ಅಯೋಧ್ಯೆ ರಾಮಮಂದಿರ ಬಳಿಕ ಬದರಿನಾಥ ದೇವಾಲಯದಲ್ಲೂ ದೇಣಿಗೆ ಕಳ್ಳತನ ಆರೋಪ, ತನಿಖೆಗೆ ಆದೇಶ!

ಭೈರವ ಸೇನಾ ಎಂಬ ಸಂಘಟನೆಯು ಬದರಿನಾಥ ಧಾಮದಲ್ಲಿ ಹಣಕಾಸಿನ ಅಕ್ರಮಗಳ ಆರೋಪ ಮಾಡಿದೆ. ದೇವಾಲಯ ಸಮಿತಿ ಅಧ್ಯಕ್ಷರ ವೈಯಕ್ತಿಕ ಸಹಾಯಕರಿಗೆ ಸಂಬಂಧಿಸಿದ ಆರ್ಥಿಕ ದುರುಪಯೋಗ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
Badrinath
ಬದರಿನಾಥ ದೇವಾಲಯ
Updated on

ಅಯೋಧ್ಯೆ: ಅಯೋಧ್ಯೆ ರಾಮ ಮಂದಿರ ದೇಣಿಗೆ ದುರುಪಯೋಗದ ಆರೋಪಗಳ ನಡುವೆ ಬದರಿನಾಥ ದೇವಾಲಯದಲ್ಲಿಯೂ ದೇಣಿಗೆಗಳಿಗೆ ಸಂಬಂಧಿಸಿದ ಇದೇ ರೀತಿಯ ಆರೋಪ ಕೇಳಿಬಂದಿದ್ದು, ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಶುಕ್ರವಾರ ತನಿಖೆಗೆ ಆದೇಶಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಎದ್ದಿರುವ ಆರೋಪಗಳನ್ನು ದೇವಾಲಯ ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಈ ವಿಷಯದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸುವಂತೆ ಆದೇಶಿಸಿದೆ ಎಂದು ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ಹೇಳಿದ್ದಾರೆ. ಸಂಬಂಧಪಟ್ಟ ನೌಕರರಿಂದಲೂ ವಿವರಣೆಗಳನ್ನು ಕೋರಲಾಗಿದೆ.

ಶುಕ್ರವಾರ, ಭೈರವ ಸೇನಾ ಎಂಬ ಸಂಘಟನೆಯು ಬದರಿನಾಥ ಧಾಮದಲ್ಲಿ ಹಣಕಾಸಿನ ಅಕ್ರಮಗಳ ಆರೋಪ ಮಾಡಿದೆ. ದೇವಾಲಯ ಸಮಿತಿ ಅಧ್ಯಕ್ಷರ ವೈಯಕ್ತಿಕ ಸಹಾಯಕರಿಗೆ ಸಂಬಂಧಿಸಿದ ಆರ್ಥಿಕ ದುರುಪಯೋಗ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಲಾಗಿರುವ ವ್ಯಕ್ತಿಯು ತಮ್ಮ 'ವೈಯಕ್ತಿಕ ಕಾರ್ಯದರ್ಶಿ' ಎಂಬ ಹೇಳಿಕೆಗಳನ್ನು ದ್ವಿವೇದಿ ನಿರಾಕರಿಸಿದ್ದಾರೆ. ಆ ವ್ಯಕ್ತಿಯು ತಮ್ಮ ಆಪ್ತ ಕಾರ್ಯದರ್ಶಿಯಲ್ಲ, ಬದಲಾಗಿ ಬಿಕೆಟಿಸಿಯ ನಿಯಮಿತ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಈ ಹಿಂದೆ ಅವರು ದೇವಾಲಯ ಸಮಿತಿಯ ಮೂವರು ಮಾಜಿ ಅಧ್ಯಕ್ಷರೊಂದಿಗೆ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Badrinath
ರಾಮಮಂದಿರ ದೇಣಿಗೆ ಹಣ ವಂಚನೆ ಪ್ರಕರಣ: ಜುಲೈ 6ರಂದು ಟ್ರಸ್ಟ್ ಮಹತ್ವದ ಸಭೆ!

ತನಿಖೆ ಪೂರ್ಣಗೊಂಡ ನಂತರ, ಯಾವುದೇ ಉದ್ಯೋಗಿ ತಪ್ಪಿತಸ್ಥರೆಂದು ಕಂಡುಬಂದರೆ, ನಿಯಮಗಳ ಪ್ರಕಾರ ಅವರ ವಿರುದ್ಧ ಕಠಿಣ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದು ದ್ವಿವೇದಿ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com