

ಶಿವಸೇನೆ (UBT) ಮುಖವಾಣಿ ಸಾಮ್ನಾ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದು, ರಾಜ್ಯ ರಾಜಕೀಯಕ್ಕೆ ಅವರ ಪ್ರಭಾವ ಮತ್ತು ಕೊಡುಗೆಯನ್ನು ಎತ್ತಿ ತೋರಿಸಿದೆ.
ತನ್ನ ಸಂಪಾದಕೀಯದಲ್ಲಿ, ಸಾಮ್ನಾ, ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರ ನೆರಳಿನಲ್ಲಿ ಕೆಲಸ ಮಾಡುತ್ತಿದ್ದರೂ ಸ್ವತಂತ್ರ ನಾಯಕತ್ವವನ್ನು ಪ್ರದರ್ಶಿಸಿದ ಸಹಜ ನಾಯಕ ಎಂದು ಬಣ್ಣಿಸಿದೆ. ಅವರ ಹಠಾತ್ ಸಾವು ಮಹಾರಾಷ್ಟ್ರ ರಾಜ್ಯ ರಾಜಕೀಯಕ್ಕೆ ಕ್ರೂರ ಹೊಡೆತವಾಗಿದ್ದು, ರಾಜ್ಯದಿಂದ ಬಲಿಷ್ಠ ಮತ್ತು ವಿಶಾಲ ಹೃದಯದ ನಾಯಕನನ್ನು ಕಸಿದುಕೊಂಡಿದೆ ಎಂದು ಹೇಳಿದೆ.
ಅಜಿತ್ ಪವಾರ್ ನಿರಂತರ ಚಲನಶೀಲ ವ್ಯಕ್ತಿ. ಸಾರ್ವಜನಿಕ ಜೀವನದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. ಅಜಿತ್ ಪವಾರ್ ಅವರ ರಾಜಕೀಯ ಪ್ರಯಾಣ ಬಗ್ಗೆ ಸಾಮ್ನಾ, ಶರದ್ ಪವಾರ್ ಅವರ ಮಗನಾಗಿ ರಾಜಕೀಯವನ್ನು ಪ್ರವೇಶಿಸಿದರು, ಅವರ ಮಾರ್ಗದರ್ಶನದಲ್ಲಿ ಬೆಳೆದರು, ಆದರೆ ಅಂತಿಮವಾಗಿ ಅವರ ಸಾಧನೆಗಳ ಮೂಲಕ ತಮ್ಮದೇ ಆದ ವಿಶಿಷ್ಟ ರಾಜಕೀಯ ಮಾರ್ಗವನ್ನು ರೂಪಿಸಿಕೊಂಡರು ಎಂದು ಬರೆಯಲಾಗಿದೆ.
ಅಜಿತ್ ದಾದಾ ಅವರ ಹಠಾತ್ ನಿರ್ಗಮನವು ಮಹಾರಾಷ್ಟ್ರದ ಸಾಮಾಜಿಕ ಜೀವನ, ರಾಜಕೀಯ ಭೂದೃಶ್ಯ ಮತ್ತು ಲಕ್ಷಾಂತರ ಜನರ ವೈಯಕ್ತಿಕ ಜೀವನದಲ್ಲಿ ಆಳವಾದ ಶೂನ್ಯವನ್ನು ಸೃಷ್ಟಿಸಿದೆ. ಅವರು ಶರದ್ ಪವಾರ್ ಅವರ ಮಗನಾಗಿ ಮಹಾರಾಷ್ಟ್ರ ರಾಜಕೀಯವನ್ನು ಪ್ರವೇಶಿಸಿದರು. ಸಹ್ಯಾದ್ರಿಗಳಂತೆ ಪವಾರ್ ಅವರ ರಕ್ಷಣಾತ್ಮಕ ನೆರಳಿನಲ್ಲಿ ಅವರು ತಮ್ಮ ಸ್ಥಾನವನ್ನು ನಿರ್ಮಿಸಿಕೊಂಡರು, ಅವರ ಸಾಧನೆಗಳ ಮೂಲಕ ತಮ್ಮದೇ ಆದ ವಿಶಿಷ್ಟ ಮಾರ್ಗವನ್ನು ಕೆತ್ತಿದರು. ಕಾಲಾನಂತರದಲ್ಲಿ, ಅವರ ರಾಜಕೀಯ ಪ್ರಯಾಣವು ಶರದ್ ಪವಾರ್ ಅವರ ಪ್ರಯಾಣದಿಂದ ಭಿನ್ನವಾಯಿತು ಎಂದು ಬರೆಯಲಾಗಿದೆ.
ಅಜಿತ್ ಪವಾರ್ ಅವರ ಸಮಯಪಾಲನೆ, ಸ್ವಚ್ಛತೆ ಮತ್ತು ಶಿಸ್ತನ್ನು ಗೌರವಿಸುವ ಮೊಂಡುತನದ ಮತ್ತು ದಕ್ಷ ನಾಯಕ ಎಂದು ಬಣ್ಣಿಸಿದೆ. ಟೊಳ್ಳಾದ ಭರವಸೆಗಳನ್ನು ನೀಡುವುದು ಅವರ ಕಾರ್ಯಶೈಲಿಗೆ ಹೊಂದಿಕೆಯಾಗುತ್ತಿರಲಿಲ್ಲ. ಅವರ ಮಾತುಗಳಿಗೂ ಕ್ರಿಯೆಗಳಿಗೂ ಸಂಬಂಧವಿತ್ತು.
ಅಜಿತ್ ಪವಾರ್ ಒಬ್ಬ ಮೊಂಡುತನದ ಮತ್ತು ದಕ್ಷ ನಾಯಕ ಎಂದು ಪ್ರಸಿದ್ಧರಾಗಿದ್ದರು. ಅವರು ಸಮಯಪಾಲನೆ, ಸ್ವಚ್ಛತೆ ಮತ್ತು ಅಚ್ಚುಕಟ್ಟನ್ನು ಮೌಲ್ಯೀಕರಿಸಿದರು. ಪೊಳ್ಳಾದ ಭರವಸೆಗಳನ್ನು ನೀಡುವುದು ಅವರ ಶೈಲಿಗೆ ಹೊಂದಿಕೆಯಾಗುತ್ತಿರಲಿಲ್ಲ. ಆಡಿದ್ದನ್ನು ಸಾಧಿಸಿ ತೋರಿಸುತ್ತಿದ್ದರು ಎಂದು ಶಿವಸೇನೆ ಮುಖವಾಣಿ ಬಣ್ಣಿಸಿದೆ.
ಅಜಿತ್ ಪವಾರ್ ಅವರನ್ನು "ಸಾವಿರಾರು ಜನರು ಆಶ್ರಯ ಪಡೆದ ವಿಶಾಲ ಛತ್ರಿ"ಗೆ ಹೋಲಿಸಿದ ಸಾಮ್ನಾ, ಅವರ ನಿಧನದೊಂದಿಗೆ, ಅವರನ್ನು ಅವಲಂಬಿಸಿದ್ದವರ ಭವಿಷ್ಯ ಅನಿಶ್ಚಿತವಾಗಿದೆ ಎಂದು ಹೇಳಿದೆ. ಪ್ರಮೋದ್ ಮಹಾಜನ್, ಗೋಪಿನಾಥ್ ಮುಂಡೆ, ವಿಲಾಸ್‌ರಾವ್ ದೇಶಮುಖ್ ಮತ್ತು ಆರ್.ಆರ್. ಪಾಟೀಲ್ ಅವರಂತಹ ಇತರ ಪ್ರಮುಖ ನಾಯಕರ ನಷ್ಟವನ್ನು ನೆನಪಿಸಿಕೊಂಡ ಸಂಪಾದಕೀಯವು, ಮರಾಠಿ ರಾಜಕೀಯವು ದುಷ್ಟಶಕ್ತಿಯ ಅಡಿಯಲ್ಲಿ ಬಿದ್ದಂತೆ ಭಾಸವಾಗುತ್ತಿದೆ ಎಂದು ಹೇಳಿದೆ.
Advertisement