ತಮಿಳುನಾಡು: 80ನೇ ಸ್ವಾತಂತ್ರೋತ್ಸವ, ಧ್ವಜಾರೋಹಣ ವೇಳೆ ಸಿಎಂ ವಿಜಯ್‌ಗೆ ಸಲ್ಯೂಟ್ ಮಾಡಿದ ಆಪ್ತ ಗೆಳತಿ ತ್ರಿಶಾ ಕೃಷ್ಣನ್! Video ವೈರಲ್

ಚೆನ್ನೈನ ರಾಜ್ಯ ಸಚಿವಾಲಯದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಮುಖ ವ್ಯಕ್ತಿಗಳಲ್ಲಿ ತ್ರಿಶಾ ಕೃಷ್ಣನ್ ಕೂಡ ಒಬ್ಬರಾಗಿದ್ದರು.
Trisha Salutes Vijay
ಸಿಎಂ ವಿಜಯ್‌ಗೆ ಸಲ್ಯೂಟ್ ಮಾಡಿದ ಆಪ್ತ ಗೆಳತಿ ತ್ರಿಶಾ ಕೃಷ್ಣನ್
Updated on

ಚೆನ್ನೈ: ತಮಿಳುನಾಡು ಸಿಎಂ ವಿಜಯ್ ಅವರ ಆಪ್ತ ಗೆಳತಿ, ನಟಿ ತ್ರಿಶಾ ಕೃಷ್ಣನ್ ಮತ್ತೆ ಕಾಣಿಸಿಕೊಂಡಿದ್ದು, ಸುದ್ದಿಯಾಗಿದ್ದಾರೆ.

ಚೆನ್ನೈನ ರಾಜ್ಯ ಸಚಿವಾಲಯದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಮುಖ ವ್ಯಕ್ತಿಗಳಲ್ಲಿ ತ್ರಿಶಾ ಕೃಷ್ಣನ್ ಕೂಡ ಒಬ್ಬರಾಗಿದ್ದರು.

ಸಾಂಪ್ರದಾಯಿಕ ಹಳದಿ ಬಣ್ಣದ ಸೀರೆಯೊಂದಿಗೆ ತಲೆಗೆ ಮಲ್ಲಿಗೆ ಹೂ ಮುಡಿದು, ತಮ್ಮ ತಾಯಿ ಉಮಾ ಕೃಷ್ಣನ್ ಅವರೊಂದಿಗೆ ತ್ರಿಶಾ ಕೃಷ್ಣನ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ವಿಜಯ್ ಅವರ ಪೋಷಕರಾದ ಎಸ್. ಎ. ಚಂದ್ರಶೇಖರ್ ಮತ್ತು ಶೋಭಾ ಚಂದ್ರಶೇಖರ್ ಕೂಡ ಉಪಸ್ಥಿತರಿದ್ದರು.

ವಿಜಯ್‌ಗೆ ತ್ರಿಶಾ ಕೃಷ್ಣನ್ ಸಲ್ಯೂಟ್: ಅಧಿಕೃತ ಸಮಾರಂಭದ ವೇಳೆ ತ್ರಿಶಾ ಅವರು ಸಿಎಂ ವಿಜಯ್ ಅವರಿಗೆ ಸಲ್ಯೂಟ್ ಮಾಡಿದ್ದಾರೆ. ಸನ್ ನ್ಯೂಸ್ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಮತ್ತೆ ಇವರಿಬ್ಬರ ಸಂಬಂಧದ ಬಗ್ಗೆ ಚರ್ಚಿಸುತ್ತಿದ್ದಾರೆ.

Trisha Salutes Vijay
ತಮಿಳುನಾಡು ಸಿಎಂ ಧ್ವಜಾರೋಹಣ: ಮುಂದಿನ ಸಾಲಿನಲ್ಲಿ ವಿಜಯ್ ಪೋಷಕರ ಪಕ್ಕದಲ್ಲೇ ಕುಳಿತ ತ್ರಿಶಾ ಕೃಷ್ಣನ್!

ಧ್ವಜಾರೋಹಣ ನಂತರದ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರಿಗೆ ವಿಜಯ್ ವಂದನೆ ಸಲ್ಲಿಸುತ್ತಿರುವುದನ್ನು ಮತ್ತು ಅವರ ಪೋಷಕರು ಹಾಗೂ ತ್ರಿಶಾ ಕೂಡ ಅದಕ್ಕೆ ಪ್ರತಿಯಾಗಿ ವಂದನೆ ಸಲ್ಲಿಸುತ್ತಿರುವುದನ್ನು ಈ ದೃಶ್ಯಾವಳಿಗಳಲ್ಲಿ ಕಾಣಬಹುದು. ಈ ವಿಡಿಯೋ ಕುರಿತು ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com