ಗ್ಯಾಂಗ್ ರೇಪ್: 3 ವರ್ಷ ಸಾವು ಬದುಕಿನ ಹೋರಾಟದ ಬಳಿಕ ಯುವತಿ ಸಾವು; ನ್ಯಾಯಕ್ಕಾಗಿ ಬುಡಕಟ್ಟು ಸಂಘಟನೆ ಆಗ್ರಹ

ಯುವತಿ ಸಾವಿನಿಂದ ಆಕ್ರೋಶಗೊಂಡಿರುವ ಬುಡಕಟ್ಟು ಸಂಘಟನೆಗಳು ಮತ್ತು ಎಡಪಂಥೀಯ ಪಕ್ಷಗಳು, ಜೀವಂತವಿದ್ದಾಗ ನ್ಯಾಯ ಸಿಗದಿರುವುದಕ್ಕೆ ತೀವ್ರ ದುಃಖ ವ್ಯಕ್ತಪಡಿಸಿವೆ.
‘She never fully recovered’: 20-year-old Kuki-Zo woman dies after gang-rape in 2023, tribal groups demand justice
ನ್ಯಾಯಕ್ಕಾಗಿ ಬುಡಕಟ್ಟು ಸಂಘಟನೆ ಆಗ್ರಹ
Updated on

ಗುವಾಹಟಿ: 2023 ರಲ್ಲಿ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಸಮಯದಲ್ಲಿ ಅಪಹರಣಕ್ಕೊಳಗಾಗಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 20 ವರ್ಷದ ಕುಕಿ-ಝೋ ಯುವತಿ ಮೂರು ವರ್ಷಗಳ ಬದುಕಿನ ಹೋರಾಟದ ಬಳಿಕ ಜನವರಿ 10, 2026 ರಂದು ಮೃತಪಟ್ಟಿದ್ದಾರೆ. ಸಾಮೂಹಿಕ ಅತ್ಯಾಚಾರದಿಂದ ಮಹಿಳೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲೇ ಇಲ್ಲ ಎಂದು ಕುಕಿ-ಝೋ ಸಂಘಟನೆಗಳು ತಿಳಿಸಿವೆ.

ಯುವತಿ ಸಾವಿನಿಂದ ಆಕ್ರೋಶಗೊಂಡಿರುವ ಬುಡಕಟ್ಟು ಸಂಘಟನೆಗಳು ಮತ್ತು ಎಡಪಂಥೀಯ ಪಕ್ಷಗಳು, ಜೀವಂತವಿದ್ದಾಗ ನ್ಯಾಯ ಸಿಗದಿರುವುದಕ್ಕೆ ತೀವ್ರ ದುಃಖ ವ್ಯಕ್ತಪಡಿಸಿವೆ. 'ಕುಕಿ-ಝೋ ಜನರನ್ನು ಗುರಿಯಾಗಿಸಿಕೊಂಡಿರುವುದಕ್ಕೆ ಇದು ನಿರ್ದಯ ಸಾಕ್ಷಿ ಎಂದು ಕಿಡಿ ಕಾರಿವೆ.

ಕುಕಿ-ಝೋ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ(ITLF) ಯುವತಿಗೆ ಶ್ರದ್ಧಾಂಜಲಿ ಸಲ್ಲಿಸಲು ಮೇಣದಬತ್ತಿಯ ಮೆರವಣಿಗೆ ಆಯೋಜಿಸಿತ್ತು.

‘She never fully recovered’: 20-year-old Kuki-Zo woman dies after gang-rape in 2023, tribal groups demand justice
ಬಾಂಬ್ ದಾಳಿ ಆತಂಕ: ಮಣಿಪುರ ಕಣಿವೆಯಲ್ಲಿ ಪೆಟ್ರೋಲ್ ಪಂಪ್‌ಗಳು ಅನಿರ್ದಿಷ್ಟಾವಧಿಗೆ ಬಂದ್!

"ಆಕೆಯ ಸಾವು ಕುಕಿ-ಝೋ ಜನರನ್ನು ಗುರಿಯಾಗಿಸಿಕೊಂಡಿರುವ ನಿರ್ದಯ ವಿಧಾನಕ್ಕೆ ಮತ್ತೊಂದು ನೋವಿನ ಸಾಕ್ಷಿಯಾಗಿದೆ. ಈಗ ನಮ್ಮ ಸುರಕ್ಷತೆ, ಘನತೆ ಮತ್ತು ಉಳಿವಿಗಾಗಿ ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ" ಎಂದು ಹೇಳಿದರು.

"ಸುಮಾರು ಮೂರು ವರ್ಷಗಳ ಕಾಲ, ಯಾವುದೇ ಮನುಷ್ಯನು ಎಂದಿಗೂ ಅನುಭವಿಸಬಾರದ ನೋವನ್ನು ಅವಳು ಅನುಭವಿಸಿದ್ದಾಳೆ" ಎಂದು ಕುಕಿ-ಝೋ ಮಹಿಳಾ ವೇದಿಕೆ ಹೇಳಿಕೆ ನೀಡಿದೆ.

"ಆರಂಭದಲ್ಲಿ, ಅವಳು ತೀವ್ರ ಆಘಾತಕ್ಕೊಳಗಾಗಿದ್ದರಿಂದ ಎಫ್‌ಐಆರ್ ದಾಖಲಿಸಲು ಹಿಂಜರಿಯುತ್ತಿದ್ದಳು. ಆದರೆ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ವೈರಲ್ ಆದಾಗ, ಅವಳು ಧೈರ್ಯವನ್ನು ಒಟ್ಟುಗೂಡಿಸಿ ಎಫ್‌ಐಆರ್ ದಾಖಲಿಸಿದಳು" ಎಂದು ದೆಹಲಿಯ ಕುಕಿ-ಝೋ ಮಹಿಳಾ ವೇದಿಕೆಯ ಮಾಧ್ಯಮ ಉಸ್ತುವಾರಿ ಕಿಮ್ ಹಾವೋಕಿಪ್ ಟಿಎನ್‌ಐಇಗೆ ತಿಳಿಸಿದ್ದಾರೆ.

ಸಂತ್ರಸ್ತ ಯುವತಿ ಮೇ 21, 2023 ರಂದು ಕಾಂಗ್ಪೋಕ್ಪಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ನಂತರ, ಘಟನೆ ನಡೆದ ಸ್ಥಳವು ಇಂಫಾಲ್‌ನ ಪೊರೊಂಪತ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಆ ಠಾಣೆಗೆ ವರ್ಗಾಯಿಸಲಾಯಿತು. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಆಗ 18 ವರ್ಷದ ಬಾಲಕಿಯನ್ನು ಇಂಫಾಲ್‌ನ ನ್ಯೂ ಚೆಕಾನ್ ಪ್ರದೇಶದ ಎಟಿಎಂ ಬೂತ್‌ನಿಂದ ಅಪಹರಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಸ್ಥಳಕ್ಕೆ ಆಗಮಿಸಿ, ಆಕೆಯನ್ನು ಕಾರಿನಲ್ಲಿ ಕೂರಿಸಿ ಬೆಟ್ಟದ ತುದಿಗೆ ಕರೆದೊಯ್ದು ಅಲ್ಲಿ ಮೂವರು ಸರದಿಯಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ನಾಲ್ವರು ಪುರುಷರು ನನ್ನನ್ನು ಬಿಳಿ ಬೊಲೆರೊದಲ್ಲಿ ಕರೆದುಕೊಂಡು ಹೋದರು. ಅವರು ನನ್ನನ್ನು ಕರೆದುಕೊಂಡು ಹೋಗುತ್ತಿದ್ದಾಗ, ಚಾಲಕನನ್ನು ಹೊರತುಪಡಿಸಿ ಮೂವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ನಂತರ ನನ್ನನ್ನು ಬೆಟ್ಟಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿದರು ಎಂದು ಸಂತ್ರಸ್ತೆ ಜುಲೈ 2023 ರಲ್ಲಿ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com