'S-400 ಸುದರ್ಶನ' ಕ್ಷಿಪಣಿಯ ಪರಾಕ್ರಮವನ್ನು ಜಗತ್ತಿಗೆ ತೋರಿಸಿದ IAF! ಈಗ Video ರಿಲೀಸ್ ಮಾಡಿದ್ದು ಯಾಕೆ?

ಮೇ 2025 ರಲ್ಲಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಕೂಡಾ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಕಾರ್ಯಾಚರಣೆ ವೇಳೆ S‑400 ಸಿಸ್ಟಮ್ ಪ್ರಮುಖ ಪಾತ್ರವನ್ನು ವಹಿಸಿದೆ
The S-400 Triumf is a long-range surface-to-air missile defence system.
S-400 ಸುದರ್ಶನ್ ದೂರಗಾಮಿ ಕ್ಷಿಪಣಿಯ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಭಾರತೀಯ ವಾಯುಪಡೆಯ ರಕ್ಷಣಾ ವ್ಯವಸ್ಥೆಯ ಪ್ರಮುಖ ಅಸ್ತ್ರವಾದ ಎಸ್-400 'ಸುದರ್ಶನ್' ದೂರಗಾಮಿ ಕ್ಷಿಪಣಿಯ ಪರಾಕ್ರಮವನ್ನು ತೋರಿಸುವ ವಿಡಿಯೋವೊಂದನ್ನು ಭಾರತೀಯ ವಾಯುಪಡೆ ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಿದೆ.

ಈ ವಿಡಿಯೋದಲ್ಲಿ ರೇಡಾರ್ ದೂರಗಾಮಿ ಗುರಿಯನ್ನು ಪತ್ತೆ ಮಾಡುತ್ತದೆ. ನಂತರ ಕ್ಷಿಪಣಿಯು ದೀರ್ಘ ವ್ಯಾಪ್ತಿಯ ಗುರಿಯನ್ನು ಉಡಾಯಿಸುತ್ತದೆ ಮತ್ತು ನಾಶಪಡಿಸುತ್ತದೆ. ಮಿಲಿಟರಿ ಇತಿಹಾಸದಲ್ಲಿ ದಾಖಲಾದ ಅತಿ ಹೆಚ್ಚಿನ ಸಾವಿಗೆ ಕಾರಣವಾದ ಅಸ್ತ್ರ ಎಂಬರ್ಥದ ಟೈಟಲ್ ನಡಿ ಈ ವಿಡಿಯೋವನ್ನು ಸೇನಾಪಡೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಮೇ 2025 ರಲ್ಲಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಕೂಡಾ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಕಾರ್ಯಾಚರಣೆ ವೇಳೆ S‑400 ಸಿಸ್ಟಮ್ ಪ್ರಮುಖ ಪಾತ್ರವನ್ನು ವಹಿಸಿದೆ ಮತ್ತು ಪಾಕಿಸ್ತಾನದ ಪ್ರದೇಶದೊಳಗೆ ಸುಮಾರು 300 ಕಿಮೀ ಗುರಿಯನ್ನು ಹೊಡೆಯಲು ಬಳಸಲಾಗಿತ್ತು ಎಂದು IAF ಅಧಿಕಾರಿಗಳು ಹೇಳಿದ್ದಾರೆ.

ರಾಜಸ್ಥಾನದ ಪೋಖ್ರಾನ್‌ನಲ್ಲಿ ವಾಯುಪಡೆಯ ಪ್ರಮುಖ ಪ್ರದರ್ಶನವಾದ ವಾಯು ಶಕ್ತಿ-2026 ರ ತಾಲೀಮಿಗೂ ಮುನ್ನಾ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಅಲ್ಲಿ ಐಎಎಫ್ ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿದ್ಧವಾಗಿದೆ.

ರಷ್ಯಾದ ಅಲ್ಮಾಜ್-ಆಂಟೆ ತಂತ್ರಜ್ಞಾನದಲ್ಲಿ ತಯಾರಾದ ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಭಾರತದಲ್ಲಿ 'ಸುದರ್ಶನ ಚಕ್ರ' ಎಂದು ಕರೆಯಲಾಗುತ್ತದೆ. 2018ರಲ್ಲಿ ರಷ್ಯಾದೊಂದಿಗೆ ಸಹಿ ಹಾಕಿದ ಸುಮಾರು 5.4 ಬಿಲಿಯನ್ ಡಾಲರ್ ಒಪ್ಪಂದದ ಅಡಿಯಲ್ಲಿ ಭಾರತ ಈ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಯುದ್ಧ ವಿಮಾನಗಳು, ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಆಗಸದಲ್ಲಿಯೇ ನಾಶಪಡಿಸುವ ಸಾಮರ್ಥ್ಯ ಇದಕ್ಕಿದೆ.

The S-400 Triumf is a long-range surface-to-air missile defence system.
ಬ್ರಹ್ಮೋಸ್, S-400 ಗೂ ಠಕ್ಕರ್? ಚೀನಾ ಸೇನೆ ಬತ್ತಳಿಕೆಯಲ್ಲಿರುವ ಐದು ಭಯಾನಕ, ವಿಧ್ವಂಸಕ ಶಸ್ತ್ರಾಸ್ತ್ರಗಳು ಇವು!

ಈ ವ್ಯವಸ್ಥೆಯಲ್ಲಿರುವ 40N6 ಕ್ಷಿಪಣಿಗಳು 400 ಕಿಲೋಮೀಟರ್‌ವರೆಗೂ ಗುರಿ ತಲುಪಬಲ್ಲವು. ಅಷ್ಟೇ ಅಲ್ಲ, 600 ಕಿಲೋಮೀಟರ್ ದೂರದಲ್ಲಿರುವ ಶತ್ರುಗಳ ಚಲನವಲನವನ್ನು ಪತ್ತೆಹಚ್ಚುವ ಸಾಮರ್ಥ್ಯ ಇದರ ರಾಡಾರ್‌ಗಳಿಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com