ನೇಪಾಳ ಪ್ರವಾಹ: ಲೈಕ್ಸ್ ಗಾಗಿ ನಕಲಿ ವಿಡಿಯೋ, ಸುಳ್ಳು ಮಾಹಿತಿ ಪ್ರಸಾರ; 72 ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಕಟ್ಟುನಿಟ್ಟಿನ ಸೂಚನೆ!

ಅನುಚಿತ ವಿಷಯವನ್ನು (content) ತೆಗೆದುಹಾಕುವಂತೆ 72 ಸಾಮಾಜಿಕ ಜಾಲತಾಣ ಬಳಕೆದಾರರಿಗೆ ದೇಶದ ಮಾಧ್ಯಮ ನಿಯಂತ್ರಣ ಸಂಸ್ಥೆಯಾದ 'ಪ್ರೆಸ್ ಕೌನ್ಸಿಲ್ ಸೂಚಿಸಿದೆ.
A drone view of the aftermath of flash flooding
ಪ್ರವಾಹ ಪೀಡಿತ ನೇಪಾಳದ ಚಿತ್ರ
Updated on

ಕಠ್ಮಂಡು: ಇತ್ತೀಚಿನ ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನೇಪಾಳದಲ್ಲಿ ಲೈಕ್ಸ್ ಮತ್ತು ಕಾಮೆಂಟ್ ಪಡೆಯುವ ಸಲುವಾಗಿ ಹೆಚ್ಚಿನ ಪ್ರಮಾಣದಲ್ಲಿ ನಕಲಿ ವಿಡಿಯೋಗಳ ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದೆ.

ಈ ಅನುಚಿತ ವಿಷಯವನ್ನು (content) ತೆಗೆದುಹಾಕುವಂತೆ 72 ಸಾಮಾಜಿಕ ಜಾಲತಾಣ ಬಳಕೆದಾರರಿಗೆ ದೇಶದ ಮಾಧ್ಯಮ ನಿಯಂತ್ರಣ ಸಂಸ್ಥೆಯಾದ 'ಪ್ರೆಸ್ ಕೌನ್ಸಿಲ್ ಸೂಚಿಸಿದೆ. ಈ ಪೈಕಿ ಹೆಚ್ಚಿನ ವಿಷಯಗಳನ್ನು ವೈಯಕ್ತಿಕ ಖಾತೆಗಳ ಮೂಲಕ ಪೋಸ್ಟ್ ಮಾಡಲಾಗಿತ್ತು ಎಂದು 'ದಿ ಕಠ್ಮಂಡು ಪೋಸ್ಟ್' ವರದಿ ಮಾಡಿದೆ.

ನಾಪತ್ತೆಯಾಗಿರುವವರಿಗಾಗಿ ಕುಟುಂಬಸ್ಥರು ಹತಾಶರಾಗಿ ಹುಡುಕಾಡುತ್ತಿರುವ ಮತ್ತು ಅಧಿಕಾರಿಗಳು ದುರಂತದ ಸಂಪೂರ್ಣ ವ್ಯಾಪ್ತಿಯನ್ನು ಅರಿಯಲು ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಪ್ಪು ಮಾಹಿತಿ ಹರಡುವಿಕೆ ಮತ್ತು ವೇಗವು ಈಗಾಗಲೇ ಗೊಂದಲಮಯವಾಗಿರುವ ಮಾಹಿತಿ ವಾತಾವರಣವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ ಎಂದು ವರದಿ ತಿಳಿಸಿದೆ.

ಹೆಚ್ಚು ವೀಕ್ಷಣೆ ಮತ್ತು ಜನಪ್ರಿಯತೆಯನ್ನು (ವೈರಲ್ ಆಗುವುದನ್ನು) ಬಯಸುವ ಸಾಮಾಜಿಕ ಜಾಲತಾಣ ಬಳಕೆದಾರರಿಗೆ, ಈ ಪ್ರವಾಹವು ಲಾಭದಾಯಕ ವಿಷಯದ ಮೂಲವಾಗಿಯೂ ಪರಿಣಮಿಸಿದೆ. ಉದಾಹರಣೆಗೆ, ವರದಿಯ ಪ್ರಕಾರ, ಶನಿವಾರ ಬೆಳಿಗ್ಗೆ 7:26 ಕ್ಕೆ 'ದುಧೌಲಿ ಎಫ್‌ಎಂ' (Dudhauli FM) ಎಂಬ ಫೇಸ್‌ಬುಕ್ ಪುಟ 20 ಸೆಕೆಂಡುಗಳ ವಿಡಿಯೋವೊಂದನ್ನು ಪೋಸ್ಟ್ ಮಾಡಿತ್ತು. ಇದರಲ್ಲಿ ಗೃಹ ಸಚಿವ ಸುದಾನ್ ಗುರುಂಗ್ ಅವರು ದುರಂತ ಸ್ಥಳದಲ್ಲಿರುವ ಸುರಂಗವೊಂದರ ಒಳಗಿದ್ದಾರೆ ಎಂದು ಹೇಳಲಾಗಿತ್ತು.

"ಗೃಹ ಸಚಿವ ಗುರುಂಗ್ ಅವರ ವಿಶಿಷ್ಟ ಶೈಲಿ: ರಕ್ಷಣಾ ಕಾರ್ಯದಲ್ಲಿ ಪಾಲ್ಗೊಳ್ಳಲು ಅವರು ಘಟನಾ ಸ್ಥಳದಲ್ಲಿರುವ ಸುರಂಗದ ಒಳಗೆ ತಲುಪುತ್ತಾರೆ," ಎಂದು ಅದರ ಶೀರ್ಷಿಕೆಯಲ್ಲಿ ಬರೆಯಲಾಗಿತ್ತು ಮತ್ತು ಸಚಿವರ ಈ ಭಾಗವಹಿಸುವಿಕೆಯನ್ನು ಶ್ಲಾಘಿಸಲಾಗಿತ್ತು. ನಂತರ ಆ ಪುಟವು ಶೀರ್ಷಿಕೆಯನ್ನು ಬದಲಾಯಿಸಿತು. ಈ ವಿಡಿಯೋ ಫೇಸ್‌ಬುಕ್, ಟಿಕ್‌ಟಾಕ್ ಮತ್ತು 'ಎಕ್ಸ್' (X) ನಲ್ಲಿ ವೇಗವಾಗಿ ಹರಡಿತು. ಆದರೆ ಅದು ನೇಪಾಳದ್ದಾಗಿರಲಿಲ್ಲ. ಆ ದೃಶ್ಯಾವಳಿಗಳು ಭಾರತದ ಉತ್ತರಾಖಂಡದಲ್ಲಿ ನಡೆದ ಸುರಂಗ ರಕ್ಷಣಾ ಕಾರ್ಯಾಚರಣೆಯದ್ದಾಗಿದ್ದವು ಎಂಬುದನ್ನು ಸತ್ಯಶೋಧಕರು (fact-checkers) ದೃಢಪಡಿಸಿದ್ದಾರೆ.

ರಕ್ಷಣಾ ಕಾರ್ಯಕರ್ತರು ಧರಿಸಿದ್ದ ಸಮವಸ್ತ್ರಗಳು ಮತ್ತು ಸುತ್ತಮುತ್ತಲಿನ ಪರಿಸರವು, ಆಗಸ್ಟ್ 14 ರಂದು 'ಫೈರ್ ಸರ್ವಿಸ್ ಉತ್ತರಾಖಂಡ ಪೊಲೀಸ್' ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದ್ದ ಮೂಲ ವಿಡಿಯೋದ ದೃಶ್ಯಗಳಿಗೆ ಹೊಂದಿಕೆಯಾಗಿದ್ದವು. ಈ ಮಧ್ಯೆ, 'ಭೋಟೆಕೋಶಿ ಘಟನೆಗೆ ಸಂಬಂಧಿಸಿದ ವಿಶೇಷ ದೂರುಗಳು' (Special Complaints on the Bhotekoshi Incident) ಎಂಬ ಹೆಸರಿನ ಮೀಸಲು ಪೋರ್ಟಲ್ ಅನ್ನು ಪ್ರೆಸ್ ಕೌನ್ಸಿಲ್ ಆರಂಭಿಸಿದೆ. ಇದರ ಮೂಲಕ ಸಾರ್ವಜನಿಕರು ತಪ್ಪು ಮಾಹಿತಿ ಮತ್ತು ಆಘಾತಕಾರಿ ದೃಶ್ಯಗಳ ಬಗ್ಗೆ ದೂರು ನೀಡಬಹುದು.

A drone view of the aftermath of flash flooding
ನೇಪಾಳ ಪ್ರವಾಹ: ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಪತ್ತೆಗೆ ಪ್ರಯತ್ನ, ಮಾಹಿತಿ ಪಡೆದ ಸಿಎಂ ಡಿಕೆ ಶಿವಕುಮಾರ್!

ಪ್ರೆಸ್ ಕೌನ್ಸಿಲ್ ಅಧ್ಯಕ್ಷ ಉಮೇಶ್ ಶ್ರೇಷ್ಠ ಅವರ ಪ್ರಕಾರ, ಶನಿವಾರ ಸಂಜೆ 5 ಗಂಟೆಯ ವೇಳೆಗೆ ಈ ಪೋರ್ಟಲ್ 101 ದೂರುಗಳನ್ನು ಸ್ವೀಕರಿಸಿತ್ತು. ಭೋಟೆಕೋಶಿ ಪ್ರವಾಹಕ್ಕೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ (AI) ಬಳಸಿ ದಾರಿ ತಪ್ಪಿಸುವ ದೃಶ್ಯಗಳನ್ನು ಸೃಷ್ಟಿಸುವ ಪ್ರಮಾಣ ಹೆಚ್ಚುತ್ತಿದೆ ಎಂದು 'ನೇಪಾಳ ಫ್ಯಾಕ್ಟ್ ಚೆಕ್'ನ ಸಹಾಯಕ ಸಂಪಾದಕಿ ಚೇತನಾ ಕುನ್ವಾರ್ ತಿಳಿಸಿದ್ದಾರೆ.

AI ಮೂಲಕ ಸೃಷ್ಟಿಸಲಾದ ವಿಷಯಗಳು ಮತ್ತು 'ಮೊದಲು ಮತ್ತು ನಂತರ'ದ (before and after)ನಕಲಿ ದೃಶ್ಯಗಳನ್ನು ಗುರುತಿಸುವುದು ಸಾರ್ವಜನಿಕರಿಗೆ ಅತ್ಯಂತ ಕಷ್ಟಕರವಾಗಿರುತ್ತದೆ ಎಂದು ಅವರು ಹೇಳಿದರು. ಇದೇ ವೇಳೆ, ಇತರ ದೇಶಗಳಲ್ಲಿ ಸಂಭವಿಸಿದ ವಿಪತ್ತುಗಳ ವಿಡಿಯೋಗಳನ್ನು ನೇಪಾಳದ್ದೇ ಎಂಬಂತೆ ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com