ಇಸ್ರೇಲ್ ವಾಯು ಪ್ರದೇಶ ಬಂದ್: ದೆಹಲಿ-ಟೆಲ್ ಅವೀವ್ ಏರ್ ಇಂಡಿಯಾ ವಿಮಾನ ಮುಂಬೈಗೆ ಡೈವರ್ಟ್

ಇರಾನ್ ಮೇಲೆ ಇಸ್ರೇಲ್ ಮತ್ತೆ ಕ್ಷಿಪಣಿ ದಾಳಿ ನಡೆಸಿದ್ದು, ಇದರ ಪರಿಣಾಮವಾಗಿ ಕೆಲವು ವಾಯುಪ್ರದೇಶಗಳನ್ನು ವಿಮಾನ ಕಾರ್ಯಾಚರಣೆಗಳಿಗಾಗಿ ಮುಚ್ಚಲಾಗಿದೆ.
Delhi-Tel Aviv flight diverted to Mumbai following Israel airspace closure: Air India
ಏರ್ ಇಂಡಿಯಾ ವಿಮಾನ
Updated on

ನವದೆಹಲಿ: ಮಧ್ಯಪ್ರಾಚ್ಯ ಮತ್ತು ಉದ್ವಿಗ್ನಗೊಂಡಿದ್ದು, ಇಸ್ರೇಲ್ ತನ್ನ ವಾಯುಪ್ರದೇಶ ಬಂದ್ ಮಾಡಿದೆ. ಹೀಗಾಗಿ ಏರ್ ಇಂಡಿಯಾ ಶನಿವಾರ ತನ್ನ ದೆಹಲಿ-ಟೆಲ್ ಅವೀವ್ ವಿಮಾನವನ್ನು ಮುಂಬೈಗೆ ಡೈವರ್ಟ್ ಮಾಡಿದೆ.

ಇರಾನ್ ಮೇಲೆ ಇಸ್ರೇಲ್ ಮತ್ತೆ ಕ್ಷಿಪಣಿ ದಾಳಿ ನಡೆಸಿದ್ದು, ಇದರ ಪರಿಣಾಮವಾಗಿ ಕೆಲವು ವಾಯುಪ್ರದೇಶಗಳನ್ನು ವಿಮಾನ ಕಾರ್ಯಾಚರಣೆಗಳಿಗಾಗಿ ಮುಚ್ಚಲಾಗಿದೆ.

"ಇಸ್ರೇಲ್‌ನಲ್ಲಿ ವಾಯುಪ್ರದೇಶ ಮುಚ್ಚಿರುವುದರಿಂದ ಮತ್ತು ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯ ಹಿತದೃಷ್ಟಿಯಿಂದ ಫೆಬ್ರವರಿ 28 ರಂದು ದೆಹಲಿಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ AI139 ವಿಮಾನ ಭಾರತಕ್ಕೆ ಮರಳುತ್ತಿದೆ" ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Delhi-Tel Aviv flight diverted to Mumbai following Israel airspace closure: Air India
ಇರಾನ್ ಮೇಲೆ ಇಸ್ರೇಲ್ ದಾಳಿ: ರಾಜಧಾನಿ ಟೆಹ್ರಾನ್ ನಲ್ಲಿ IDF ಮಿಸೈಲ್ ಸ್ಟ್ರೈಕ್, ತುರ್ತು ಪರಿಸ್ಥಿತಿ ಘೋಷಣೆ!

ವಿಮಾನವನ್ನು ಮುಂಬೈಗೆ ತಿರುಗಿಸಲಾಗಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಅನಿರೀಕ್ಷಿತ ಪರಿಸ್ಥಿತಿಯಿಂದಾಗಿ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಮಾನಯಾನ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ.

ಏತನ್ಮಧ್ಯೆ, ಇರಾನ್ ಮತ್ತು ಅದರ ವಾಯುಪ್ರದೇಶಕ್ಕೆ ಸಂಬಂಧಿಸಿದ ಪ್ರಾದೇಶಿಕ ನವೀಕರಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಇಂಡಿಗೋ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com