ಹಗಲು ರಾತ್ರಿ ನೀರಿನಲ್ಲೇ ವಾಸ: ಇಕ್ಬಾಲ್ ನೆರವಿಗೆ ಅನಂತ್ ಅಂಬಾನಿ, ಮುಂಬೈಗೆ ಏರ್‌ಲಿಫ್ಟ್!

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಹದಿಹರೆಯದ ಬಾಲಕಯೊಬ್ಬ ಸಾಕಷ್ಟು ಸುದ್ದಿಯಲ್ಲಿದ್ದಾನೆ. ನಿಗೂಢ ಮತ್ತು ಗೊಂದಲದ ಸ್ಥಿತಿಯಿಂದಾಗಿ ಬಾಲಕ ಹೆಚ್ಚಿನ ಸಮಯವನ್ನು ಕೊಳದ ನೀರಿನಲ್ಲೇ ವಾಸಿಸುತ್ತಾನೆ.
Iqbal, Anant Ambani
ಇಕ್ಬಾಲ್, ಅನಂತ್ ಅಂಬಾನಿ
Updated on

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಹದಿಹರೆಯದ ಬಾಲಕಯೊಬ್ಬ ಸಾಕಷ್ಟು ಸುದ್ದಿಯಲ್ಲಿದ್ದಾನೆ. ನಿಗೂಢ ಮತ್ತು ಗೊಂದಲದ ಸ್ಥಿತಿಯಿಂದಾಗಿ ಬಾಲಕ ಹೆಚ್ಚಿನ ಸಮಯವನ್ನು ಕೊಳದ ನೀರಿನಲ್ಲೇ ವಾಸಿಸುತ್ತಾನೆ. ಅವರ ಕುಟುಂಬದ ಪ್ರಕಾರ, ಬಾಲಕ ನೀರಿನಿಂದ ಹೊರಬಂದಾಗಲೆಲ್ಲಾ ಆತನಿಗೆ ತೀವ್ರವಾದ ಸುಡುವ ಸಂವೇದನೆ ಉಂಟಾಗುತ್ತದೆ. ಪರಿಸ್ಥಿತಿ ಎಷ್ಟು ಗಂಭೀರವಾಯಿತು ಎಂದರೆ ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಬಾಲಕನ ಸಹಾಯಕ್ಕೆ ಬಂದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಏರ್‌ಲಿಫ್ಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಇಕ್ಬಾಲ್ ವೀಡಿಯೊ ಕಾಣಿಸಿಕೊಂಡ ನಂತರ ಆತನ ಸ್ಥಿತಿ ಬೆಳಕಿಗೆ ಬಂದಿತು. ವೀಡಿಯೊದಲ್ಲಿ ಇಕ್ಬಾಲ್ ಕೊಳದ ನೀರಿನಲ್ಲಿ ಕುಳಿತು ತಿಂಡಿ ತಿನ್ನುತ್ತಿರುವುದು ಕಂಡುಬಂದಿದೆ. ವೀಡಿಯೊ ವೈರಲ್ ಆದ ನಂತರ, ಜನರ ಗಮನ ಅವರ ಅಸಾಮಾನ್ಯ ಸ್ಥಿತಿಯತ್ತ ಸೆಳೆಯಲ್ಪಟ್ಟಿದ್ದು ವೈದ್ಯಕೀಯ ತಜ್ಞರು ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದರು. ಇಕ್ಬಾಲ್ ಕೂಡ ತನ್ನ ಮೇಲೆ ಅಲೌಕಿಕ ಶಕ್ತಿ ಇದೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದು ಅದಕ್ಕಾಗಿಯೇ ತಾನೂ ದೀರ್ಘಕಾಲದವರೆಗೆ ನೀರಿನಲ್ಲೇ ಇರುವುದಾಗಿ ಹೇಳಿದ್ದಾನೆ.

Iqbal, Anant Ambani
ಪ್ರಿನ್ಸಿಪಾಲ್ ರೂಪಾ ರೆಡ್ಡಿಗೆ 27 ಬಾರಿ ಇರಿದು ಬರ್ಬರ ಹತ್ಯೆ: ಶಾಲಾ ವಿದ್ಯಾರ್ಥಿಗಳೇ ಆರೋಪಿಗಳು; CCTV ದೃಶ್ಯ ನೋಡಿ ಪೊಲೀಸರೇ ಶಾಕ್!

ಈ ವಿಚಾರ ತಿಳಿದ ನಂತರ ಅನಂತ್ ಅಂಬಾನಿ ನೆರವಿಗೆ ಮುಂದಾದರು. ಇದರ ನಂತರ, ಇಕ್ಬಾಲ್ ಅವರನ್ನು ಪಶ್ಚಿಮ ಬಂಗಾಳದಿಂದ ಮುಂಬೈಗೆ ವಿಮಾನದ ಮೂಲಕ ಕರೆದೊಯ್ಯಲಾಯಿತು. ಸದ್ಯ ಸರ್ H.N. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ವೈದ್ಯರು ಆತನ ಸ್ಥಿತಿಯ ವಿವರವಾದ ಮೌಲ್ಯಮಾಪನವನ್ನು ನಡೆಸುತ್ತಿದ್ದಾರೆ ಮತ್ತು ವಿಶೇಷ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಈ ಮೊದಲೇ ಪೋಷಕರು ಇಕ್ಬಾಲ್ ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅವರ ಸ್ಥಿತಿ ಸುಧಾರಿಸಲಿಲ್ಲ ಎಂದು ಅವರ ಪೋಷಕರು ತಿಳಿಸಿದ್ದಾರೆ. ಕುಟುಂಬವು ದೀರ್ಘಾವಧಿಯ ಚಿಕಿತ್ಸೆಯನ್ನು ಭರಿಸುವುದು ಕಷ್ಟಕರವಾಗಿತ್ತು. ಪರಿಣಾಮವಾಗಿ, ಅವರು ಸಹಾಯಕ್ಕಾಗಿ ಮನವಿ ಮಾಡಿದರು.

ಇಕ್ಬಾಲ್ ಅವರ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರು ಸಹ ಅವರ ಸ್ಥಿತಿಯ ಬಗ್ಗೆ ಚಿಂತಿತರಾಗಿದ್ದರು. ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ಅವರು ಕೊಳದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ಅವರ ಆಗಾಗ್ಗೆ ಚಲನೆಗಳು ಸಹ ಕಳವಳಕ್ಕೆ ಕಾರಣವಾಗಿದ್ದವು. ದೀರ್ಘಕಾಲದವರೆಗೆ ನೀರಿಗೆ ಒಡ್ಡಿಕೊಳ್ಳುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. SSKM ಆಸ್ಪತ್ರೆಯ ಚರ್ಮರೋಗ ತಜ್ಞರು, ನೀರಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಮೆಸರೇಷನ್ ಉಂಟಾಗುತ್ತದೆ. ಚರ್ಮವು ಬಿಳಿ, ಮೃದು ಮತ್ತು ದುರ್ಬಲವಾಗುತ್ತದೆ, ಕಿರಿಕಿರಿ, ಬಿರುಕು ಬಿಡುತ್ತದೆ ಮತ್ತು ಸೋಂಕಿನ ಅಪಾಯ ಹೆಚ್ಚಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com