

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ರಾಜ್ಯದಲ್ಲಿ ನಡೆಯುತ್ತಿರುವ ವಿವಾದಾತ್ಮಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ಅವರಿಗೆ ಐದನೇ ಬಾರಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಸಿಎಂ ಈ ಎಸ್ಐಆರ್ ಪ್ರಕ್ರಿಯೆಯೇ "ಸಂಪೂರ್ಣ ದೋಷಪೂರಿತ" ಎಂದು ಟೀಕಿಸಿದ್ದಾರೆ ಮತ್ತು 2002ರ ಮತದಾರರ ಪಟ್ಟಿಯ ಎಐ-ಚಾಲಿತ ಡಿಜಿಟಲೀಕರಣವು ದೊಡ್ಡ ಪ್ರಮಾಣದ ಡೇಟಾ ಹೊಂದಾಣಿಕೆಗೆ ಕಾರಣವಾಗುತ್ತಿದೆ ಮತ್ತು ನಿಜವಾದ ಮತದಾರರನ್ನು "ತಾರ್ಕಿಕ ವ್ಯತ್ಯಾಸಗಳು" ಕಾರಣ ನೀಡಿ ತಪ್ಪಾಗಿ ವರ್ಗೀಕರಿಸುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ಅನುಸರಿಸಲಾದ ತನ್ನದೇ ಆದ ಶಾಸನಬದ್ಧ ಪ್ರಕ್ರಿಯೆಗಳನ್ನು ಇಸಿ ನಿರ್ಲಕ್ಷಿಸುತ್ತಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದ ತನ್ನದೇ ಆದ ಕ್ರಮಗಳು ಮತ್ತು ಕಾರ್ಯವಿಧಾನಗಳನ್ನು ನಿರಾಕರಿಸುವ ಇಂತಹ ವಿಧಾನವು ಅನಿಯಂತ್ರಿತ, ತರ್ಕಬದ್ಧವಲ್ಲದ ಮತ್ತು ಭಾರತದ ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಮಮತಾಎಸ್‌ಐಆರ್ ಸಮಯದಲ್ಲಿ ಸಲ್ಲಿಸಲಾದ ದಾಖಲೆಗಳಿಗೆ ಸರಿಯಾದ ಸ್ವೀಕೃತಿಯನ್ನು ನೀಡಲಾಗುತ್ತಿಲ್ಲ. ಈ ಕಾರ್ಯವಿಧಾನವು "ಸಂಪೂರ್ಣ ದೋಷಪೂರಿತ" ಎಂದು ದೀದಿ ಕಿಡಿ ಕಾರಿದ್ದಾರೆ.
ಎಸ್‌ಐಆರ್ ವಿಚಾರಣೆ ಪ್ರಕ್ರಿಯೆಯು "ಹೆಚ್ಚಾಗಿ ಯಾಂತ್ರಿಕವಾಗಿದೆ, ಸಂಪೂರ್ಣವಾಗಿ ತಾಂತ್ರಿಕ ದತ್ತಾಂಶದಿಂದ ನಡೆಸಲ್ಪಡುತ್ತದೆ" ಮತ್ತು "ಮನಸ್ಸು, ಸೂಕ್ಷ್ಮತೆ ಮತ್ತು ಮಾನವ ಸ್ಪರ್ಶದ ಅನ್ವಯದಿಂದ ಸಂಪೂರ್ಣವಾಗಿ ಹೊರಗುಳಿದಿದೆ". ಇದು "ನಮ್ಮ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಚೌಕಟ್ಟಿನ ಅಡಿಪಾಯವನ್ನು" ದುರ್ಬಲಗೊಳಿಸಿದೆ ಎಂದು ದೀದಿ ಹೇಳಿದ್ದಾರೆ.
ತಮ್ಮ ಹಿಂದಿನ ಪತ್ರಗಳಲ್ಲಿ, ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ SIR ಅನ್ನು "ನಿಲ್ಲಿಸುವಂತೆ" CEC ಗೆ ಒತ್ತಾಯಿಸಿದ್ದರು ಮತ್ತು ಎಸ್ಐಆರ್ ದಾಖಲೆಗಳನ್ನು ಸರಿಪಡಿಸುವ ಬದಲು ಮತದಾರರನ್ನು ಹೊರಗಿಡುವ ಒಂದು ಕಸರತ್ತಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದ್ದರು.
ಮಮತಾ ಬ್ಯಾನರ್ಜಿ ಅವರು “ಚುನಾವಣಾ ಆಯೋಗವು ರಾಜಕೀಯ ಪಕ್ಷಪಾತ, ಸಂವೇದನಾಶೀಲತೆ ಮತ್ತು ವಿಚಾರಣೆಯ ಸಮಯದಲ್ಲಿ ಅತಿರೇಕದಿಂದ ವರ್ತಿಸುತ್ತಿದೆ” ಎಂದು ಆರೋಪಿಸಿದ್ದಾರೆ.
“ಎಸ್ಐಆರ್ ಗುರಿ ಮತದಾರರ ಪಟ್ಟಿಯ ತಿದ್ದುಪಡಿ ಅಥವಾ ಸೇರ್ಪಡೆಯ ರೀತಿ ಕಾಣುತ್ತಿಲ್ಲ. ಉದ್ದೇಶ ಪೂರ್ವಕವಾಗಿಯೇ ಹೆಸರನ್ನು ಅಳಿಸುವಿಕೆ ಅಥವಾ ಮತದಾರರನ್ನು ಹೊರಗಿಡುವ ಕೆಲಸ ನಡೆಯುತ್ತಿದೆ. ಈ ಪ್ರಕ್ರಿಯೆಯಿಂದ ಸಾಂವಿಧಾನಿಕ ಮೌಲ್ಯಗಳು ದುರ್ಬಲಗೊಳ್ಳುತ್ತವೆ” ಎಂದು ದೂರಿದ್ದಾರೆ.
Advertisement