ಆನ್‌ಲೈನ್ ಗೇಮಿಂಗ್‌ನಲ್ಲಿ ಭಾರೀ ನಷ್ಟ: ಮನನೊಂದು ವಿಷ ಸೇವಸಿದ ಮೂವರು ಸ್ನೇಹಿತರು; ಇಬ್ಬರು ಸಾವು!

ಆನ್‌ಲೈನ್ ಗೇಮಿಂಗ್‌ನಿಂದ ಉಂಟಾದ ನಷ್ಟ ಮತ್ತು ಕುಟುಂಬದ ಒತ್ತಡದಿಂದ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ.
Punjab: online gaming loss, 3 friends in Nawanshahr consume poison, 2 die
ರಮ್‌ಜೀತ್ ಸಿಂಗ್ ಖಾಲ್ಸಾ - ದಿಲ್‌ಪ್ರೀತ್ ಸಿಂಗ್
Updated on

ನವನ್‌ಶಹರ್: ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು, ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದರಿಂದ ಒತ್ತಡಕ್ಕೆ ಒಳಗಾಗಿ ಮೂವರು ಸ್ನೇಹಿತರು ವಿಷ ಸೇವಿಸಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಪಂಜಾಬ್‌ನ ನವನ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ.

ವಿಷ ಸೇವಿಸಿದ್ದ 13 ವರ್ಷದ ಬಾಲಕ ಮತ್ತು ಆತನ 21 ವರ್ಷದ ಸ್ನೇಹಿತ ಸಾವನ್ನಪ್ಪಿದ್ದು, ಮತ್ತೊಬ್ಬ ಹದಿಹರೆಯದ ಯುವಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಆನ್‌ಲೈನ್ ಗೇಮಿಂಗ್‌ನಿಂದ ಉಂಟಾದ ನಷ್ಟ ಮತ್ತು ಕುಟುಂಬದ ಒತ್ತಡದಿಂದ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಘಟನೆ ಆಗಸ್ಟ್ 10 ರಂದು ನಡೆದಿದ್ದು, ಮೂವರು ಸ್ನೇಹಿತರು ಒಟ್ಟಿಗೆ ವಿಷ ಸೇವಿಸಿದ್ದಾರೆ ಎಂದು ವರದಿಯಾಗಿದೆ. ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಮೂವರ ಪೈಕಿ ಪರಮ್‌ಜೀತ್ ಸಿಂಗ್ ಖಾಲ್ಸಾ (13) ಹಾಗೂ ದಿಲ್‌ಪ್ರೀತ್ ಸಿಂಗ್ (21) ಮೃತಪಟ್ಟಿದ್ದು, ಮರಿಂದರ್ ಸಿಂಗ್ (15) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Punjab: online gaming loss, 3 friends in Nawanshahr consume poison, 2 die
ಬೆಂಗಳೂರು: ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿಕೊಂಡಿದ್ದ ಮಹಿಳೆ ಆತ್ಮಹತ್ಯೆಗೆ ಶರಣು!

ಪೊಲೀಸರ ಪ್ರಕಾರ, ಮೂವರು ಆಪ್ತ ಸ್ನೇಹಿತರಾಗಿದ್ದು, ಈ ಪೈಕಿ ಓರ್ವ ಆನ್‌ಲೈನ್ ಗೇಮ್‌ಗಳನ್ನು ಆಡಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಇದರಿಂದ ಆತ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಅಲ್ಲದೇ ಕುಟುಂಬದವರಿಂದಲೂ ಒತ್ತಡವಿತ್ತು. ಆತನ ಸಾವಿನ ಬಳಿಕವೂ ಕುಟುಂಬಸ್ಥರು ಯಾವುದೇ ದೂರು ನೀಡಿಲ್ಲ. ಹೀಗಾಗಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com