ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಗೆ ಚುನಾವಣಾ ಆಯೋಗ ನೋಟಿಸ್; ಜನವರಿ 16 ರಂದು ವಿಚಾರಣೆ

ಅನಿವಾಸಿ ಭಾರತೀಯ(NRI) ಸೇನ್ ಅವರಿಗೆ ಜನವರಿ 16 ರಂದು ಅವರ ನಿವಾಸದಲ್ಲಿಯೇ ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ECI issues notice to Nobel laureate Amartya Sen over typo; hearing at his residence on Jan 16
ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ಯ ಭಾಗವಾಗಿ, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ ಬುಧವಾರ ಭಾರತೀಯ ಚುನಾವಣಾ ಆಯೋಗ(ECI) ನೋಟಿಸ್ ಜಾರಿ ಮಾಡಿದೆ.

ಅನಿವಾಸಿ ಭಾರತೀಯ(NRI) ಸೇನ್ ಅವರಿಗೆ ಜನವರಿ 16 ರಂದು ಅವರ ನಿವಾಸದಲ್ಲಿಯೇ ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಬೂತ್ ಮಟ್ಟದ ಅಧಿಕಾರಿ(BLO) ಇಂದು, ಬಿರ್ಭುಮ್ ಜಿಲ್ಲೆಯ ಶಾಂತಿನಿಕೇತನದ ಬೋಲ್ಪುರದಲ್ಲಿರುವ ಸೇನ್ ಅವರ 'ಪ್ರತಿಚಿ' ನಿವಾಸದಲ್ಲಿ ಅವರ ಸಂಬಂಧಿಕರಿಗೆ ನೋಟಿಸ್ ತಲುಪಿಸಿದ್ದಾರೆ.

ECI issues notice to Nobel laureate Amartya Sen over typo; hearing at his residence on Jan 16
SIR ಒತ್ತಡಕ್ಕೆ ಏಳನೇ ಬಲಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ BLO ಸಾವು; ವಿವಾದಕ್ಕೆ ನಾಂದಿ

ಬಿಎಲ್ಒ ಸೋಂಬ್ರತ ಮುಖರ್ಜಿ ಅವರು, ಜನವರಿ 16 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಮರ್ತ್ಯ ಸೇನ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಚುನಾವಣಾ ಫಾರ್ಮ್‌ಗೆ ಸಂಬಂಧಿಸಿದ 'ವ್ಯತ್ಯಾಸ'ಗಳನ್ನು' ಪರಿಶೀಲಿಸಲಿದ್ದಾರೆ.

ಅಮರ್ತ್ಯ ಅವರ ಸಂಬಂಧಿ ಶಾಂತವಾನು ಸೇನ್ ಅವರು ತಮ್ಮ ವಕೀಲರಿಂದ ಅಭಿಪ್ರಾಯಗಳನ್ನು ಪಡೆದ ನಂತರ ನೋಟಿಸ್ ಅನ್ನು ಸ್ವೀಕರಿಸಿದ್ದಾರೆ. ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಸೇನ್ ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಈ ನೋಟಿಸ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಮತದಾರರ ಪಟ್ಟಿಯ SIR ಪ್ರಕ್ರಿಯೆಯ ಭಾಗವಾಗಿ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರಿಗೆ ವಿಚಾರಣೆಯ ನೋಟಿಸ್ ಅನ್ನು ಇಂದು ಅವರ ಬೋಲ್ಪುರದ ನಿವಾಸಕ್ಕೆ ಕಳುಹಿಸಲಾಗಿದೆ ಎಂದು ECI ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com