ವಿಮಾನ ಪತನದಲ್ಲಿ ಅಜಿತ್ ಪವಾರ್ ಸಾವು: ಎರಡೂ ಫ್ಲೈಟ್ ರೆಕಾರ್ಡರ್‌ಗಳು ಹಾನಿಗೊಳಗಾಗಿವೆ; ನಾಗರಿಕ ವಿಮಾನಯಾನ ಸಚಿವಾಲಯ

ಲಿಯರ್‌ಜೆಟ್ 45 ವಿಮಾನ VT-SSK ಅಪಘಾತಕ್ಕೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಿವರವಾದ ತನಿಖೆ ನಡೆಸುತ್ತಿದೆ ಎಂದು ತಿಳಿಸಲಾಗಿದೆ.
A team of forensic experts investigates the site of the plane crash
ವಿಮಾನ ಅಪಘಾತದ ಸ್ಥಳವನ್ನು ವಿಧಿವಿಜ್ಞಾನ ತಜ್ಞರ ತಂಡ ಪರಿಶೀಲಿಸುತ್ತಿದೆ.
Updated on

ಮುಂಬೈ: ಜನವರಿ 28 ರಂದು ಬಾರಾಮತಿಯಲ್ಲಿ ಅಪಘಾತಕ್ಕೀಡಾದ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನದ ಎರಡೂ ಸ್ವತಂತ್ರ ಫ್ಲೈಟ್ ರೆಕಾರ್ಡರ್‌ಗಳಿಗೆ ಬೆಂಕಿಯಿಂದಾಗಿ ಹಾನಿಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಲಿಯರ್‌ಜೆಟ್ 45 ವಿಮಾನ VT-SSK ಅಪಘಾತಕ್ಕೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಿವರವಾದ ತನಿಖೆ ನಡೆಸುತ್ತಿದೆ ಎಂದು ತಿಳಿಸಲಾಗಿದೆ.

ವಿಮಾನ (ಅಪಘಾತಗಳು ಮತ್ತು ಘಟನೆಗಳ ತನಿಖೆ) ನಿಯಮಗಳು, 2017 ಮತ್ತು ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ICAO ಅನುಬಂಧ 13ರ ಶಿಫಾರಸು ಮಾಡಲಾದ ಅಭ್ಯಾಸಗಳ ಅಡಿಯಲ್ಲಿ ಕಟ್ಟುನಿಟ್ಟಿನ ತನಿಖೆ ನಡೆಸಲಾಗುತ್ತಿದೆ.

'ವಿಮಾನವು ಎರಡು ಸ್ವತಂತ್ರ ಫ್ಲೈಟ್ ರೆಕಾರ್ಡರ್‌ಗಳನ್ನು ಹೊಂದಿತ್ತು. ಅಪಘಾತದ ಸಮಯದಲ್ಲಿ ಎರಡೂ ರೆಕಾರ್ಡರ್‌ಗಳು ದೀರ್ಘಕಾಲದವರೆಗೆ ತೀವ್ರವಾದ ಶಾಖಕ್ಕೆ ಒಡ್ಡಿಕೊಂಡವು ಮತ್ತು ಬೆಂಕಿಯಿಂದಾಗಿ ಹಾನಿಗೊಳಲಾಗಿವೆ' ಎಂದು ಹೇಳಲಾಗಿದೆ.

L3-ಕಮ್ಯುನಿಕೇಷನ್ಸ್ ತಯಾರಿಸಿದ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR) ಅನ್ನು AAIB ಫ್ಲೈಟ್ ರೆಕಾರ್ಡರ್ ಪ್ರಯೋಗಾಲಯದಲ್ಲಿ ಯಶಸ್ವಿಯಾಗಿ ಡೌನ್‌ಲೋಡ್ ಮಾಡಲಾಗಿದೆ ಎಂದು ಹೇಳಿದೆ.

A team of forensic experts investigates the site of the plane crash
Plane Crash: ವಿಮಾನ ಅಪಘಾತದಲ್ಲಿ ಸಾಯುವ ಮುನ್ನ ಅಜಿತ್ ಪವಾರ್ ಕೊನೆಯ ಫೋನ್ ಸಂಭಾಷಣೆಯಲ್ಲಿ ಹೇಳಿದ್ದೇನು?

'ಹನಿವೆಲ್ ತಯಾರಿಸಿದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ವಿವರವಾದ ತಾಂತ್ರಿಕ ಪರೀಕ್ಷೆಗೆ ಒಳಗಾಗುತ್ತಿದೆ. ಡೇಟಾ ಮರುಪಡೆಯುವಿಕೆಯಲ್ಲಿ ವಿಶೇಷ ಬೆಂಬಲಕ್ಕಾಗಿ ಉತ್ಪಾದನಾ ರಾಜ್ಯದ ಮಾನ್ಯತೆ ಪಡೆದ ಪ್ರತಿನಿಧಿಯಿಂದ ಸಹಾಯವನ್ನು ಕೋರಲಾಗಿದೆ' ಎಂದಿದೆ.

ಸಮಗ್ರ, ವಸ್ತುನಿಷ್ಠ ಮತ್ತು ಪುರಾವೆ ಆಧಾರಿತ ತನಿಖೆಯನ್ನು ಖಚಿತಪಡಿಸಿಕೊಳ್ಳಲು AAIB ಎಲ್ಲ ನಿಗದಿತ ತಾಂತ್ರಿಕ ಮತ್ತು ಕಾರ್ಯವಿಧಾನದ ಪ್ರೋಟೋಕಾಲ್‌ಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಿದೆ. ತನಿಖಾ ಬ್ಯೂರೋ ಪಾರದರ್ಶಕತೆಗೆ ಸಂಪೂರ್ಣವಾಗಿ ಬದ್ಧವಾಗಿದೆ ಮತ್ತು ತನಿಖೆಯ ಸೂಕ್ತ ಹಂತದಲ್ಲಿ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತದೆ.

ಘಟನೆಯ ಬಗ್ಗೆ ವದಂತಿಗಳನ್ನು ಹರಡುವುದರಿಂದ ಅಥವಾ ಯಾವುದೇ ಊಹಾಪೋಹಗಳಿಂದ ದೂರವಿರಲು ಮತ್ತು ತನಿಖೆಯು ಯಾವುದೇ ಹಸ್ತಕ್ಷೇಪವಿಲ್ಲದೆ ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸಲು ಅವಕಾಶ ನೀಡುವಂತೆ AAIB ಎಲ್ಲರಿಗೂ ವಿನಂತಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com