

ಜಲ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಸ್ಲಿಂ ಮಹಿಳೆಯೊಬ್ಬರ 'ಹಿಜಾಬ್' ಎಳೆದ ವಿವಾದದ ನಡುವೆ ಮುಸ್ಲಿಂ ಮಹಿಳೆಯರನ್ನು ಕೆಟ್ಟ ಉದ್ದೇಶದಿಂದ ಮುಟ್ಟುವ ಯಾವುದೇ ವ್ಯಕ್ತಿಯ ಕೈಯನ್ನು ಕತ್ತರಿಸುವುದಾಗಿ AIMIM ನಾಯಕ ಇಮ್ತೀಯಾಜ್ ಜಲೀಲ್ ಬೆದರಿಕೆ ಹಾಕಿದ್ದಾರೆ.
ಶುಕ್ರವಾರ ಮಹಾರಾಷ್ಟ್ರದ ಜಲ್ನಾ ನಗರದಲ್ಲಿ ರ‍್ಯಾಲಿಯಲ್ಲಿ ಮಾತನಾಡಿದ ಜಲೀಲ್, ಸೋ ಕಾಲ್ಡ್ ಜಾತ್ಯತೀತ ಪಕ್ಷಗಳು ಗೂಂಡಾಗಳು ಮತ್ತು ಕ್ರಿಮಿನಲ್ ಗಳ ಪರವಾಗಿವೆ. ಆದರೆ ಮುಸ್ಲಿಮರನ್ನು ಬೆಂಬಲಿಸಲು ಹಿಂಜರಿಯುತ್ತವೆ ಎಂದು ಆರೋಪಿಸುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಿತೀಶ್ ಕುಮಾರ್ ಅವರ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಜಲೀಲ್, ಉತ್ತರ ಪ್ರದೇಶದ ಸಚಿವರೊಬ್ಬರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಯಾರಾದರೂ ಕೆಟ್ಟ ಉದ್ದೇಶದಿಂದ ಮುಸ್ಲಿಂ ಮಹಿಳೆಯರನ್ನು ಮುಟ್ಟಿದರೆ ಅವರ ಕೈ ಕತ್ತರಿಸುತ್ತೇನೆ ಎಂದು ಹೇಳಿದರು.
ಬಿಹಾರ ಸಿಎಂ ನಿತೀಶ್ ಕುಮಾರ್, ಮಹಿಳೆಯನ್ನು ಆಕೆಯನ್ನು ಮುಟ್ಟಿದ್ರೆ ಏನಾಗುತ್ತದೆ ಎಂದು ನಿಶಾದ್ ಹೇಳಿದ್ದರು. ತದನಂತರ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದರು. ಜನವರಿ 15 ರಂದು ನಡೆಯಲಿರುವ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಹಿನ್ನೆಲೆಯಲ್ಲಿ AIMIM ನ 17 ಅಭ್ಯರ್ಥಿಗಳ ಪರವಾಗಿ ಜಲೀಲ್ ಪ್ರಚಾರ ಮಾಡಿದರು.
'ಸೋ ಕಾಲ್ಡ್ ಜಾತ್ಯತೀತ ಪಕ್ಷಗಳು ಸಾಮಾನ್ಯವಾಗಿ ಎಐಎಂಐಎಂ ಅನ್ನು ಕೋಮುವಾದಿ ಮತ್ತು ಅಸ್ಪೃಶ್ಯ ಪಕ್ಷವೆಂದು ಬ್ರಾಂಡ್ ಮಾಡುತ್ತವೆ, ಆದರೆ ವಾಸ್ತವದಲ್ಲಿ ತಾವೇ ಅತ್ಯಂತ ಕೋಮುವಾದಿಗಳು ಮತ್ತು ಮುಸ್ಲಿಮರು ನಾಯಕರಾಗಿ ಬೆಳೆಯಲು ಬಯಸುವುದಿಲ್ಲ ಎಂದರು.
ಗೂಂಡಾಗಳು ಮತ್ತು ಕ್ರಿಮಿನಲ್ ಅಂಶಗಳಿಗೆ ಒಲವು ತೋರ್ತಾರೆ. ಆದರೆ ಅವರು ಮುಸ್ಲಿಮರೊಂದಿಗೆ ನಿಲ್ಲಲು ಅಥವಾ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಹಿಂಜರಿಯುತ್ತಾರೆ ಎಂದು ಅವರು ಆರೋಪಿಸಿದರು.
Advertisement