Video: ಪಾಕ್ ಸುಳ್ಳು 4k ರೆಸಲ್ಯೂಷನ್ ನಲ್ಲಿ ಬಟಾಬಯಲು, Op Sindoor ವೇಳೆ ಹೊಡೆದುರುಳಿಸಿದ್ದ ರಾಫೆಲ್ ವಿಮಾನ R-day ವೇಳೆ ಪತ್ತೆ!

ಆಪರೇಷನ್‌ ಸಿಂಧೂರದಲ್ಲಿ ಸೋತರು ನಾವು ಭಾರತ ರೇಫಲ್‌ ಜೆಟ್‌ಅನ್ನು ಹೊಡೆದುರುಳಿಸಿದ್ದೇವೆ ಎಂದು ಜಗತ್ತಿನ ಮುಂದೆ ಸುಳ್ಳಿನ ಕಂತೆಯನ್ನೇ ಹೇಳುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಖಡಕ್ ತಿರುಗೇಟು ನೀಡಿದೆ.
AF exposes Pakistan lies in 4K, releases video of Rafale fighter
ಗಣರಾಜ್ಯೋತ್ಸವ ಪರೇಡ್ ನಲ್ಲಿ ರಾಫೆಲ್ ಯುದ್ಧ ವಿಮಾನ
Updated on

ನವದೆಹಲಿ: ಆಪರೇಷನ್ ಸಿಂಧೂರ್ ವೇಳೆ ಭಾರತದ ರಾಫೆಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನದ ಸುಳ್ಳನ್ನು ಭಾರತೀಯ ವಾಯುಸೇನೆ ಜಾಗತಿಕ ಮಟ್ಟದಲ್ಲಿ ಬಟಾ ಬಯಲು ಮಾಡಿದ್ದು, 4k ರೆಸಲ್ಯೂಷನ್ ನಲ್ಲಿ ವಿಡಿಯೋ ಪ್ರಸಾರ ಮಾಡುವ ಮೂಲಕ ಜಗತ್ತಿಗೇ ಪಾಕ್ ಸುಳ್ಳನ್ನು ಎತ್ತಿ ಸಾರಿದೆ.

ಹೌದು.. ಆಪರೇಷನ್‌ ಸಿಂಧೂರದಲ್ಲಿ ಸೋತರು ನಾವು ಭಾರತ ರೇಫಲ್‌ ಜೆಟ್‌ಅನ್ನು ಹೊಡೆದುರುಳಿಸಿದ್ದೇವೆ ಎಂದು ಜಗತ್ತಿನ ಮುಂದೆ ಸುಳ್ಳಿನ ಕಂತೆಯನ್ನೇ ಹೇಳುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಖಡಕ್ ತಿರುಗೇಟು ನೀಡಿದ್ದು, 77ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾರತದ ಹೆಮ್ಮೆಯ ರಫೇಲ್ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗಿ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗುವ ಮೂಲಕ ಪಾಕಿಸ್ತಾನಿಗಳ ಸುಳ್ಳಿನ ಬಂಗಲೆ ನುಗ್ಗಿ ಹೊಡೆದಂತೆ ಉತ್ತರ ನೀಡಿದೆ.

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನ ಅಂತಿಮ ಕ್ಷಣದಲ್ಲಿ ಕರ್ತವ್ಯ ಪಥದಲ್ಲಿ ನಡೆದ ಅದ್ಬುತ ವೈಮಾನಿಕ ಪ್ರದರ್ಶನದಲ್ಲಿ ಕಾಣಿಸಿಕೊಂಡ ಭಾರತದ ಹೆಮ್ಮೆಯ ರಫೆಲ್‌ ಜೆಟ್‌ ಪಾಕಿಗಳ ಕಣ್ಣು ಕುಕ್ಕಿದೆ. ಏಕೆಂದರೆ ಈ ಹಿಂದೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಯಾವ ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಂಡಿತ್ತೋ ಅದೇ ರಾಫೆಲ್ ಫೈಟರ್ ಜೆಟ್ ಅನ್ನು ಗಣರೋಜ್ಯೋತ್ಸವ ಪರೇಡ್ ವೇಳೆ ಹಾರಿಸುವ ಮೂಲಕ ಪಾಕಿಗಳ ಸುಳ್ಳನ್ನು ಬಟಾಬಯಲು ಮಾಡಿದೆ.

ಗಣತಂತ್ರ ದಿನದಂದು ನಡೆದ ವೈಮಾನಿಕ ಪ್ರದರ್ಶನದಲ್ಲಿ ರಫೇಲ್, ಸು-30 ಎಂಕೆಐ, ಮಿಗ್-29, ಜಾಗ್ವಾರ್, ಅಪಾಚೆ ಹೆಲಿಕಾಪ್ಟರ್‌ಗಳು ಮತ್ತು ಭಾರತೀಯ ನೌಕಾಪಡೆಯ ಪಿ-8ಐ ವಿಮಾನಗಳು ಸೇರಿದಂತೆ 29 ವಿಮಾನಗಳನ್ನು ಕರ್ತವ್ಯ ಪಥದ ಬಾನಂಗಳದಲ್ಲಿ ಹಾರಾಟ ನಡೆಸುವ ಮೂಲಕ ಮೋಡಿ ಮಾಡಿವೆ. ಇದರಲ್ಲಿ 16 ಯುದ್ಧ ವಿಮಾನಗಳಿದ್ದರೆ, 4 ಸಾರಿಗೆ ವಿಮಾನಗಳು ಮತ್ತು 9 ಹೆಲಿಕಾಪ್ಟರ್‌ಗಳು ಸೇರಿದ್ದವು. ಆದರೆ, ಇವೆಲ್ಲದರೆ ನಡುವೆ ಪ್ರಮುಖ ಆಕರ್ಷಣೆಯಾಗಿ ನಿಂತಿದ್ದು ಮಾತ್ರ ರಫೇಲ್ ಜೆಟ್ ಎಂದೇ ಹೇಳಬಹುದು.

AF exposes Pakistan lies in 4K, releases video of Rafale fighter
R-Day: ದೆಹಲಿಯ ಕರ್ತವ್ಯ ಪಥದಲ್ಲಿ ವಾಯುಪಡೆ ವಿಮಾನಗಳ ಆರ್ಭಟ; Sindoor Formation! Video

ಆಪರೇಷನ್ ಸಿಂಧೂರ್ ಫಾರ್ಮೇಷನ್

ಇನ್ನೂ ಅಚ್ಚರಿ ಎಂದರೆ ಈ ಹಿಂದೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆ ಯಾವ ಫಾರ್ಮೇಷನ್ ನಲ್ಲಿ ಕಾರ್ಯಾಚರಣೆ ನಡೆಸಿತ್ತೋ ಅದೇ ಫಾರ್ಮೇಷನ್ ಅನ್ನು ಪರೇಡ್ ವೇಳೆ ಪ್ರದರ್ಶನ ಮಾಡುವ ಪಾಕಿಗಳ ಎದೆಗೆ ನುಗ್ಗಿ ಹೊಡೆದಿದೆ. ಆ ಮೂಲಕ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದ ಪಾಕಿಗಳ ಕುತಂತ್ರವನ್ನು ಜಾಗತಿಕವಾಗಿ 4k ರೆಸಲ್ಯೂಷನ್ ವಿಡಿಯೋ ಪ್ರಸಾರ ಮಾಡಿ ಬಟಾ ಬಯಲು ಮಾಡಿದೆ.

ಇದಲ್ಲದೆ ವಾಯುಪಡೆಯ ಕಾರ್ಯತಂತ್ರ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಎತ್ತಿ ತೋರಿಸುವಂತಹ ʼವಜ್ರಂಗ್ʼ ರಚನೆ ಕೂಡ ಮಾಡಲಾಯಿತು. ಇದರಲ್ಲಿ 6 ರಫೇಲ್‌ ಜೆಟ್‌ ಭಾಗವಹಿಸಿದ್ದವು. ನಂತರ ವಿಜಯ್ ರಚನೆಯು ವಿಶೇಷ ಗಮನ ಸೆಳೆಯಿತು. ಇದರಲ್ಲಿ 1 ರಫೇಲ್ ವಿಮಾನವು ರಾಜಪಥದ ಉತ್ತರಕ್ಕೆ ಇರುವ ನೀರಿನ ಕಾಲುವೆಯ ಮೇಲೆ ನೆಲದಿಂದ 300 ಮೀಟರ್ ಎತ್ತರದಲ್ಲಿ ಗಂಟೆಗೆ 900 ಕಿ.ಮೀ ವೇಗದಲ್ಲಿ ಹಾರಾಟ ನಡೆಸಿತು.

ಪಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ ಸಿಂಧೂರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳಿಗೆ ಸಂಬಂಧಿಸಿದ ಭಯೋತ್ಪಾದಕ ಶಿಬಿರಗಳನ್ನು ಛಿದ್ರಗೊಳಿಸಿದ ಭಾರತೀಯು ವಾಯುಪಡೆಗಳು ಪಾಕ್‌ ಪ್ರಮುಖ ವಾಯುನೆಲೆಗಳಾದ ನೂರ್ ಖಾನ್, ಸರ್ಗೋಧಾ, ಜಕೋಬಾಬಾದ್, ಮುರಿಂದ್ ಮತ್ತು ರಫೀಕಿ ಸೇರಿದಂತೆ ಇನ್ನು, ಕೆಲ ವಾಯುನೆಲಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿತ್ತು. ಇದರಲ್ಲಿ ರಫೇಲ್‌ ಪಾತ್ರ ವಹಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com