ಕೇವಲ ಮುಂಬೈ ಮಾತ್ರವಲ್ಲ, ಇಡೀ ದೇಶವೇ ಹಸಿರು ಬಣ್ಣಕ್ಕೆ ತಿರುಗುತ್ತದೆ: ಪಕ್ಷದ ಕಾರ್ಪೋರೇಟರ್ ಹೇಳಿಕೆ ಸಮರ್ಥಿಸಿಕೊಂಡ AIMIM

ಕೌನ್ಸಿಲರ್ ಸೆಹರ್ ಶೇಖ್ ಹೇಳಿಕೆಯನ್ನು ಮಹಾರಾಷ್ಟ್ರ AIMIM ಅಧ್ಯಕ್ಷ ಇಮ್ತಿಯಾಜ್ ಜಲೀಲ್ ಬೆಂಬಲಿಸಿದ್ದು ಮುಂಬರುವ ದಿನಗಳಲ್ಲಿ ಇಡೀ ಮಹಾರಾಷ್ಟ್ರವನ್ನು ಹಸಿರು ಬಣ್ಣಕ್ಕೆ ತಿರುಗಿಸುತ್ತೇವೆ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ರಾಜಕೀಯವಾಗಿ ತೀವ್ರ ಚರ್ಚೆ ಹುಟ್ಟುಹಾಕಿದೆ.
Imtiaz Jaleel
ಇಮ್ತಿಯಾಜ್ ಜಲೀಲ್
Updated on

ಕೌನ್ಸಿಲರ್ ಸೆಹರ್ ಶೇಖ್ ಹೇಳಿಕೆಯನ್ನು ಮಹಾರಾಷ್ಟ್ರ AIMIM ಅಧ್ಯಕ್ಷ ಇಮ್ತಿಯಾಜ್ ಜಲೀಲ್ ಬೆಂಬಲಿಸಿದ್ದು ಮುಂಬರುವ ದಿನಗಳಲ್ಲಿ ಇಡೀ ಮಹಾರಾಷ್ಟ್ರವನ್ನು ಹಸಿರು ಬಣ್ಣಕ್ಕೆ ತಿರುಗಿಸುತ್ತೇವೆ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ರಾಜಕೀಯವಾಗಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಇಡೀ AIMIM ಪಕ್ಷವು ಜಲೀಲ್ ಮತ್ತು ಶೇಖ್ ಅವರನ್ನು ಬೆಂಬಲಿಸಿದ್ದು ಪಕ್ಷದ ವಕ್ತಾರ ವಾರಿಸ್ ಪಠಾಣ್, ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಹಸಿರು ಧ್ವಜವನ್ನು ಹಾರಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಶಿವಸೇನೆ (UBT) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೌನ್ಸಿಲರ್ ಸೆಹರ್ ಶೇಖ್ ಳನ್ನು ಬೆಂಬಲಿಸಿ ಇಮ್ತಿಯಾಜ್ ಜಲೀಲ್, ಈ ಹುಡುಗಿ ಸೆಹರ್ ಶೇಖ್ ಹೇಳಿಕೆಯಿಂದ ನಾವು ಎಂದಿಗೂ ಹಿಂದೆ ಸರಿಯುವುದಿಲ್ಲ. ಮುಂಬರುವ ದಿನಗಳಲ್ಲಿ ನಾವು ಮಹಾರಾಷ್ಟ್ರದಾದ್ಯಂತ ಹಸಿರು ಧ್ವಜವನ್ನು ಹಾರಿಸುತ್ತೇವೆ. ಸೆಹರ್ ಯಾವುದೇ ಹೇಳಿಕೆ ನೀಡಿದ್ದರೂ ಅದು ಪಕ್ಷದ ಹೇಳಿಕೆಯಾಗಿದೆ. ಪಕ್ಷವು ಸೆಹರ್‌ಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ. ನಾನು ಇಡೀ ದೇಶವನ್ನು ಹಸಿರು ಬಣ್ಣಕ್ಕೆ ತಿರುಗಿಸುವ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.

ಏತನ್ಮಧ್ಯೆ, ಶಿವಸೇನೆ (ಯುಬಿಟಿ) ನಾಯಕ ಆನಂದ್ ದುಬೆ, ತ್ರಿವರ್ಣ ಧ್ವಜವು ಹಸಿರು ಮತ್ತು ಕೇಸರಿ ಎರಡನ್ನೂ ಒಳಗೊಂಡಿದೆ ಮತ್ತು ಶಿವಸೇನೆ ಎಐಎಂಐಎಂನ ಅಂತಹ ಚಿಂತನೆಯನ್ನು ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

Imtiaz Jaleel
'ಥಾಣೆ ಕೇಸರಿ ಬಣ್ಣದಲ್ಲಿದೆ, ಅದೇ ಬಣ್ಣದಲ್ಲೇ ಉಳಿಯಲಿದೆ': AIMIM ನಾಯಕಿಯ 'ಹಸಿರೀಕರಣ' ಹೇಳಿಕೆಗೆ ಡಿಸಿಎಂ ಏಕನಾಥ್ ಶಿಂಧೆ ತಿರುಗೇಟು!

ಸಹರ್ ಶೇಖ್ ಏನು ಹೇಳಿದರು?

ಚುನಾವಣೆಯಲ್ಲಿ ಗೆದ್ದ ನಂತರ ತಮ್ಮ ವಿಜಯೋತ್ಸವ ಮತ್ತು ಭಾಷಣದಲ್ಲಿ, ಸಹರ್ ಶೇಖ್, ನಾವು ಇಡೀ ಮುಂಬ್ರಾಕ್ಕೆ ಹಸಿರು ಬಣ್ಣ ಬಳಿಯಬೇಕು. ಇಲ್ಲದಿದ್ದರೆ ನಾವು ಮುಂಬ್ರಾವನ್ನು ಹಸಿರು ಬಣ್ಣ ಬಳಿಯುತ್ತೇವೆ ಎಂದು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಮುಂಬ್ರಾದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಯೂ AIMIM ನಿಂದ ಬಂದವರಾಗಿರುತ್ತಾರೆ. ವಿರೋಧ ಪಕ್ಷವು ಸೋಲುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com