NEET ಪರೀಕ್ಷೆ: ಮೊದಲ ಸುತ್ತಿನ ಕೌನ್ಸೆಲಿಂಗ್ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ 21 ವರ್ಷದ ಯುವತಿ!

ಮೊದಲ ಹಂತದ ನೀಟ್ ಯುಜಿ ಕೌನ್ಸೆಲಿಂಗ್ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ತಮಿಳುನಾಡಿನ ತಿರುನಲ್ವೇಲಿಯಲ್ಲಿ ಒಂದು ದುರಂತ ನಡೆದಿದೆ. ವೈದ್ಯೆಯಾಗುವ ಮತ್ತು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಕನಸನ್ನು ನನಸಾಗಿಸಲು ಶ್ರಮಿಸಿದರೂ...
Sruthi Laya Suicide
ಶೃತಿ ಲಯಾ ಆತ್ಮಹತ್ಯೆ
Updated on

ಚೆನ್ನೈ: ಮೊದಲ ಹಂತದ ನೀಟ್ ಯುಜಿ ಕೌನ್ಸೆಲಿಂಗ್ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ತಮಿಳುನಾಡಿನ ತಿರುನಲ್ವೇಲಿಯಲ್ಲಿ ಒಂದು ದುರಂತ ನಡೆದಿದೆ. ವೈದ್ಯೆಯಾಗುವ ಮತ್ತು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಕನಸನ್ನು ನನಸಾಗಿಸಲು ಶ್ರಮಿಸಿದರೂ ಕೌನ್ಸೆಲಿಂಗ್ ಪಟ್ಟಿಯಲ್ಲಿ ಸ್ಥಾನ ಸಿಗದಿದ್ದಕ್ಕೆ ತಿರುನಲ್ವೇಲಿಯ ಪಳಯಂಕೊಟ್ಟೈ ಮೂಲದ ಐಟಿ ಉದ್ಯೋಗಿಯೊಬ್ಬರ ಮಗಳು 21 ವರ್ಷದ ಶ್ರುತಿ ಲಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2023ರಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಶ್ರುತಿ ಲಯಾ, ವೈದ್ಯೆಯಾಗುವ ಬಯಕೆಯೊಂದಿಗೆ ಖಾಸಗಿ ತರಬೇತಿ ಕೇಂದ್ರದಲ್ಲಿ ಓದುತ್ತಿದ್ದರು. ಕಳೆದ ವರ್ಷ ತನ್ನ ಮೊದಲ ಪ್ರಯತ್ನದಲ್ಲಿ ಅರ್ಹತೆ ಪಡೆಯಲು ವಿಫಲವಾದ ನಂತರ, ಈ ಬಾರಿ ಅವರು ಹೆಚ್ಚು ಗಮನಹರಿಸುವ ಮತ್ತು ತೀವ್ರವಾಗಿ ಅಭ್ಯಾಸ ಮಾಡುವ ಮೂಲಕ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ, ಇತ್ತೀಚೆಗೆ ಪ್ರಕಟವಾದ ಮೊದಲ ಹಂತದ ಕೌನ್ಸೆಲಿಂಗ್ ಪಟ್ಟಿಯಲ್ಲಿ ಶ್ರುತಿ ಹೆಸರು ಇಲ್ಲದಿರುವುದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Sruthi Laya Suicide
13 ವರ್ಷಗಳ ನಿರಂತರ ಸೇವೆ: ದಿಢೀರ್ ಅಂತ ಕೆಲಸಕ್ಕೆ ರಾಜಿನಾಮೆ ನೀಡಿದ ಉತ್ತರಪ್ರದೇಶ IAS ಅಧಿಕಾರಿ!

ಆ ರಾತ್ರಿ ಎಂದಿನಂತೆ ಮಲಗಿದ್ದ ಶ್ರುತಿ, ಮರುದಿನ ಬೆಳಿಗ್ಗೆ ತನ್ನ ಕೋಣೆಯಲ್ಲಿ ಕಾಣಿಸಲಿಲ್ಲ. ನಂತರ, ಕುಟುಂಬ ಮತ್ತು ಸಂಬಂಧಿಕರು ಹುಡುಕಾಟ ನಡೆಸಿದಾಗ, ಮನೆ ಸಮೀಪದ ಶೆಡ್‌ನಲ್ಲಿ ಹುಡುಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮಾಹಿತಿ ಪಡೆದ ನಂತರ, ಪೆರುಮಾಳ್‌ಪುರಂ ಪೊಲೀಸರು ಸ್ಥಳಕ್ಕೆ ತಲುಪಿದ್ದು ವಿಚಾರಣೆಯ ನಂತರ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುನಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ದುರಂತ ಘಟನೆಯು ವಿದ್ಯಾರ್ಥಿಗಳ ಮಾನಸಿಕ ಒತ್ತಡ ಮತ್ತು ನೀಟ್ ಪರೀಕ್ಷೆಯಿಂದ ಉಂಟಾಗುವ ಸವಾಲುಗಳನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ. ನೀಟ್ ಪರೀಕ್ಷೆ ಮತ್ತು ಕೌನ್ಸೆಲಿಂಗ್ ಕಾರ್ಯವಿಧಾನಗಳಿಂದ ಉಂಟಾಗುವ ಅತಿಯಾದ ಮಾನಸಿಕ ಒತ್ತಡದಿಂದ ಉಂಟಾದ ಇಂತಹ ದುರಂತ ಘಟನೆಗಳು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com