

ದೆಹಲಿಯ ಕೌಟುಂಬಿಕ ನ್ಯಾಯಾಲಯವೊಂದು ವ್ಯಕ್ತಿಯೋರ್ವನಿಗೆ ಆತನ ಪತ್ನಿಗೆ ಮಧ್ಯಂತರ ಜೀವನಾಂಶವಾಗಿ 5 ಲಕ್ಷ ರೂಪಾಯಿ ಪಾವತಿ ಮಾಡುವಂತೆ ಆದೇಶ ನೀಡಿದೆ.
ಪ್ರತ್ಯೇಕಗೊಂಡ ನಂತರ ನೀಡುವ ಆರ್ಥಿಕ ನೆರವು ಕೇವಲ ಜೀವನಾಂಶ ಮಾತ್ರವಷ್ಟೇ ಅಲ್ಲದೇ ಘನತೆಗೆ ಸಂಬಂಧಿಸಿದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಜೀವಿಸುವುದೆಂದರೆ ಕೇವಲ ಪ್ರಾಣಿಯಂತೆ ಬದುಕುವುದು ಅಲ್ಲ. ಆ ವ್ಯಕ್ತಿ ಜೀವಂತವೇ ಇದ್ದಿಲ್ಲ ಎಂಬಂತೆ ವರ್ತಿಸುವುದಲ್ಲ. ನಿರ್ವಹಣೆಯು ಕೇವಲ ಜೀವನಾಧಾರಕ್ಕಿಂತ ಹೆಚ್ಚಾಗಿರುತ್ತದೆ. ಪತ್ನಿ ಎಂಬಾಕೆ ಘನತೆಯೊಂದಿಗೆ ಜೀವಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಪತಿಯ ಮನೆಯಲ್ಲಿದ್ದ ಸಾಮಾಜಿಕ ಸ್ತರದ ಪ್ರಕಾರವೇ ಜೀವಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದೇ ವೇಳೇ ತಾನು ದುಬೈ ನಲ್ಲಿ ವಾಸಿಸುತ್ತಿರುವುದನ್ನು ಆತನನ್ನು ಬಾಧ್ಯತೆಯಿಂದ ರಕ್ಷಿಸಲು ಪರಿಗಣಿಸಬೇಕೆಂಬ ವ್ಯಕ್ತಿಯ ಮನವಿಯನ್ನು ತಿರಸ್ಕರಿಸಿರುವ ಕೋರ್ಟ್, "ಸಬಲ ಪತಿ" ಪತ್ನಿಯ ಜೀವನವನ್ನು ನಿರ್ವಹಿಸುವ ತನ್ನ ಶಾಸನಬದ್ಧ ಕರ್ತವ್ಯದಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಥವಾ ಆಕೆಯನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.
Advertisement