ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

ಪೊಲೀಸ್ ಕಾರ್ಯಾಚರಣೆ ವೇಳೆ 690 ಗ್ರಾಂ ತೂಕದ ಐಇಡಿ ಹಾಗೂ ಎಲೆಕ್ಟ್ರಾನಿಕ್ ಡಿಟೋನೇಟರ್ ಪತ್ತೆಯಾಗಿದೆ.
Punjab police
ಪಂಜಾಬ್ ಪೊಲೀಸ್ ಸಾಂದರ್ಭಿಕ ಚಿತ್ರonline desk
Updated on

ಚಂಡೀಗಢ: ಅಮೃತಸರ ಗ್ರಾಮೀಣ ಪೊಲೀಸರು ಭಾನುವಾರ ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದ್ದ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಿರುವುದಾಗಿ ಹೇಳಿದ್ದಾರೆ.

ಪೊಲೀಸ್ ಕಾರ್ಯಾಚರಣೆ ವೇಳೆ 690 ಗ್ರಾಂ ತೂಕದ ಐಇಡಿ ಹಾಗೂ ಎಲೆಕ್ಟ್ರಾನಿಕ್ ಡಿಟೋನೇಟರ್ ಪತ್ತೆಯಾಗಿದೆ.

"ಅಮೃತಸರ ಗ್ರಾಮೀಣ ಪೊಲೀಸರು ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ನಡೆಸಲಾಗಿದ್ದ ಭಯೋತ್ಪಾದಕರ ಸಂಚನ್ನು ತಪ್ಪಿಸಿದ್ದಾರೆ ಮತ್ತು 690 ಗ್ರಾಂ ತೂಕದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಜೊತೆಗೆ ಎಲೆಕ್ಟ್ರಾನಿಕ್ ಡಿಟೋನೇಟರ್, ಬ್ಯಾಟರಿ, ಟೈಮರ್ ಮತ್ತು ಕಬ್ಬಿಣದ ಪೆಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ" ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Punjab police
ಆಗಸ್ಟ್ 15ಕ್ಕೆ ಉಗ್ರ ದಾಳಿಗೆ ಪಾಕ್ ಸಂಚು; ಪಂಜಾಬ್ ಪೊಲೀಸರಿಂದ BKI ಏಜೆಂಟ್ ಬಂಧನ; ಚೀನಾದ 86-P ಗ್ರೆನೇಡ್ ವಶಕ್ಕೆ

"ವಶಪಡಿಸಿಕೊಂಡ ನಂತರ, ಸ್ಫೋಟಕ ವಸ್ತುವನ್ನು ಸ್ಥಾಪಿತ ಭದ್ರತಾ ಪ್ರೋಟೋಕಾಲ್‌ಗಳ ಪ್ರಕಾರ ನಿರ್ವಹಿಸಲಾಗಿದೆ ಮತ್ತು ಬಾಂಬ್ ನಿಷ್ಕ್ರಿಯ ದಳವು ಅದನ್ನು ನಿಷ್ಕ್ರಿಯಗೊಳಿಸಿತು" ಎಂದು ಗೌರವ್ ಯಾದವ್ ಹೇಳಿದ್ದಾರೆ.

ಅಮೃತಸರ ಗ್ರಾಮೀಣ ಪೊಲೀಸರು ರಾಷ್ಟ್ರವಿರೋಧಿ ಅಂಶಗಳ ಯೋಜನೆಯನ್ನು ವಿಫಲಗೊಳಿಸಿದ್ದಾರೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com