ರಾಹುಲ್ 'ಆ' ಬಗ್ಗೆ ಮಾತನಾಡುವಾಗಲೆಲ್ಲ 'ಆಪ್ಕೋ ಖುಜ್ಲಿ ಉತ್ತಿ ಹೈ': ರಾಜ್ಯಸಭೆಯಲ್ಲಿ ಖರ್ಗೆ - ಜೆಪಿ ನಡ್ಡಾ ವಾಗ್ವಾದ

'ರಾಹುಲ್ ಗಾಂಧಿ ಸಂಸತ್ತಿನಲ್ಲಿ ದೇಶದ ಹಿತಾಸಕ್ತಿಗಳ ಬಗ್ಗೆ ಚರ್ಚಿಸಲು ಬಯಸಿದ್ದರು. ಆದರೆ, ಅವರಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ' ಎಂದು ಹೇಳಿದರು.
Leader of the Opposition in Rajya Sabha Mallikarjun Kharge speaks in the House during the Budget session of Parliament.
ಬಜೆಟ್ ಅಧಿವೇಶನದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸದನದಲ್ಲಿ ಮಾತನಾಡಿದರು.
Updated on

ಗುರುವಾರ ಲೋಕಸಭೆಯಲ್ಲಿ ವಿಪಕ್ಷಗಳ ಪ್ರತಿಭಟನೆ ಮತ್ತು ಪದೇ ಪದೆ ಮುಂದೂಡಿಕೆಯ ನಡುವೆ, ಸಂಸತ್ತಿನ ಮೇಲ್ಮನೆ ಕೂಡ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇಂದ್ರ ಸಚಿವ ಜೆಪಿ ನಡ್ಡಾ ನಡುವೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು.

ಭಾರತದ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ 'ಅಪ್ರಕಟಿತ ಆತ್ಮಚರಿತ್ರೆ' ಪುಸ್ತಕದಲ್ಲಿನ ವಿಚಾರವನ್ನು ಉಲ್ಲೇಖಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬುಧವಾರ ಸ್ಪೀಕರ್ ಅನುಮತಿ ನಿರಾಕರಿಸಿದ್ದರು. ಆ ಘಟನೆಗಳ ಬಗ್ಗೆ ಪ್ರಸ್ತಾಪಿಸಲು ಮಲ್ಲಿಕಾರ್ಜುನ ಖರ್ಗೆ ಮುಂದಾದಾಗ ವಾಗ್ವಾದ ನಡೆಯಿತು.

ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಖರ್ಗೆ, 'ಸಂಸತ್ತು ಎಂದರೆ ಲೋಕಸಭೆ ಮತ್ತು ರಾಜ್ಯಸಭೆ. ಲೋಕಸಭೆಯ ಸದಸ್ಯರು ದೇಶದ ಹಿತಾಸಕ್ತಿಗಳ ಬಗ್ಗೆ ಮಾತನಾಡಲು ಬಯಸಿದ್ದರು. ಆದರೆ, ಮಾತನಾಡಲು ಅವಕಾಶ ನೀಡಲಿಲ್ಲ. ನೀವು ಈ ರೀತಿ ಸದನವನ್ನು ಹೇಗೆ ನಡೆಸುತ್ತೀರಿ?' ಎಂದು ಹೇಳಿದರು.

ಖರ್ಗೆ ಅವರ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ನಡ್ಡಾ, ಲೋಕಸಭೆಗೆ ಸಂಬಂಧಿಸಿದ ವಿಷಯಗಳನ್ನು ರಾಜ್ಯಸಭೆಯಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಲೋಕಸಭೆಯ ವಿಚಾರಗಳನ್ನು ರಾಜ್ಯಸಭೆಯಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷ (ಎಲ್‌ಒಪಿ) ತಿಳಿದುಕೊಳ್ಳಬೇಕು ಎಂದು ವಾದಿಸಿದರು.

ಆದಾಗ್ಯೂ, ತಮ್ಮ ಟೀಕೆಯನ್ನು ಮುಂದುವರೆಸಿದ ಖರ್ಗೆ, 'ರಾಹುಲ್ ಗಾಂಧಿ ಸಂಸತ್ತಿನಲ್ಲಿ ದೇಶದ ಹಿತಾಸಕ್ತಿಗಳ ಬಗ್ಗೆ ಚರ್ಚಿಸಲು ಬಯಸಿದ್ದರು. ಆದರೆ, ಅವರಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ' ಎಂದು ಹೇಳಿದರು.

Leader of the Opposition in Rajya Sabha Mallikarjun Kharge speaks in the House during the Budget session of Parliament.
Watch | ಲೋಕಸಭೆಯಲ್ಲಿ ನರವಾಣೆ ಪುಸ್ತಕ ಪ್ರಸ್ತಾಪ! ರಾಹುಲ್ ಭಾಷಣಕ್ಕೆ ಶಾ, ರಾಜನಾಥ್ ಆಕ್ರೋಶ!

'ನೀವು ನನಗೆ ದೇಶದ ಪ್ರಜಾಪ್ರಭುತ್ವದ ತತ್ವಗಳ ಬಗ್ಗೆ ಮಾತನಾಡಲು ಅವಕಾಶ ನೀಡಿದ್ದೀರಿ. ಸಂಸತ್ತು ಲೋಕಸಭೆ ಮತ್ತು ರಾಜ್ಯಸಭೆಯನ್ನು ಒಳಗೊಂಡಿದೆ. ನಮ್ಮ ಸಂವಿಧಾನದ ಪ್ರಕಾರ, ನಮಗೆ ಎರಡು ಸದನಗಳಿವೆ. ಆದರೆ, ಲೋಕಸಭೆಯ ಎಲ್‌ಒಪಿಗೆ ಮಾತನಾಡಲು ಅವಕಾಶವಿಲ್ಲ. ಸದನಕ್ಕೆ ಅಡ್ಡಿಯುಂಟುಮಾಡಲು ನಾವು ಬಯಸುವುದಿಲ್ಲ. ಕಳೆದ ನಾಲ್ಕು ದಿನಗಳಿಂದ, ಎಲ್‌ಒಪಿಗೆ ಮಾತನಾಡಲು ಅವಕಾಶ ನೀಡದ ಕಾರಣ ಸದನವು ಕಾರ್ಯನಿರ್ವಹಿಸುತ್ತಿಲ್ಲ' ಎಂದು ಅವರು ಹೇಳಿದರು.

'ಸಂಸತ್ತು ಒಂದೇ ಸದನವನ್ನು ಒಳಗೊಂಡಿಲ್ಲ. ನಿಮ್ಮ ತಪ್ಪುಗಳನ್ನು ಮರೆಮಾಡಲು ನೀವು ಒಂದು ಸದನಕ್ಕೆ ಅಡ್ಡಿಪಡಿಸಲು ಸಾಧ್ಯವಿಲ್ಲ. ನೀವು ರಾಷ್ಟ್ರಕ್ಕೆ ದ್ರೋಹ ಮಾಡಿದ್ದೀರಿ ಮತ್ತು ಅವಮಾನಿಸಿದ್ದೀರಿ. ರಾಹುಲ್ ಆ ಬಗ್ಗೆ ಮಾತನಾಡುವಾಗ, 'ಆಪ್ಕೋ ಖುಜ್ಲಿ ಉತ್ತಿ ಹೈ' (ನಿಮಗೆ ತುರಿಕೆ ಬರುತ್ತಿದೆ)...' ಎಂದರು.

ಖರ್ಗೆ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನಡ್ಡಾ, 'ಲೋಕಸಭೆಯ ಕಲಾಪಗಳನ್ನು ರಾಜ್ಯಸಭೆಯಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದು ಎಲ್‌ಒಪಿ ತಿಳಿದಿರಬೇಕು. ಹಿಂದಿನ ಸಭಾಪತಿ ಈ ಬಗ್ಗೆ ತೀರ್ಪುಗಳನ್ನು ನೀಡಿದ್ದಾರೆ. ಅವರು ಬಯಸಿದರೆ, ಅವರು ತಮ್ಮ ಪಕ್ಷದ ಸದಸ್ಯರನ್ನು ಲೋಕಸಭೆಯಲ್ಲಿ ಚರ್ಚಿಸಲು ಕೇಳಬೇಕು. ಕಾಂಗ್ರೆಸ್‌ಗೆ ಸಂದೇಶ ನೀಡಲು ಬಯಸುತ್ತೇನೆ ಮತ್ತು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಎಲ್ಲ ಚರ್ಚೆಗಳಿಗೆ ಸಿದ್ಧವಾಗಿದೆ' ಎಂದು ಹೇಳಿದರು.

'ಲೋಕಸಭೆಯಲ್ಲಿ ಎತ್ತಲಾದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಧಾನಿ ಮೋದಿ ಸಿದ್ಧರಾಗಿದ್ದರು. ಆದರೆ, ನೀವು ಸದನ ನಡೆಯಲು ಬಿಡಲಿಲ್ಲ. ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಹೇಳಿಕೆ ನೀಡುವಂತೆ ನೀವು ಒತ್ತಾಯಿಸಿದಿರಿ; ಪಿಯೂಷ್ ಗೋಯಲ್ ಜಿ ಹೇಳಿಕೆ ನೀಡಿದರು' ಎಂದು ಅವರು ಹೇಳಿದರು.

Leader of the Opposition in Rajya Sabha Mallikarjun Kharge speaks in the House during the Budget session of Parliament.
'ಜವಾಬ್ದಾರಿಯಿಂದ ಪ್ರಧಾನಿ ಮೋದಿ ನುಣುಚಿಕೊಂಡರು': ಸಂಸತ್ ಹೊರಗೆ ನರವಾಣೆ ಆತ್ಮಚರಿತ್ರೆ ಪ್ರದರ್ಶಿಸಿದ Rahul Gandhi; Video

'ವಿರೋಧ ಪಕ್ಷದ ನಾಯಕರು ತಮಗೆ ನೀಡಲಾದ ಸಮಯದಲ್ಲಿ 20 ನಿಮಿಷ ಮಾತನಾಡಿದರು. ಆದರೆ, ಅಗತ್ಯಬಿದ್ದರೆ ಹೆಚ್ಚು ಮಾತನಾಡಬಹುದು ಎಂದು ನಾವು ಹೇಳಿದ್ದೇವೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುವುದು ತಪ್ಪು ಮತ್ತು ನಾನು ಅದನ್ನು ಖಂಡಿಸುತ್ತೇನೆ. ರಾಜಕೀಯ ಉದ್ದೇಶಗಳಿಗಾಗಿ ಅಂತಹ ವಿಚಾರಗಳನ್ನು ಗುರಾಣಿಯಾಗಿ ಬಳಸಬೇಡಿ' ಎಂದು ನಡ್ಡಾ ಹೇಳಿದರು.

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಒಳಗೊಂಡ ರಾಜಕೀಯವಾಗಿ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿರುವ ನರವಣೆ ಅವರ 'ಆತ್ಮಚರಿತ್ರೆ' ಕುರಿತು ಮಾತನಾಡಲು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಕಾಂಗ್ರೆಸ್ ನೇತೃತ್ವದ ವಿಪಕ್ಷ ರಾಜ್ಯಸಭೆಯಿಂದ ಸಭಾತ್ಯಾಗ ನಡೆಸಿದವು.

ಈ ಮಧ್ಯೆ, ರಾಹುಲ್ ಗಾಂಧಿ ಅವರಿಗೆ ಈ ವಿಷಯದ ಕುರಿತು ಮಾತನಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷಗಳು ನಡೆಸಿದ ನಿರಂತರ ಪ್ರತಿಭಟನೆಯ ನಡುವೆ ಗುರುವಾರ ಲೋಕಸಭೆಯನ್ನು ಹಲವು ಬಾರಿ ಮುಂದೂಡಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com