Honeymoon Murder: ಗಂಡನನ್ನು ಕೊಂದು ಹಿಟ್ ಅಂಡ್ ರನ್ ಕತೆ ಕಟ್ಟಿದ ನವವಿವಾಹಿತೆ; ಅಂಜು-ಸಂಜು ಪ್ರೀತಿಗೆ ಬಲಿಯಾದ ಆಶಿಶ್!

ರಾಜಸ್ಥಾನದ ನವವಿವಾಹಿತ ದಂಪತಿಗಳಾದ ಆಶಿಶ್ ಮತ್ತು ಅಂಜು ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಆಶಿಶ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅಂಜು ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಹಿಟ್-ಅಂಡ್-ರನ್ ಪ್ರಕರಣದಂತೆ ತೋರುತ್ತಿದ್ದ ಈ ಘಟನೆ ತಿರುವು ಪಡೆದಿದೆ.
Honeymoon Murder: ಗಂಡನನ್ನು ಕೊಂದು ಹಿಟ್ ಅಂಡ್ ರನ್ ಕತೆ ಕಟ್ಟಿದ ನವವಿವಾಹಿತೆ; ಅಂಜು-ಸಂಜು ಪ್ರೀತಿಗೆ ಬಲಿಯಾದ ಆಶಿಶ್!
Updated on

ರಾಜಸ್ಥಾನ: ಹನಿಮೂನ್ ಗೆ ತೆರಳಿದ್ದ ವೇಳೆ ಪ್ಲಾನ್ ಮಾಡಿ ಗಂಡನನ್ನು ಕೊಲ್ಲಿಸಿ ಹಿಟ್ ಅಂಡ್ ರನ್ ಕತೆ ಕಟ್ಟಿದ್ದ ನವವಿವಾಹಿತೆಯನ್ನು ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಸಂಜೆ ರಾಜಸ್ಥಾನದ ನವವಿವಾಹಿತ ದಂಪತಿಗಳಾದ ಆಶಿಶ್ ಮತ್ತು ಅಂಜು ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಆಶಿಶ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅಂಜು ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಹಿಟ್-ಅಂಡ್-ರನ್ ಪ್ರಕರಣದಂತೆ ತೋರುತ್ತಿದ್ದ ಈ ಘಟನೆ ತಿರುವು ಪಡೆದಿದೆ.

ಪೊಲೀಸ್ ತನಿಖೆಯಲ್ಲಿ ಅಂಜು, ತನ್ನ ಪತಿ ಆಶಿಶ್‌ನನ್ನು ತನ್ನ ಗೆಳೆಯ ಸಂಜು ಹಾಗೂ ಇತರ ಇಬ್ಬರೊಂದಿಗೆ ಸೇರಿ ಕೊಂದಿದ್ದಳು, ನಂತರ ಅದನ್ನು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ್ದಳು ಎಂದು ತಿಳಿದುಬಂದಿದೆ.

ಜನವರಿ 30 ರ ರಾತ್ರಿ ಸುಮಾರು 9 ಗಂಟೆಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು ಎಂದು ಶ್ರೀ ಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್ ಅವರು ಹೇಳಿದ್ದಾರೆ . ದಂಪತಿ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಲಾಯಿತು. ದಂಪತಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಶಿಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

Honeymoon Murder: ಗಂಡನನ್ನು ಕೊಂದು ಹಿಟ್ ಅಂಡ್ ರನ್ ಕತೆ ಕಟ್ಟಿದ ನವವಿವಾಹಿತೆ; ಅಂಜು-ಸಂಜು ಪ್ರೀತಿಗೆ ಬಲಿಯಾದ ಆಶಿಶ್!
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ: ವೃದ್ಧ ಮಹಿಳೆ ಮೇಲೆ ಅತ್ಯಾಚಾರ-ಕೊಲೆ, ಆರೋಪಿ ಆತ್ಮಹತ್ಯೆ

ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ನಮಗೆ ಮಾಹಿತಿ ನೀಡಲಾಯಿತು. ನಾವು ಅಪಘಾತದ ಸ್ಥಳವನ್ನು ಸಮೀಕ್ಷೆ ಮಾಡಿದ್ದೇವೆ, ತನಿಖೆ ನಡೆಸಲು ವಿಧಿವಿಜ್ಞಾನ ಪ್ರಯೋಗಾಲಯ (FSL) ತಂಡವನ್ನು ಸಹ ಕರೆಸಿದ್ದೇವೆ" ಎಂದು ಎಸ್ಪಿ ಅಮೃತಾ ದುಹಾನ್ ಹೇಳಿದರು.

23 ವರ್ಷದ ಅಂಜು, ತಾನು ಮತ್ತು ತನ್ನ ಪತಿ ಆಶೀಶ್ ಸಂಜೆ ವಾಕಿಂಗ್ ಗೆ ಹೊರಟಿದ್ದಾಗ ಅಪರಿಚಿತ ವಾಹನವೊಂದು ನಮಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರಿಗೆ ತಿಳಿಸಿದರು. ತಾನು ಧರಿಸಿದ್ದ ಚಿನ್ನಾಭರಣಗಳನ್ನು ದೋಚಲಾಗಿದೆ ಎಂದು ಸಹ ಅವಳು ಹೇಳಿಕೊಂಡಳು.

ಆದಾಗ್ಯೂ, ತನಿಖೆಯ ಸಮಯದಲ್ಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದರು. ಏಕೆಂದರೆ ಅದು ವಾಸ್ತವಿಕತೆ ಮತ್ತು ಅಂಜು ಅವರ ಸಾಕ್ಷ್ಯದ ನಡುವೆ ವ್ಯತ್ಯಾಸ ಹೊಂದಿತ್ತು. ಆಶಿಶ್ ಅವರ ದೇಹದಲ್ಲಿ ಗಾಯದ ಗುರುತುಗಳಿದ್ದವು ಮತ್ತು ವೈದ್ಯಕೀಯ ವರದಿಯ ಪ್ರಕಾರ ಅವರನ್ನು ಕತ್ತು ಹಿಸುಕಿ ಕೊಂದಂತೆ ಕಾಣುತ್ತಿತ್ತು. ಮತ್ತೊಂದೆಡೆ, ಅಂಜು ಯಾವುದೇ ಗಾಯಗಳಿಲ್ಲದೆ ತಪ್ಪಿಸಿಕೊಂಡಿದ್ದಳು. ಇದು ಅನುಮಾನಕ್ಕೆ ಕಾರಣವಾಗಿತ್ತು.

ಪೊಲೀಸ್ ಮೂಲಗಳ ಪ್ರಕಾರ, ಅಂಜು ಫೋನ್ ದಾಖಲೆಗಳು ಅವರು ತಮ್ಮ ಮನೆಯ ಹತ್ತಿರ ವಾಸಿಸುತ್ತಿದ್ದ ಸಂಜು ಎಂಬ ವ್ಯಕ್ತಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಳು ಎಂಬುದನ್ನು ತೋರಿಸಿತ್ತು.

ಅಂಜು ಮತ್ತು ಆಶಿಶ್ ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ ಅಂಜುಗೆ ಆಶೀಶ್ ಜೊತೆ ಮದುವೆ ಇಷ್ಟ ಇರಲಿಲ್ಲ. ಹೀಗಾಗಿ ಆಶೀಶ್ ಜೊತೆ ಮದುವೆಯಿಂದ ಆಕೆ ಬೇಸರಗೊಂಡಿದ್ದಳು. ತನ್ನ ಮಾಜಿ ಗೆಳೆಯ ಸಂಜು ಜೊತೆ ರಾಜಿ ಮಾಡಿಕೊಂಡಳು .

Honeymoon Murder: ಗಂಡನನ್ನು ಕೊಂದು ಹಿಟ್ ಅಂಡ್ ರನ್ ಕತೆ ಕಟ್ಟಿದ ನವವಿವಾಹಿತೆ; ಅಂಜು-ಸಂಜು ಪ್ರೀತಿಗೆ ಬಲಿಯಾದ ಆಶಿಶ್!
ಉತ್ತರ ಕನ್ನಡ: ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ; ದೂರು ನೀಡಿದ್ದಕ್ಕೆ ಹತ್ಯೆ; ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಬಂಧನ

ಜನವರಿ 30 ರ ರಾತ್ರಿ, ಅಂಜು ಆಶಿಶ್‌ನನ್ನು ಪ್ರತ್ಯೇಕ ರಸ್ತೆಗೆ ಕರೆದೊಯ್ದಳು. ಅಲ್ಲಿ ಸಂಜು ಮತ್ತು ಅವನ ಸಹಚರರು ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದರು" ಎಂದು ಎಸ್‌.ಪಿ. ಅಮೃತ್ ಧುವಾನ್ ಹೇಳಿದರು.

ಅಂಜು ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಆರೋಪಿಗೆ ನೀಡಿ, ತನ್ನನ್ನು ದೋಚಲಾಗಿದೆ ಎಂದು ಬಿಂಬಿಸಿದಳು. ದಾಳಿಯ ನಂತರ ಅವಳು ಪ್ರಜ್ಞಾಹೀನಳಂತೆ ನಟಿಸಿದಳು, ಆದರೆ ಆಶಿಶ್ ದೇಹದ ಮೇಲಿದ್ದ ಗಾಯದ ಗುರುತುಗಳು ಸಂಚು ಬಯಲಾಗಲು ಕಾರಣವಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com