ್ರಧಾನಿ ಮೋದಿ ಅವರು ಈ ವರ್ಷವೂ ಹಲವು ದೇಶಗಳಿಗೆ ಭೇಟಿ ನೀಡಿದ್ದು, ಈ ಭೇಟಿ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಿರಬಹುದು. ಆದರೆ, ಅವರ ಪ್ರವಾಸವು ಸರ್ಕಾರದ ಬೊಕ್ಕಸಕ್ಕೆ ಸುಮಾರು 70.58 ಕೋಟಿ ರೂಪಾ ವೆಚ್ಚವನ್ನುಂಟು ಮಾಡಿದೆ.

2026 ರಲ್ಲಿ ಅಂದರೆ ಕಳೆದ 7 ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸದ ವೆಚ್ಚವು 74.58 ಕೋಟಿ ರೂ.ಗಳಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಪಬಿತ್ರ ಮಾರ್ಗರಿಟಾ ಅವರು ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದರು. ಆದರೆ 2021 ರಿಂದ ಅವರ ವಿದೇಶ ಪ್ರವಾಸಗಳ ಒಟ್ಟು ವೆಚ್ಚವು 550 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ.

PM Modi's foreign visits cost over Rs 74.58 crore so far in 2026
ಪ್ರಧಾನಿ ಮೋದಿ ವಿದೇಶ ಪ್ರವಾಸ: 5 ವರ್ಷಗಳಲ್ಲಿ 350 ಕೋಟಿ ರೂ ವೆಚ್ಚ..!

ಈ ವರ್ಷ ಲಭ್ಯವಿರುವ ಅಂಕಿಅಂಶಗಳಲ್ಲಿ ಅತಿ ಹೆಚ್ಚು ವೆಚ್ಚವೆಂದರೆ ಮೇ ತಿಂಗಳಲ್ಲಿ ಪ್ರಧಾನಿಯವರ ಐದು ರಾಷ್ಟ್ರಗಳ ಪ್ರವಾಸದ ವೆಚ್ಚ 17.46 ಕೋಟಿ ರೂ. ಮಾಡಲಾಗಿದೆ ಎಂದು ಮಾರ್ಗರಿಟಾ ಅವರು ಲಿಖಿತ ಉತ್ತರ ನೀಡಿದ್ದಾರೆ.

ಉತ್ತರದ ಪ್ರಕಾರ, ಪ್ರಧಾನಿ ಮೋದಿಯವರ ವಿದೇಶ ಪ್ರವಾಸಗಳ ವೆಚ್ಚವು 2025 ರಲ್ಲಿ 180 ಕೋಟಿ ರೂ., 2024 ರಲ್ಲಿ 109 ಕೋಟಿ ರೂ., 2023 ರಲ್ಲಿ 93 ಕೋಟಿ ರೂ., 2022 ರಲ್ಲಿ 55 ಕೋಟಿ ರೂ. ಮತ್ತು 2021 ರಲ್ಲಿ 36 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com