

ನವದೆಹಲಿ: ಐಪಿಎಲ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ನೆರೆಯ ಬಾಂಗ್ಲಾದೇಶದ ಆಟಗಾರನನ್ನು ಖರೀದಿಸಿರುವ ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಐಪಿಎಲ್ 2026ಕ್ಕಾಗಿ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಶಾರುಖ್ ಖಾನ್ ಅವರು 9.20 ಕೋಟಿ ಕೊಟ್ಟು ಖರೀದಿಸಿದ್ದಾರೆ.
ಶಾರುಖ್ ಶಾನ್ ಅವರ ಈ ನಿರ್ಧಾರಕ್ಕೆ ಹಿಂದೂ ಧರ್ಮಗುರು ಜಗದ್ಗುರು ರಾಮಭದ್ರಾಚಾರ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿರ್ಧಾರ "ತುಂಬಾ ದುರದೃಷ್ಟಕರ" ಎಂದು. ಶಾರುಖ್ ಖಾನ್ ಅವರ ದೃಷ್ಟಿಕೋನವು "ಯಾವಾಗಲೂ ದೇಶದ್ರೋಹಿಯಂತೆ" ಇದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ರಾಮಭದ್ರಾಚಾರ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಭಾರತ ಸರ್ಕಾರವು ಇಂತಹ ಘಟನೆಗಳನ್ನು ಸಹಿಸಬಾರದು. ನೆರೆಯ ದೇಶದಲ್ಲಿ ವಾಸಿಸುವ ಹಿಂದೂಗಳ ಹಿತಾಸಕ್ತಿಗಳನ್ನು ಕಾಪಾಡಲು ಈ ವಿಷಯದ ಬಗ್ಗೆ ದಿಟ್ಟ ನಿಲುವನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬಾಂಗ್ಲಾದೇಶ ಸರ್ಕಾರ ಹಾಗೂ ಅಲ್ಲಿನ ಜನರು ದೇಶ ರಚನೆಯಲ್ಲಿ ಹಿಂದೂ ವಹಿಸಿದ ಪಾತ್ರವನ್ನು ಸ್ಮರಿಸಬೇಕು. ಹಿಂದೂಗಳ ಬೆಂಬಲದಿಂದಲೇ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದಿತು. ಈ ಸತ್ಯವನ್ನು ಮರೆಯಬಾರದು ಎಂದು ಹೇಳಿದರು.
Advertisement