ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿದ ಪಾಪಿ; ದೃಷ್ಟಿ ದೋಷ ನಿವಾರಣೆ ನೆಪದಲ್ಲಿ 25 ವರ್ಷದ ಏರ್ ಹೋಸ್ಟೆಸ್ ಮೇಲೆ ಅತ್ಯಾಚಾರ

ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿ ಏರ್‌ಲೈನ್ಸ್ ಗಗನಸಖಿ ಮೇಲೆ ಅತ್ಯಾಚಾರ ಎಸಗಿರುವ ಭೀಕರ ಘಟನೆ ಮುಂಬೈನ ಪವಾಯಿ ಪ್ರದೇಶದಲ್ಲಿ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:
Man Pretends To Be Transgender, Enters Woman's Home And Rapes Her In Mumbai
ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿದ ಪಾಪಿ
Updated on

ಮುಂಬೈ (ಮಹಾರಾಷ್ಟ್ರ): ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿ ಏರ್‌ಲೈನ್ಸ್ ಗಗನಸಖಿ ಮೇಲೆ ಅತ್ಯಾಚಾರ ಎಸಗಿರುವ ಭೀಕರ ಘಟನೆ ಮುಂಬೈನ ಪವಾಯಿ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಸೀರೆ ಧರಿಸಿ, ತಾನು ತೃತೀಯಲಿಂಗಿ ಎಂದು ನಟಿಸಿ ದೃಷ್ಟಿ ದೋಷ ನಿವಾರಿಸುವುದಾಗಿ ಹೇಳಿ 25 ವರ್ಷದ ವಿಮಾನ ಸಿಬ್ಬಂದಿ (ಏರ್ ಹೋಸ್ಟೆಸ್) ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಅನಿಲ್ ಶಿಂದೆ (28) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಆರೋಪಿ ಅನಿಲ್ ಶಿಂದೆ ಸೀರೆ ಧರಿಸಿ, ತೃತೀಯಲಿಂಗಿಯಂತೆ ವೇಷ ಬದಲಿಸಿಕೊಂಡು ಪವಾಯಿ ಪ್ರದೇಶದಲ್ಲಿದ್ದ ಏರ್ ಹೋಸ್ಟೆಸ್ ಯುವತಿಯ ಮನೆಗೆ ಬಂದಿದ್ದಾನೆ. ಈ ವೇಳೆ, ಯುವತಿಯ ಮುಖದಲ್ಲಿ ಮತ್ತು ಜೀವನದಲ್ಲಿ ದೊಡ್ಡ ದೃಷ್ಟಿ ದೋಷ ಇದೆ ಎಂದು ನಂಬಿಸಿದ್ದಾನೆ. ಜೊತೆಗೆ, ಆಸ್ಪತ್ರೆಯಲ್ಲಿದ್ದ ಸಂತ್ರಸ್ತೆಯ ಪತಿ ಮತ್ತು ಕುಟುಂಬದ ಮೇಲಿರುವ 'ದುಷ್ಟ ದೃಷ್ಟಿ' (ದೃಷ್ಟಿ ದೋಷ)ವನ್ನು ತಕ್ಷಣವೇ ನಿವಾರಿಸದಿದ್ದರೆ ಭವಿಷ್ಯದಲ್ಲಿ ಭಾರಿ ತೊಂದರೆಯಾಗುತ್ತದೆ ಎಂದು ಹೆದರಿಸಿದ್ದು, ದೃಷ್ಟಿ ತೆಗೆಯುವ ವಿಧಿವಿಧಾನಗಳನ್ನು ಮಾಡುವ ನೆಪದಲ್ಲಿ ಯುವತಿಯನ್ನು ನಂಬಿಸಿ ಮನೆಗೆ ನುಗ್ಗಿದ್ದಾನೆ. ತದನಂತರ ಯುವತಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಇದರೊಂದಿಗೆ, 2000 ರೂಪಯಿ ಪಡೆದು ಎಸ್ಕೇಪ್ ಆಗಿದ್ದಾನೆ.

ಆದರೆ, ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಸಂತ್ರಸ್ತೆ ತಕ್ಷಣವೇ ಪವಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ತಾಂತ್ರಿಕ ದಾಖಲೆಗಳು ಮತ್ತು ಸಿಕ್ಕ ಸುಳಿವುಗಳ ಆಧಾರದ ಮೇಲೆ ಆರೋಪಿ ಅನಿಲ್ ಶಿಂದೆಯನ್ನು ಪತ್ತೆಹಚ್ಚಿ ಕಂಬಿಹಿಂದೆ ತಳ್ಳಿದ್ದಾರೆ.

Man Pretends To Be Transgender, Enters Woman's Home And Rapes Her In Mumbai
ತಂದೆ ಮನೆಗೆ ಹೋಗೋದಿದ್ರೆ ಕದ್ದುಮುಚ್ಚಿ ಹೋಗ್ಬೇಕಿತ್ತ?: ಮೇಘ ನಾಯರ್ ಮೊದಲ ಪ್ರತಿಕ್ರಿಯೆ ಬೆನ್ನಲ್ಲೇ ನೆಟ್ಟಿಗರ ಪ್ರಶ್ನೆ

ಕುಟುಂಬದ ಕೆಲಸವೇ ಟ್ರಾನ್ಸ್ಜೆಂಡರ್ ನಟನೆ!

ತನಿಖೆಯ ವೇಳೆ, ಶಿಂಧೆ ಕುಟುಂಬವು ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮತ್ತು ಭಿಕ್ಷುಕರಂತೆ ನಟಿಸುತ್ತಾ ಭಿಕ್ಷೆ ಬೇಡುವುದರಲ್ಲಿ ತೊಡಗಿತ್ತು ಎಂದು ಪೊಲೀಸರು ಕಂಡುಕೊಂಡರು. ಅಪರಾಧಗಳನ್ನು ಮಾಡುವಾಗ ಅವರು ಈ ಹಿಂದೆ ಇದೇ ರೀತಿಯ ವೇಷಗಳನ್ನು ಬಳಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

Man Pretends To Be Transgender, Enters Woman's Home And Rapes Her In Mumbai
ಧಾರವಾಡದಲ್ಲಿ ಘೋರ ದುರಂತ: ಪ್ರೇಯಸಿ ಆತ್ಮಹತ್ಯೆ ಬೆನ್ನಲ್ಲೇ ಪ್ರಿಯಕರನೂ ನೇಣಿಗೆ ಶರಣು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com