ಬಾಲಕಿ ಮೇಲೆ ಅತ್ಯಾಚಾರ: ಕೇವಲ 40 ದಿನದಲ್ಲೇ ತೀರ್ಪು ಪ್ರಕಟ; ಕಾಮುಕನಿಗೆ ಗಲ್ಲು ಶಿಕ್ಷೆ!

ಎಫ್‌ಐಆರ್‌ನಿಂದ ಮರಣದಂಡನೆಯವರೆಗಿನ ಸಂಪೂರ್ಣ ನ್ಯಾಯ ಪ್ರಕ್ರಿಯೆಯು ಕೇವಲ 40 ದಿನಗಳಲ್ಲಿ ಪೂರ್ಣಗೊಂಡಿದ್ದು, ವಿಶೇಷ ಕೋರ್ಟ್ ಸಂತ್ರಸ್ತೆಗೆ ತ್ವರಿತ ನ್ಯಾಯ ಒದಗಿಸುವ ಮೂಲಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಕಾಮುಕರಿಗೆ ಕಠಿಣ ಎಚ್ಚರಿಕೆ ರವಾನಿಸಿದೆ.
death sentence
ಗಲ್ಲು ಶಿಕ್ಷೆ online desk
Updated on

ಅಹಮದಾಬಾದ್: ಗುಜರಾತ್ ನ ಅತ್ಕೋಟ್‌ನ ಕಾನ್ಪರ್ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಎಸಗಿದ್ದ 30 ವರ್ಷದ ರೆಮ್ಸಿನ್ಹ್ ದುಡ್ವಾಗೆ ರಾಜ್‌ಕೋಟ್ ವಿಶೇಷ ನ್ಯಾಯಾಲಯ ಶನಿವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ಎಫ್‌ಐಆರ್‌ನಿಂದ ಮರಣದಂಡನೆಯವರೆಗಿನ ಸಂಪೂರ್ಣ ನ್ಯಾಯ ಪ್ರಕ್ರಿಯೆಯು ಕೇವಲ 40 ದಿನಗಳಲ್ಲಿ ಪೂರ್ಣಗೊಂಡಿದ್ದು, ವಿಶೇಷ ಕೋರ್ಟ್ ಸಂತ್ರಸ್ತೆಗೆ ತ್ವರಿತ ನ್ಯಾಯ ಒದಗಿಸುವ ಮೂಲಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಕಾಮುಕರಿಗೆ ಕಠಿಣ ಎಚ್ಚರಿಕೆ ರವಾನಿಸಿದೆ.

ರಾಜ್‌ಕೋಟ್ ಜಿಲ್ಲೆಯ ಅತ್ಕೋಟ್ ತಾಲ್ಲೂಕಿನ ಕಾನ್ಪರ್ ಗ್ರಾಮದ ಹೊರವಲಯದಲ್ಲಿ ಏಳು ವರ್ಷದ ಬಾಲಕಿಯ ಮೇಲೆ ನಡೆದ ಕ್ರೂರ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸಿದ ರಾಜ್‌ಕೋಟ್‌ನ ವಿಶೇಷ ನ್ಯಾಯಾಲಯವು, ಅತ್ಯಂತ ಕ್ರೂರ ಮತ್ತು ಘೋರ ಎಂದು ವಿವರಿಸಲಾದ ಹಾಗೂ ನಿರ್ಭಯಾ ಪ್ರಕರಣದೊಂದಿಗೆ ಈ ಪ್ರಕರಣವನ್ನು ಹೋಲಿಸಿದ್ದು, ಅಪರಾಧಿ ರೆಮ್ಸಿನ್ಹ್ ದುಡ್ವಾಗೆ ಗಲ್ಲು ಶಿಕ್ಷೆ ವಿಧಿಸುವ ನಿರ್ಣಾಯಕ ತೀರ್ಮಾನಕ್ಕೆ ಬಂದಿದೆ.

death sentence
ಪಾಲ್ಘರ್‌: ಇನ್‌ಸ್ಟಾಗ್ರಾಮ್‌ ಗೆಳೆಯನ ನಂಬಿ ಓಡಿಹೋಗಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ!

ಈ ಘಟನೆ ಡಿಸೆಂಬರ್ 4, 2025 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿತ್ತು. ಅಪ್ರಾಪ್ತ ಬಾಲಕಿ ತನ್ನ ಸಹೋದರರೊಂದಿಗೆ ತೋಟದಲ್ಲಿ ಆಟವಾಡುತ್ತಿದ್ದಾಗ ಆರೋಪಿ ಮೋಟಾರ್ ಸೈಕಲ್‌ನಲ್ಲಿ ಬಂದು, ಮಗುವನ್ನು ಎತ್ತಿಕೊಂಡು ಹೋಗಿ, ಹತ್ತಿರದ ಪೊದೆಗಳಲ್ಲಿ ಆಕೆಯ ಖಾಸಗಿ ಭಾಗಗಳಿಗೆ ಐದು ಇಂಚಿನ ಕಬ್ಬಿಣದ ರಾಡ್ ಸೇರಿಸಿ, ಅತ್ಯಾಚಾರ ಎಸಗಿದ್ದಾನೆ. ಕಾಮುಕರ ಹೀನ ಕೃತ್ಯದಿಂದ ಬಾಲಕಿಗೆ ತೀವ್ರ ಆಂತರಿಕ ಗಾಯಗಳು ಹಾಗೂ ಅಪಾರ ರಕ್ತಸ್ರಾವವಾಗಿತ್ತು.

ಮಗು ನೋವಿನಿಂದ ನರಳುತ್ತಿದ್ದರೂ, ಅಪರಾಧ ಮಾಡಿದ ತಕ್ಷಣ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬಾಲಕಿಯ ಕಿರುಚಾಟ ಕೇಳಿ, ಪಕ್ಕದ ಕೋಣೆಯಲ್ಲಿದ್ದ ಆಕೆಯ ಚಿಕ್ಕಮ್ಮ ಸ್ಥಳಕ್ಕೆ ಧಾವಿಸಿ ಮಗು ಗಂಭೀರ ಸ್ಥಿತಿಯಲ್ಲಿರುವುದನ್ನು ನೋಡಿದ್ದಾರೆ.

ಗಾಯಗಳ ಗಂಭೀರತೆ ಮತ್ತು ಭಾರೀ ರಕ್ತಸ್ರಾವವನ್ನು ನೋಡಿದ ಚಿಕ್ಕಮ್ಮ ತಕ್ಷಣ ಬಾಲಕಿಯ ತಂದೆ ಮತ್ತು ಆಕೆಯ ಪತಿಗೆ ಕರೆ ಮಾಡಿದ್ದಾರೆ. ಬಳಿಕ ಮಗುವನ್ನು ಆಂಬ್ಯುಲೆನ್ಸ್ ಮೂಲಕ ಕಾನ್ಪರ್ ಗ್ರಾಮದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ಜಸ್ದಾನ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಸಂಜೆ, ರಾತ್ರಿ 9 ಗಂಟೆ ಸುಮಾರಿಗೆ, ಆಕೆಯನ್ನು ರಾಜ್‌ಕೋಟ್ ಜನಾನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವ್ಯಾಪಕ ವೈದ್ಯಕೀಯ ಚಿಕಿತ್ಸೆಯ ನಂತರ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿ ಬದುಕುಳಿದರು.

ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಾಥಮಿಕ ತನಿಖೆಯ ನಂತರ ಡಿಸೆಂಬರ್ 8 ರಂದು, ಆರೋಪಿ ರೆಮ್ಸಿನ್ಹ್ ದುಡ್ವಾನನ್ನು ಬಂಧಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com