

ಲೇಹ್: ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಲೇಹ್ ಜಿಲ್ಲೆಯಲ್ಲಿ ಸೋಮವಾರ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(ಎನ್‌ಸಿಎಸ್)ದ ಪ್ರಕಾರ, ಇಂದು ಬೆಳಗ್ಗೆ 11.51 ಕ್ಕೆ ಕಂಪನದ ಅನುಭವವಾಗಿದೆ.
ಭೂಕಂಪದ ಆಳವು 171 ಕಿಲೋಮೀಟರ್ ಕೆಳಗೆ 36.71 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 74.32 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು ಎಂದು ಎಕ್ಸ್‌ನಲ್ಲಿ ಎನ್‌ಸಿಎಸ್ ಪೋಸ್ಟ್ ಮಾಡಿದೆ.
ಭೂಕಂಪ-ಸಂಬಂಧಿತ ಹಾನಿಯ ಬಗ್ಗೆ ಇಲ್ಲಿಯವರೆಗೆ ಯಾವುದೇ ವರದಿ ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement