ಉತ್ತರ ಪ್ರದೇಶ: 800 ಕೌಶಲ್ಯ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ದಿನಪತ್ರಿಕೆ ಓದುವುದು ಕಡ್ಡಾಯ!

ಉತ್ತರ ಪ್ರದೇಶ ಕೌಶಲ್ಯ ಅಭಿವೃದ್ಧಿ ಮಿಷನ್ ನಿರ್ದೇಶಕ ಪುಲ್ಕಿತ್ ಖರೆ ಹೊರಡಿಸಿದ ನಿರ್ದೇಶನಗಳ ಪ್ರಕಾರ, ದಿನಪತ್ರಿಕೆಗಳನ್ನು ಓದುವುದನ್ನು ವೇಳಾಪಟ್ಟಿಯಲ್ಲಿ ಸೇರಿಸಲಾಗುತ್ತಿದೆ.
Newspaper reading made mandatory for students in 800 skill centres in UP
ಸಾಂದರ್ಭಿಕ ಚಿತ್ರ
Updated on

ಲಖನೌ: ಶಿಕ್ಷಣ ಇಲಾಖೆಯ ನಂತರ, ಉತ್ತರ ಪ್ರದೇಶ ಕೌಶಲ್ಯ ಅಭಿವೃದ್ಧಿ ಮಿಷನ್ ಈಗ ರಾಜ್ಯಾದ್ಯಂತ ಅಲ್ಪಾವಧಿಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತರಬೇತಿ ಪಡೆಯುವವರಿಗೆ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿದೆ.

ಈ ಕ್ರಮವು ರಾಜ್ಯಾದ್ಯಂತ ಸುಮಾರು 800 ಕೌಶಲ್ಯ ಕೇಂದ್ರಗಳಲ್ಲಿ ಪ್ರಸ್ತುತ ತರಬೇತಿ ಪಡೆಯುತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನೆ ನೀಡುವ ನಿರೀಕ್ಷೆಯಿದೆ.

ಉತ್ತರ ಪ್ರದೇಶ ಕೌಶಲ್ಯ ಅಭಿವೃದ್ಧಿ ಮಿಷನ್ ನಿರ್ದೇಶಕ ಪುಲ್ಕಿತ್ ಖರೆ ಹೊರಡಿಸಿದ ನಿರ್ದೇಶನಗಳ ಪ್ರಕಾರ, ದೈನಂದಿನ ಪತ್ರಿಕೆಗಳನ್ನು ಓದುವುದನ್ನು ವೇಳಾಪಟ್ಟಿಯಲ್ಲಿ ಸೇರಿಸಲಾಗುತ್ತಿದೆ.

Newspaper reading made mandatory for students in 800 skill centres in UP
ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ಐವರಿಗೆ ಉತ್ತರ ಪ್ರದೇಶ ಗೌರವ್ ಸಮ್ಮಾನ್

"ಪತ್ರಿಕೆಗಳನ್ನು ನಿಯಮಿತವಾಗಿ ಓದುವುದು ತರಬೇತಿ ಪಡೆಯುವವರಲ್ಲಿ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮವಾಗಿ ತಯಾರಿ ಮಾಡಲು ಸಹಾಯ ಮಾಡುತ್ತದೆ. ಇದು ತರಬೇತಿ ಪಡೆಯುವವರ ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ, ಇದು ತಾರ್ಕಿಕ ಚಿಂತನೆಯನ್ನು ಹೆಚ್ಚಿಸುತ್ತದೆ" ಎಂದು ಖರೆ ಹೇಳಿದ್ದಾರೆ.

ವೃತ್ತಿಪರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಕಪಿಲ್ ದೇವ್ ಅಗರ್ವಾಲ್ ಅವರ ಪ್ರಕಾರ, ಯುವಕರು ತಾಂತ್ರಿಕವಾಗಿ ಪ್ರವೀಣರಾಗಿರಬೇಕು ಮಾತ್ರವಲ್ಲದೆ ಸಾಮಾಜಿಕ, ಆರ್ಥಿಕ ಮತ್ತು ಜಾಗತಿಕ ಸನ್ನಿವೇಶಗಳ ತಿಳುವಳಿಕೆಯನ್ನು ಹೊಂದಿರಬೇಕು.

"ನಿಯಮಿತವಾಗಿ ಪತ್ರಿಕೆಗಳನ್ನು ಓದುವ ಉದ್ದೇಶವು ತರಬೇತಿ ಪಡೆಯುವವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಅವರ ಆತ್ಮವಿಶ್ವಾಸ, ಸಂವಹನ ಕೌಶಲ್ಯ ಮತ್ತು ವಿಶ್ಲೇಷಣಾತ್ಮಕ ಚಿಂತನೆಯನ್ನು ಹೆಚ್ಚಿಸುತ್ತದೆ" ಎಂದು ಅಗರ್ವಾಲ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com