Mumbai civic body polls: ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ ಉದ್ಧವ್ ಠಾಕ್ರೆ ನಿಷ್ಠಾವಂತ!

ಐದು ದಶಕಗಳಿಗೂ ಹೆಚ್ಚು ಕಾಲ ಠಾಕ್ರೆ ಭದ್ರಕೋಟೆಯಾಗಿದ್ದ ಮುಂಬೈನ ಲಾಲ್‌ಬಾಗ್-ಪ್ಯಾರೆಲ್-ಸೆವ್ರಿ ಬೆಲ್ಟ್‌ನಿಂದ ಸಕ್ಪಾಲ್ ಹಲವು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
Uddhav Thackeray - Eknath Shinde
ಉದ್ಧವ್ ಠಾಕ್ರೆ-ಏಕನಾಥ್ ಶಿಂಧೆ
Updated on

ಮುಂಬೈ: ಮುಂಬೈ ಪಾಲಿಗೆ ಚುನಾವಣೆಗೆ ಮುನ್ನ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಗೆ ಭಾರಿ ಹಿನ್ನಡೆ ಉಂಟಾಗಿದ್ದು, ಮಾಜಿ ಶಾಸಕ ಮತ್ತು ನಿಷ್ಠಾವಂತ ದಗ್ದು ಸಕ್ಪಾಲ್ ಭಾನುವಾರ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ್ದಾರೆ.

ಐದು ದಶಕಗಳಿಗೂ ಹೆಚ್ಚು ಕಾಲ ಠಾಕ್ರೆ ಭದ್ರಕೋಟೆಯಾಗಿದ್ದ ಮುಂಬೈನ ಲಾಲ್‌ಬಾಗ್-ಪ್ಯಾರೆಲ್-ಸೆವ್ರಿ ಬೆಲ್ಟ್‌ನಿಂದ ಸಕ್ಪಾಲ್ ಹಲವು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು.

ಅಜಯ್ ಚೌಧರಿ 2014 ರಿಂದ ಈ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದು, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಶಿಂಧೆ ನೇತೃತ್ವದ ಶಿವಸೇನೆಗೆ ಅವರು ಸೇರ್ಪಡೆಗೊಳ್ಳುತ್ತಿರುವುದು ಮಹತ್ವದ್ದಾಗಿದ್ದು, ಈ ನಡೆ ಗಮನಾರ್ಹ ರಾಜಕೀಯ ಪರಿಣಾಮಗಳನ್ನು ಬೀರಬಹುದು ಎನ್ನಲಾಗಿದೆ.

ಆದರೆ, ಮಾಜಿ ಶಾಸಕರೊಬ್ಬರು ನಗರಾಡಳಿತ ಸಂಸ್ಥೆಗಳ ಚುನಾವಣೆಗೆ ಮುನ್ನ ಶಿವಸೇನೆಗೆ ಸೇರ್ಪಡೆಗೊಂಡಿರುವುದು ಠಾಕ್ರೆ ಭದ್ರಕೋಟೆಯನ್ನು ಭೇದಿಸಲು ಪ್ರಯತ್ನಗಳನ್ನು ನಡೆಸುತ್ತಿರುವ ಶಿಂಧೆಗೆ ಉತ್ತೇಜನ ನೀಡಿದಂತಾಗಿದೆ.

Uddhav Thackeray - Eknath Shinde
ಏಕನಾಥ್ ಶಿಂಧೆ ದೂರವಿಡಲು ಬದ್ಧವೈರಿ ಕಾಂಗ್ರೆಸ್ ಜತೆ ಬಿಜೆಪಿ ಮೈತ್ರಿ: ಕೈ ಕಾರ್ಪೊರೇಟರ್‌ಗಳ ಅಮಾನತು; ಫಡ್ನವೀಸ್ ಹೇಳಿದ್ದೇನು?

ಶಿಂಧೆ ಕಳೆದ ವಾರ ಸಕ್ಪಾಲ್ ಅವರನ್ನು ಭೇಟಿಯಾದಾಗಲೇ ಸಕ್ಬಾಲ್ ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳಬಹುದು ಎನ್ನುವ ಊಹಾಪೋಹಗಳಿಗೆ ಕಾರಣವಾಯಿತು.

ನಗದು ಸಮೃದ್ಧ ಮುಂಬೈ ಸೇರಿದಂತೆ ಮಹಾರಾಷ್ಟ್ರದ 29 ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ಚುನಾವಣೆ ಜನವರಿ 15 ರಂದು ನಡೆಯಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com