'Gen Z'ಗಳನ್ನು 'ಜನರೇಷನ್ ಗಟರ್' ಎಂದು ಕರೆದು ವಿವಾದ ಸೃಷ್ಟಿಸಿದ್ದ ಕಂಗನಾ ರಣಾವತ್ ಈಗ ಯೂಟರ್ನ್!

ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳನ್ನು ಭೇಟಿಯಾಗಲು ರಾಂಚಿಗೆ ಹೋಗದಿದ್ದಕ್ಕಾಗಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೂ ಟೀಕಿಸಿದರು.
Kangana Ranaut
ಕಂಗನಾ ರಣಾವತ್
Updated on

ನವದೆಹಲಿ: 'Gen Z' ಪ್ರತಿಭಟನಾಕಾರರನ್ನು 'ಜನರೇಷನ್ ಗಟರ್' ಎಂದು ಕರೆದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ಇದೀಗ ಯೂಟರ್ನ್ ಹೊಡೆದಿದ್ದು, ಅವರನ್ನು ಭಾರತದ ಅತಿದೊಡ್ಡ ಶಕ್ತಿ ಹಾಗೂ ದೇಶದ ಸಂಸ್ಕೃತಿ ಮತ್ತು ಅಸ್ಮಿತೆಯ ರಾಯಭಾರಿಗಳೆಂದು ಶ್ಲಾಘಿಸಿದ್ದಾರೆ.

'ಜೆನ್ ಝೆಡ್'ಗಳ ಬೇಡಿಕೆಗಳಿಗೆ ಕಿವಿಗೊಡಬೇಕು ಮತ್ತು ಅವರು ದೇಶವಿರೋಧಿಗಳಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ ಮರುದಿನವೇ, ಕಂಗನಾ ರಣಾವತ್ ಕೂಡ ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ.

'ಜೆನ್ ಝೆಡ್' ಪೀಳಿಗೆ ನಮ್ಮ ದೇಶದ ಶಕ್ತಿಯಾಗಿದೆ ಮತ್ತು ಒಂದು ರೀತಿಯಲ್ಲಿ ರಾಷ್ಟ್ರದ ದೊಡ್ಡ ಆಸ್ತಿಯಾಗಿದೆ. ನಮ್ಮ ಯುವಜನರು ನಮ್ಮ ಸಂಸ್ಕೃತಿ ಮತ್ತು ಅದರ ಅಸ್ಮಿತೆಯ ರಾಯಭಾರಿಗಳಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮುತ್ತಿರುವುದು ನಮಗೆ ಅತ್ಯಂತ ಸಂತೋಷದ ವಿಷಯವಾಗಿದೆ' ಎಂದು ಅವರು ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

'ನಾವು ಅತ್ಯಂತ ಗೌರವಿಸುವ ಮೋಹನ್ ಭಾಗವತ್ ಜೀ ಅವರ ಮಾತುಗಳನ್ನು ಆಲಿಸುವ ಹಾಗೂ ಅವರ ಜ್ಞಾನ ಮತ್ತು ಅನುಭವದಿಂದ ಲಾಭ ಪಡೆಯುವ ಅವಕಾಶವೂ ನಮಗೆ ದೊರೆತಿದೆ. ದೇಶದ ಯುವಜನರು ನಮ್ಮೊಂದಿಗೆ ಬೆರೆಯುತ್ತಿರುವುದು ಮತ್ತು ನಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಅಳವಡಿಸಿಕೊಳ್ಳುತ್ತಿರುವುದು ಅತ್ಯಂತ ಸಂತೋಷದ ವಿಷಯ' ಎಂದು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಹೇಳಿದರು.

ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳನ್ನು ಭೇಟಿಯಾಗಲು ರಾಂಚಿಗೆ ಹೋಗದಿದ್ದಕ್ಕಾಗಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೂ ಟೀಕಿಸಿದರು.

Kangana Ranaut
ನನಗೆ ತೀವ್ರ ಮುಜುಗರ ಆಗಿದೆ; ನನ್ನ ಜೀವಮಾನದಲ್ಲಿ ಇಂಥ ಅಸಹ್ಯ ಎಲ್ಲೂ ನೋಡಿಲ್ಲ: ವಿವಾದ ಸೃಷ್ಟಿಸಿದ ಕಂಗನಾ ರಣಾವತ್; Video

ಜಂತರ್ ಮಂತರ್‌ನಲ್ಲಿನ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ಕುರಿತು ನೀಡಿದ ಪ್ರಚೋದನಕಾರಿ ಹೇಳಿಕೆಗಳಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ 'ಕ್ವೀನ್' ಚಿತ್ರದ ನಟಿ, ಜಾರ್ಖಂಡ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವವರು ಹಾಗೂ ಪದಕಗಳನ್ನು ಗೆದ್ದು ತಮ್ಮ ಗೆಲುವನ್ನು ಪ್ರಧಾನ ಮಂತ್ರಿಗೆ ಅರ್ಪಿಸಿದ ಕ್ರೀಡಾಪಟುಗಳನ್ನು ಶ್ಲಾಘಿಸಿದರು.

'ಸರ್ಕಾರದ ಒಂದು ಭಾಗವೇ 'ಜೆನ್ ಝೆಡ್'. ಅವರ ಆಶಯಗಳನ್ನು ಈಡೇರಿಸುವ ಕೆಲಸವನ್ನು ನಮ್ಮ ಸರ್ಕಾರ ಹಲವು ವರ್ಷಗಳಿಂದ ಮಾಡುತ್ತಾ ಬಂದಿದೆ. 'ಜೆನ್ ಝೆಡ್' ಅತ್ಯುತ್ತಮವಾದದ್ದು. ನಿಂದನೆ ಮಾಡುತ್ತಿರುವ ಆ 10-15 ಮಂದಿಯೇ 'ಜೆನ್ ಝೆಡ್' ಅನ್ನು ಪ್ರತಿನಿಧಿಸುತ್ತಾರೆ ಎಂದಲ್ಲ. ಕೆಲವೇ ಕೆಲವು ಜನರು 'ಜೆನ್ ಝೆಡ್'ನ ಹೆಸರನ್ನು ಕೆಡಿಸುತ್ತಿದ್ದಾರೆ' ಎಂದು ತಿಳಿಸಿದರು.

ಗುರುವಾರ ಮುಂಬೈನಲ್ಲಿ ಮಾತನಾಡಿದ ಆರ್‌ಎಸ್ಎಸ್ ಮುಖ್ಯಸ್ಥ ಭಾಗವತ್, ಯುವಜನರು 'ನಮ್ಮದೇ ಮುಂದಿನ ಪೀಳಿಗೆ'ಯಾಗಿದ್ದು, ಅವರ ಬಗ್ಗೆ ಪ್ರೀತಿ ಇರಬೇಕು. ಶಾಂತಿಯುತವಾಗಿ ಪ್ರತಿಭಟಿಸುವ ಯುವಕರ ಮೇಲೆ 'ದೇಶವಿರೋಧಿ' ಎಂಬ ಆರೋಪಗಳನ್ನು ಹೊರಿಸಬಾರದು ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಯಕರ ವಿರುದ್ಧ ಬಳಸಿದ ಭಾಷೆಗಾಗಿ ಸಿಜೆಪಿ (CJP) ಪ್ರತಿಭಟನಾಕಾರರನ್ನು ತೀವ್ರವಾಗಿ ಟೀಕಿಸುತ್ತಾ ಸರಣಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದ ಕಂಗನಾ ಇಂದು ಯೂಟರ್ನ್ ಹೊಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com