ವಾಹನ ಸವಾರರಿಗೆ ಸುಪ್ರೀಂ ಬಿಗ್ ಶಾಕ್; No Insurance, No Petrol ನಿಯಮ ಜಾರಿಗೆ ಕೇಂದ್ರಕ್ಕೆ ಸೂಚನೆ

ದೇಶಾದ್ಯಂತ ಸಂಚರಿಸುವ ವಾಹನಗಳ ಸುರಕ್ಷತೆ ಮತ್ತು ರಸ್ತೆ ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುವಂತೆ ಮಾಡಲು ಸುಪ್ರೀಂ ಕೋರ್ಟ್, ವಾಹನಕ್ಕೆ ಮಾನ್ಯತೆ ಇರುವ ಇನ್ಶೂರೆನ್ಸ್ ಇರದಿದ್ದರೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನೀಡಬಾರದು ಎಂಬ ಯೋಜನೆಯನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
No Insurance No Petrol
ವಾಹನ ಸವಾರರಿಗೆ ಸುಪ್ರೀಂ ಬಿಗ್ ಶಾಕ್Online Desk
Updated on

ನವದೆಹಲಿ: ಇನ್ಶೂರೆನ್ಸ್ ಯಾರಿಗೆ ಆಗಲಿ, ಯಾವುದಕ್ಕೆ ಆಗಲಿ ಬಹಳ ಮುಖ್ಯ; ಆದ್ರೆ, ದೇಶದಲ್ಲಿರುವ ಶೇ. 56 ಕ್ಕೂ ಹೆಚ್ಚು ವಾಹನಗಳಿಗೆ ಇನ್ಶೂರೆನ್ಸ್ ಇಲ್ಲ ಎನ್ನುವ ಆಘಾತಕಾರಿ ಮಾಹಿತಿ ಹಣಕಾಸು ಸ್ಥಾಯಿ ಸಮಿತಿಯ ವರದಿಯಲ್ಲಿ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್, ವಾಹನಕ್ಕೆ ಆಕ್ಟಿವ್ ಇರುವ ಇನ್ಶೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನೀಡಲು ನಿರಾಕರಿಸುವ ಪ್ರಾಯೋಗಿಕ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠವು, ಭಾರತದ ರಸ್ತೆಗಳಲ್ಲಿ ಚಲಿಸುವ ಕೋಟ್ಯಂತರ ವಾಹನಗಳು ಅಂದರೆ, ದೇಶದಲ್ಲಿ ಒಟ್ಟು 30.48 ಕೋಟಿ ವಾಹನಗಳ ಪೈಕಿ ಸುಮಾರು 16.54 ಕೋಟಿ ವಾಹನಗಳು ಯಾವುದೇ ಮಾನ್ಯವಿರುವ ಇನ್ಶೂರೆನ್ಸ್ ಹೊಂದಿಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಈ ಮಹತ್ತರ ಆದೇಶ ಹೊರಡಿಸಿದೆ. ಅದರಂತೆ, ವಾಹನಗಳಿಗೆ ಇನ್ಶೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಪೂರೈಕೆಯನ್ನು ನಿರ್ಬಂಧಿಸುವ ವ್ಯವಸ್ಥೆಯನ್ನು ತರಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಹಾಗೂ IRDAI ಸಂಸ್ಥೆಗಳಿಗೆ ಕೋರ್ಟ್ ಸೂಚಿಸಿದೆ.

ಪೆಟ್ರೋಲ್ ಬಂಕ್ ಗಳಲ್ಲಿ ಇನ್ಶೂರೆನ್ಸ್ ಚೆಕ್

ಅಪಘಾತ ಸಂಭವಿಸಿದಾಗ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಕಾಲದಲ್ಲಿ ಪರಿಹಾರ ಸಿಗದೆ ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ಕ್ರಮ ಅನಿವಾರ್ಯವಾಗಿದೆ ಎಂದ ನ್ಯಾಯಪೀಠ, "ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ತುಂಬಿಸುವ ಮುನ್ನ ವಾಹನದಲ್ಲಿ ಇನ್ಶೂರೆನ್ಸ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸೂಚಿಸಿದೆ. ಈ ಹೊಸ ನಿಯಮದ ಪ್ರಕಾರ, ವಾಹನ ಸವಾರರು ತಮ್ಮ ವಾಹನದ ವಿಮೆಯನ್ನು ನವೀಕರಿಸದಿದ್ದರೆ ಅವರಿಗೆ ಪೆಟ್ರೋಲ್ ಅಥವಾ ಡೀಸೆಲ್ ಸಿಗುವುದಿಲ್ಲ.

No Insurance No Petrol
CJP protest: ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ಬೇಡ; ಪೊಲೀಸರಿಗೆ ಸುಪ್ರೀಂ ಕೋರ್ಟ್ ಪಾಠ

ಇದರೊಂದಿಗೆ, ಹೆದ್ದಾರಿಯಲ್ಲಿರುವ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ANPR) ಕ್ಯಾಮೆರಾಗಳನ್ನು ವಾಹನ ಇನ್ಶೂರೆನ್ಸ್ ಡೇಟಾಬೇಸ್ ಮತ್ತು ವಾಹನ್ ಪೋರ್ಟಲ್ ಜೊತೆ ಲಿಂಕ್ ಮಾಡಲು ಆದೇಶಿಸಲಾಗಿದೆ. ಇದರಿಂದ ಇನ್ಶೂರೆನ್ಸ್ ಇಲ್ಲದ ವಾಹನಗಳಿಗೆ ನೇರವಾಗಿ ಆಟೋಮ್ಯಾಟಿಕ್ ಇ-ಚಲನ್ ರವಾನೆಯಾಗಲಿದೆ. ಜೊತೆಗೆ ಸಂಚಾರ ಪೊಲೀಸರು ಸ್ಥಳದಲ್ಲೇ ವಾಹನದ ಇನ್ಶೂರೆನ್ಸ್ ಸ್ಥಿತಿಯನ್ನು ಪರಿಶೀಲಿಸಲು ಅನುಕೂಲವಾಗುವಂತೆ ವಿಶೇಷ ಮೊಬೈಲ್ ಆ್ಯಪ್ ಅಥವಾ ಡಿವೈಸ್‌ಗಳನ್ನು ಒದಗಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ.

ಹೊಸ ವಾಹನಗಳಿಗೆ ಇನ್ಶೂರೆನ್ಸ್ ಅವಧಿ ವಿಸ್ತರಣೆ

ಇದೆ ವೇಳೆ ನ್ಯಾಯಾಲಯವು ಹೊಸದಾಗಿ ಖರೀದಿಸುವ ವಾಹನಗಳ ಕಡ್ಡಾಯ ಥರ್ಡ್ ಪಾರ್ಟಿ ವಿಮೆಯ ಅವಧಿಯನ್ನು ಸುಪ್ರೀಂ ಕೋರ್ಟ್ ಹೆಚ್ಚಿಸಿದೆ. ಅದರಂತೆ, ಹೊಸ ಕಾರುಗಳಿಗೆ ಕಡ್ಡಾಯ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅವಧಿಯನ್ನು 3 ವರ್ಷಗಳಿಂದ 4 ವರ್ಷಗಳಿಗೆ ಹೆಚ್ಚಿಸಲಾಗಿದೆ. ಜೊತೆಗೆ ಹೊಸ ದ್ವಿಚಕ್ರ ವಾಹನಗಳಿಗೆ ಕಡ್ಡಾಯ ಇನ್ಶೂರೆನ್ಸ್ ಅವಧಿಯನ್ನು 5 ವರ್ಷಗಳಿಂದ 6 ವರ್ಷಗಳಿಗೆ ವಿಸ್ತರಿಸಲಾಗಿದೆ.

ಮುಂದುವರೆದು, ಸುಪ್ರೀಂ ಕೋರ್ಟ್ ನ ಈ ಪ್ರಸ್ತಾಪಿತ ಯೋಜನೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಒಪ್ಪಿಗೆ ನೀಡಿದ್ದು, ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಜೊತೆಗೆ ಕೋರ್ಟ್ ಈ ಆದೇಶಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಗಸ್ಟ್ 14ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ನಿಗದಿಪಡಿಸಿದೆ.

No Insurance No Petrol
ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ವಿಡಿಯೋ ಬ್ಲಾಕ್; ಅಲ್ಗಾರಿದಮ್ ಬಗ್ಗೆ ಮೆಟಾ ವಿಚಾರಣೆ; ಜುಗರ್‌ಬರ್ಗ್‌ ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com