

ನವದೆಹಲಿ: ನಾನು ಗಾಂಧಿವಾದಿಯಾಗಿದ್ದು, ನೆಹರೂ ಮತ್ತು ರಾಜೀವ್ ವಾದಿಯಾಗಿದ್ದೇನೆ. ಆದರೆ ರಾಹುಲ್ ವಾದಿಯಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಬುಧವಾರ ಹೇಳಿದ್ದಾರೆ. ರಾಹುಲ್ ಗಾಂಧಿ ನನಗಿಂತಲೂ ಬಹಳ ಚಿಕ್ಕವರಾಗಿದ್ದು, ಅವರ ರಾಜಕೀಯ ಜೀವನ ನನ್ನಗಿಂತಲೂ ಬಹಳ ದೂರದಲ್ಲಿದೆ ಎಂದಿದ್ದಾರೆ.
ಇಂದಿರಾವಾದಿ ಅಂತನೂ ಹೇಳಲ್ಲ. ಏಕೆಂದರೆ, ಕೇವಲ 18 ತಿಂಗಳಾದರೂ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮೂಲಕ ಇಂದಿರಾ ಗಾಂಧಿ "ನಮ್ಮ ಪ್ರಜಾಪ್ರಭುತ್ವವನ್ನು ದಬ್ಬಾಳಿಕೆಯನ್ನಾಗಿ ಪರಿವರ್ತಿಸುವುದನ್ನು ನಾನು ಸಂಪೂರ್ಣವಾಗಿ ಒಪ್ಪಿರಲಿಲ್ಲ ಎಂದರು.
ಇತ್ತೀಚಿಗೆ ಮಾಧ್ಯಮಗಳಲ್ಲಿ ವರದಿಯಾದ ರಾಹುಲ್ ಗಾಂಧಿ ಕುರಿತು ಅವರ ಹೇಳಿಕೆ ಉಲ್ಲೇಖಿಸಿದ ಅಯ್ಯರ್, ನನಗಿಂತ ಸುಮಾರು 30 ವರ್ಷ ಚಿಕ್ಕ ಹುಡುಗನಾಗಿದ್ದು, ಅವರೊಂದಿಗೆ ಕೆಲಸ ಮಾಡಲು ನನಗೆ ಅವಕಾಶವಿಲ್ಲದಿರುವಾಗ ನಾನು ರಾಹುಲ್ ವಾದಿ ಎಂದು ಹೇಗೆ ನಿರೀಕ್ಷಿಸಲು ಸಾಧ್ಯ ಎಂದರು.
ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಅಯ್ಯರ್, "ಮಹಾತ್ಮ ಗಾಂಧಿಯವರು ನಮ್ಮನ್ನು ತಮ್ಮ ತೋಳುಗಳಲ್ಲಿ ಎತ್ತಿಕೊಂಡು 'ಯೇ ಮೇರೆ ಆಂಖೋಂ ಕೆ ಸೂರಜ್ ಔರ್ ಚಂದ್ ಹೈ' ಎಂದು ಹೇಳಿದಾಗ ನನಗೆ ಆರು ವರ್ಷ ಮತ್ತು ನನ್ನ ಸಹೋದರನಿಗೆ ನಾಲ್ಕು ವರ್ಷ. ಅಲ್ಲಿಂದ ನಾನು ಗಾಂಧಿವಾದೆಯಾದೆ. ನೆಹರೂ ಪ್ರಧಾನಿಯಾದಾಗ ನನಗೆ ಆರು ವರ್ಷ. ನನ್ನ ಸಂಪೂರ್ಣ ಬೆಳವಣಿಗೆಯ ವರ್ಷಗಳು ನೆಹರೂ ನೀತಿಯಲ್ಲಿ ಮುಳುಗಿದ್ದವು; ಅದಕ್ಕಾಗಿಯೇ ನಾನು ನನ್ನನ್ನು ನೆಹರುವಾದಿ ಎಂದು ಪರಿಗಣಿಸುತ್ತೇನೆ.. ನನಗಿಂತ ರಾಜೀವ್ ಗಾಂಧಿ ಎರಡು ವರ್ಷ ಚಿಕ್ಕವರಾದರೂ ನಾನು ರಾಜೀವ್ ವಾದಿ ಏಕೆಂದರೆ, ನನ್ನನ್ನು ಪ್ರಧಾನಿ ಕಚೇರಿಗೆ ಕರೆತಂದು ಬೆರಗುಗೊಳಿಸಿದರು. ನಾನು ಅದನ್ನು ನಂಬಲು ಸಾಧ್ಯವಿಲ್ಲ. ಹೀಗೆ ನಾನು ರಾಜೀವ್ ವಾದಿಯಾದೆ ಎಂದರು.
ಇಂದಿರಾ ವಾದಿ ಅಂತಾ ಹೇಳಲ್ಲ. ಏಕೆಂದರೆ ಅವರ 18 ತಿಂಗಳ ತುರ್ತುಪರಿಸ್ಥಿತಿ ಘೋಷಣೆಗೆ ನನ್ನ ಸಂಪೂರ್ಣ ಒಪ್ಪಿಗೆ ಇರಲಿಲ್ಲ. ಆದ್ರೆ ನನಗಿಂತಲೂ 30 ವರ್ಷ ಚಿಕ್ಕವನಾಗಿದ್ದು, ಆತನೊಂದಿಗೆ ಕೆಲಸ ಮಾಡಲು ಅವಕಾಶ ಇಲ್ಲದಿರುವಾಗ ಹೇಗೆ ರಾಹುಲ್ ವಾದಿ ಎಂದು ನಿರೀಕ್ಷಿಸಲು ಸಾಧ್ಯ. ಹೀಗಾಗಿ ನಾನು ರಾಹುಲ್ ವಾದಿಯಲ್ಲ. ನನಗಿಂತಲೂ ಅವರು ಬಹಳ ಚಿಕ್ಕವರು. ಅವರ ರಾಜಕೀಯ ಜೀವನ ನನಗಿಂತಲೂ ಬಹಳ ದೂರದಲ್ಲಿದೆ ಎಂದು ಅಯ್ಯರ್ ಹೇಳಿದರು.
ಕೇರಳದ ಸಿಪಿಐನ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಮಣಿಶಂಕರ್ ಅಯ್ಯರ್ ಹೇಳಿಕೆಗೆ ಕಾಂಗ್ರೆಸ್ ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿವೆ. ಈ ನಡುವೆ ಅವರು ಕಳೆದ ಕೆಲವು ವರ್ಷಗಳಿಂದ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
Advertisement