

ನವದೆಹಲಿ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (POK)ಯಲ್ಲಿ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಲು ಕಳೆದ ವರ್ಷ ಪ್ರಾರಂಭಿಸಲಾದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಹೇಳಿದ್ದಾರೆ. ಭವಿಷ್ಯದಲ್ಲಿ ಯಾವುದೇ 'ದುಸ್ಸಾಹಸ"ವನ್ನು "ಪರಿಣಾಮಕಾರಿಯಾಗಿ ಎದುರಿಸಲಾಗುವುದು ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
2026 ರ ತನ್ನ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನರಲ್ ದ್ವಿವೇದಿ, ಆಪರೇಷನ್ ಸಿಂಧೂರ ವೇಳೆ ಭಾರತೀಯ ಸೇನೆ ತನ್ನ ಸೈನಿಕರನ್ನು ಸಜ್ಜುಗೊಳಿಸಿತ್ತು. ಪಾಕಿಸ್ತಾನ ಏನಾದರೂ ತಪ್ಪು ಮಾಡಿದ್ದರೆ ನೆಲದ ಕಾರ್ಯಾಚರಣೆಗೆ "ಸಂಪೂರ್ಣವಾಗಿ ಸಜ್ಜಾಗಿತ್ತು ಎಂದು ಹೇಳಿದರು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಣಾಂತಿಕ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 7 ರಂದು 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು. ಇದನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಎಲ್ ಇಟಿಯ ಪ್ರಾಕ್ಸಿ ದಿ ರೆಸಿಸ್ಟೆನ್ಸ್ ಫ್ರಂಟ್ ನಡೆಸಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ಮೂರು ದಿನ ಸೇನಾ ಸಂಘರ್ಷದ ನಂತರ ಮೇ 10 ರಂದು ಕದನ ವಿರಾಮ ಒಪ್ಪಂದ ಜಾರಿಯಾಗಿತ್ತು.
ಆಪರೇಷನ್ ಸಿಂಧೂರ ಸ್ಪಷ್ಟ ರಾಜಕೀಯ ನಿರ್ದೇಶನದಡಿ ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಪ್ರತಿಕ್ರಿಯಿಸುವ ಅತ್ಯುತ್ತಮ ಉದಾಹರಣೆಯಾಗಿದೆ. ಮೇ 7 ರಿಂದ ಆರಂಭವಾಗಿ ಮೇ 10 ರವರೆಗೆ 88 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳನ್ನು ಕಿತ್ತುಹಾಕುವ ಮೂಲಕ ಪಾಕಿಸ್ತಾನದ ಕಾರ್ಯತಂತ್ರಗಳನ್ನು ವಿಫಲಗೊಳಿಸಿದ್ದೇವು ಎಂದರು.
ಕಾರ್ಯತಂತ್ರದ ಪ್ರದೇಶ ವಿಸ್ತರಣೆಯಿಂದಾಗಿ ಸುಮಾರು 100 ಜನರನ್ನು ಹತ್ಯೆಗೊಳಿಸಿದ್ದೇವೆ. 88 ಗಂಟೆಗಳಲ್ಲಿ ಭಾರತದ ಸೇನೆ ಹೇಗೆ ಎದುರಾಳಿಗಳಲ್ಲಿ ನಡುಕು ಹುಟ್ಟಿಸಿತ್ತು ಎಂಬುದನ್ನು ನೋಡಿದ್ದೀರಾ, ಒಂದು ವೇಳೆ ಪಾಕಿಸ್ತಾನ ಏನಾದರೂ ತಪ್ಪು ಮಾಡಿದ್ದರೆ ನೆಲದ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಅವರು ಹೇಳಿದರು.
ಕದನ ವಿರಾಮ ಜಾರಿಯಾದಾಗಿನಿಂದ ಪಶ್ಚಿಮ ಘಟ್ಟ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿಯು "ಸೂಕ್ಷ್ಮವಾಗಿದೆ ಆದರೆ ದೃಢವಾಗಿ ನಿಯಂತ್ರಣದಲ್ಲಿದೆ ಎಂದು ಜನರಲ್ ದ್ವಿವೇದಿ ಹೇಳಿದರು.
2025 ರಲ್ಲಿ 31 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು. ಆಪರೇಷನ್ ಮಹಾದೇವ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ ಮೂವರು ಸೇರಿದಂತೆ ಇದರಲ್ಲಿ ಶೇ.65 ರಷ್ಟು ಮಂದಿ ಪಾಕಿಸ್ತಾನಿ ಮೂಲದವರಾಗಿದ್ದಾರೆ. ಸ್ಥಳೀಯ ಉಗ್ರಗಾಮಿಗಳ ಸಂಖ್ಯೆ ಈಗ ಒಂದು ಅಂಕಿಗೆ ಇಳಿದಿದೆ ಎಂದರು.
Advertisement