

ಲಖಿಂಪುರ ಖೇರಿಯಲ್ಲಿ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣಗಳು ಸೇರಿದಂತೆ 17 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಲಖಿಂಪುರ ಖೇರಿ ಜಿಲ್ಲೆಯ ತಲೆಗೆ 1 ಲಕ್ಷ ಬಹುಮಾನ ಹೊಂದಿದ್ದ 26 ವರ್ಷದ ತಾಲಿಬ್ ಅಲಿಯಾಸ್ ಅಜಂ ಖಾನ್ ನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.
ಲಖಿಂಪುರ ಮತ್ತು ಸುಲ್ತಾನ್‌ಪುರ ಪೊಲೀಸರ ಜಂಟಿ ತಂಡ ಇಂದು ಎನ್‌ಕೌಂಟರ್ ನಡೆಸಿತು. ತಾಲಿಬ್ ಅಲಿಯಾಸ್ ಅಜಂ ಖಾನ್ ಲಖಿಂಪುರ ಜಿಲ್ಲೆಯ ಫರ್ಧಾನ್ ಪೊಲೀಸ್ ಠಾಣೆ ಪ್ರದೇಶದ ಗೌರಿಯಾ ಗ್ರಾಮದ ನಿವಾಸಿ. ಆತನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ಬಹಳ ದಿನಗಳಿಂದ ಆತನನ್ನು ಹುಡುಕುತ್ತಿದ್ದರು. ತಾಲಿಬ್‌ಗೆ ₹1 ಲಕ್ಷ ಬಹುಮಾನವನ್ನೂ ಘೋಷಿಸಲಾಗಿತ್ತು.
ತಾಲಿಬ್ ಸುಲ್ತಾನ್‌ಪುರದಲ್ಲಿದ್ದಾನೆ ಎಂಬ ಮಾಹಿತಿ ಲಖಿಂಪುರ ಪೊಲೀಸರಿಗೆ ಸಿಕ್ಕಿತು. ಅವರು ಆಗಮಿಸಿ ಸ್ಥಳೀಯ ಪೊಲೀಸರೊಂದಿಗೆ ಆತನನ್ನು ಹುಡುಕಲು ಪ್ರಾರಂಭಿಸಿದರು. ಆರೋಪಿ ಲಂಬುವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದಾನೆ ಎಂಬ ಮಾಹಿತಿ ಪಡೆದ ಲಖಿಂಪುರ ಮತ್ತು ಸುಲ್ತಾನಪುರ ಪೊಲೀಸರು ಲಂಬುವಾ ಪೊಲೀಸ್ ಠಾಣೆ ಪ್ರದೇಶದ ದಿಯಾರಾ ಸೇತುವೆ ಬಳಿ ಅವರನ್ನು ಬಂಧಿಸಲು ಮುಂದಾದರು.
ಪೊಲೀಸರನ್ನು ನೋಡಿ ಆತಂಕಗೊಂಡ ಅಪರಾಧಿ ತಾಲಿಬ್ ಅಲಿಯಾಸ್ ಅಜಮ್ ಖಾನ್ ಗುಂಡು ಹಾರಿಸಿದನು. ಇದಕ್ಕೆ ಪ್ರತೀಕಾರವಾಗಿ, ಪೊಲೀಸರು ಸಹ ಗುಂಡು ಹಾರಿಸಿದ್ದು ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ತಾಲಿಬ್ ನನ್ನು ಕೂಡಲೇ ಕೇಂದ್ರ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
Advertisement