ಬಾಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದೂ ಹಬ್ಬಕ್ಕೆ ಅವಮಾನ, ಸ್ವಿಸ್ ಪ್ರವಾಸಿಗನಿಗೆ ಜೈಲು ಶಿಕ್ಷೆ!

ಹಬ್ಬದ ಸಂದರ್ಭದಲ್ಲಿ ಪಾಲಿಸಬೇಕಾದ ನಿರ್ಬಂಧಗಳನ್ನು ಉಲ್ಲಂಘಿಸಿ ವಿಡಿಯೋ ಮಾಡಿ, ಅದಕ್ಕೆ ಅಶ್ಲೀಲ ಪದಗಳನ್ನು ಒಳಗೊಂಡ ಶೀರ್ಷಿಕೆ ಕೊಟ್ಟಿದ್ದರು ಎನ್ನಲಾಗಿದೆ.
Swiss Tourist
ಸ್ವಿಸ್ ಪ್ರವಾಸಿಗ
Updated on

ಬಾಲಿ: ಇಂಡೋನೇಷ್ಯಾದ ಕಾನೂನನ್ನು ಉಲ್ಲಂಘಿಸಿ, ಹಿಂದೂ ಧಾರ್ಮಿಕ ಆಚರಣೆಯೊಂದಕ್ಕೆ ಭಂಗ ತಂದು ಇನ್‌ಸ್ಟಾಗ್ರಾಮ್‌ನಲ್ಲಿ ಅದಕ್ಕೆ ಅವಮಾನ ಮಾಡಿದ ಆರೋಪ ಸಾಬೀತಾದ ನಂತರ 26 ವರ್ಷದ ಸ್ವಿಸ್ ಪ್ರವಾಸಿಗನೊಬ್ಬನಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.

ಸ್ವಿಟ್ಜರ್ಲೆಂಡ್‌ನ ನಿರ್ಮಾಣ ಕಾರ್ಮಿಕರಾದ ಲುಜಿಯನ್ ಆಂಡ್ರಿನ್ ಝ್ಗ್ರಾಗೆನ್ (Luzian Andrin Zgraggen),'ನ್ಯೆಪಿ' (Nyepi) ಹಬ್ಬದ ದಿನದಂದು ಖಾಲಿಯಾಗಿದ್ದ ಕಡಲತೀರದ ದೃಶ್ಯವನ್ನು ವಿಡಿಯೋ ಮಾಡಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಅದನ್ನು crazy ಎಂದು ಕರೆದಿದ್ದರು.

ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಹಬ್ಬದ ಸಂದರ್ಭದಲ್ಲಿ ಪಾಲಿಸಬೇಕಾದ ನಿರ್ಬಂಧಗಳನ್ನು ಉಲ್ಲಂಘಿಸಿ ವಿಡಿಯೋ ಮಾಡಿ, ಅದಕ್ಕೆ ಅಶ್ಲೀಲ ಪದಗಳನ್ನು ಒಳಗೊಂಡ ಶೀರ್ಷಿಕೆ ಕೊಟ್ಟಿದ್ದರು ಎನ್ನಲಾಗಿದೆ. ಅವರು ಹಂಚಿಕೊಂಡ ವಿಡಿಯೋ ಬಾಲಿಯ ಜನರ ಆಕ್ರೋಶಕ್ಕೆ ಕಾರಣವಾದ ನಂತರ ಝ್ಗ್ರಾಗೆನ್ ಅವರನ್ನು ಬಂಧಿಸಲಾಗಿದೆ.

'ನ್ಯೆಪಿ'ಯು ಬಾಲಿಯ ವಾರ್ಷಿಕ ಹಬ್ಬವಾಗಿದ್ದು, ಇದನ್ನು 'ಮೌನದ ದಿನ' (Day of Silence) ಎಂದೂ ಕರೆಯಲಾಗುತ್ತದೆ. ಈ ದಿನ ಜನರು ಮೌನವನ್ನು ಪಾಲಿಸುತ್ತಾರೆ, ಉಪವಾಸ ಮಾಡುತ್ತಾರೆ ಮತ್ತು ಧ್ಯಾನದಲ್ಲಿ ತೊಡಗುತ್ತಾರೆ. ಈ ಸಮಯದಲ್ಲಿ ದ್ವೀಪವು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ ಮತ್ತು ಜನರು 24 ಗಂಟೆಗಳ ಕಾಲ ಮನೆಯಲ್ಲೇ ಇರುವುದು ಕಡ್ಡಾಯವಾಗಿರುತ್ತದೆ.

ಧರ್ಮ ಅಥವಾ ಪ್ರವಾಸಿಗ ಎಂಬ ಭೇದವಿಲ್ಲದೆ ಬಾಲಿಯಲ್ಲಿರುವ ಪ್ರತಿಯೊಬ್ಬರೂ ಈ ನಿರ್ಬಂಧಗಳನ್ನು ಗೌರವಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಈ ಸಮಯದಲ್ಲಿ ಇಂಟರ್ನೆಟ್ ಸಂಪರ್ಕವನ್ನು ನಿರ್ಬಂಧಿಸಲಾಗುತ್ತದೆ, ದ್ವೀಪದ ವಿಮಾನ ನಿಲ್ದಾಣವನ್ನು ಮುಚ್ಚಲಾಗುತ್ತದೆ ಮತ್ತು ವಿದ್ಯುತ್ ಬಳಕೆಯನ್ನು ಸಹ ನಿಷೇಧಿಸಲಾಗುತ್ತದೆ.

ಪ್ರತಿವಾದಿಯು ಮಾಡಿದ ಕೃತ್ಯವು ಬಾಲಿಯ ಜನರ ನಂಬಿಕೆಗೆ ನೋವುಂಟು ಮಾಡಿದ್ದು, ಸಾರ್ವಜನಿಕರ ಆಕ್ರೋಶವನ್ನುಂಟು ಮಾಡಿದೆ ಎಂದು ನ್ಯಾಯಾಧೀಶರು ಹೇಳಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

Swiss Tourist
ಹುಬ್ಬಳ್ಳಿ: ಹಿಂದೂ ಧರ್ಮಕ್ಕೆ ಅವಮಾನ; ಸ್ಟೇಟಸ್​​ ಹಾಕಿದ್ದ ಮುಸ್ಲಿಂ ಯುವಕನ ಬಂಧನ!

ನಿರ್ಬಂಧಗಳ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲಿಲ್ಲ.ಬಾಲಿಯ ಜನರನ್ನು ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ. ಇದಕ್ಕೆ ಜನರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಅವರು ನ್ಯಾಯಾಲಯದಲ್ಲಿ ಹೇಳಿದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ನೈಪಿ ಸಮಯದಲ್ಲಿ ಬಾಲಿ ತನ್ನ ಸಾಂಸ್ಕೃತಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತದೆ ಮತ್ತು ವಿದೇಶಿ ಪ್ರವಾಸಿಗರು ಈ ನಿಯಮಗಳನ್ನು ಉಲ್ಲಂಘಿಸಿದರೆ ತಕ್ಷಣದ ಬಂಧನ, ಗಡೀಪಾರು ಅಥವಾ ಸಾಂಪ್ರದಾಯಿಕ ದಂಡವನ್ನು ಎದುರಿಸಬೇಕಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com