ಮುಂಬೈನಲ್ಲಿ ಭಾರೀ ಮಳೆ: ಮಹಾ ವಿಧಾನಸಭೆಯ ಮಳೆಗಾಲದ ಅಧಿವೇಶನ ಮುಂದೂಡಿಕೆ

ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಇಂದು ಸದನವನ್ನು ಮುಂದೂಡಿದರು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತದೊಂದಿಗೆ ಸಹಕರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.
Maharashtra Assembly monsoon session adjourned due to heavy rains
ಮುಂಬೈನಲ್ಲಿ ಭಾರೀ ಮಳೆ
Updated on

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ಮತ್ತು ಪಕ್ಕದ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರ ವಿಧಾನಸಭೆಯನ್ನು ಸೋಮವಾರ ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ,

ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಇಂದು ಸದನವನ್ನು ಮುಂದೂಡಿದರು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತದೊಂದಿಗೆ ಸಹಕರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಮುಂಬೈ ಮತ್ತು ನೆರೆಯ ಥಾಣೆ ಹಾಗೂ ರಾಯಗಡ್ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುವ ಮುನ್ಸೂಚನೆ ನೀಡಿರುವ ಐಎಂಡಿ, 'ರೆಡ್' ಅಲರ್ಟ್ ಘೋಷಿಸಿದೆ.

Maharashtra Assembly monsoon session adjourned due to heavy rains
ಮುಂಗಾರು ಅಬ್ಬರ: ಮುಂಬೈ, ಥಾಣೆ, ರಾಯಗಡಕ್ಕೆ IMD ರೆಡ್ ಅಲರ್ಟ್; ಕನಿಷ್ಠ 13 ಸಾವು, ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ!

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್ ಅವರು ಕಳೆದ ಎರಡು ದಿನಗಳಲ್ಲಿ ಭಾರೀ ಮಳೆಯಿಂದ ಸಂಭವಿಸಿದ ಸಾವುಗಳ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಅಮೀನ್ ಪಟೇಲ್(ಕಾಂಗ್ರೆಸ್) ಹಾಗೂ ಅಜಯ್ ಚೌಧರಿ(ಶಿವಸೇನೆ-ಯುಬಿಟಿ) ಇದಕ್ಕೆ ಬೆಂಬಲಿಸಿದರು.

ಸರ್ಕಾರ ಮತ್ತು ಆಡಳಿತವು ಜಾಗರೂಕವಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು. ಎಲ್ಲೆಲ್ಲಿ ಲೋಪದೋಷಗಳು ಕಂಡುಬಂದರೂ ಅವುಗಳನ್ನು ಸರಿಪಡಿಸಲಾಗುವುದು ಎಂದು ಅವರು ಹೇಳಿದರು.

ನಾಗರಿಕರು ಸಹ ಜಾಗರೂಕರಾಗಿರಬೇಕು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮಹಾ ಸಿಎಂ ಮನವಿ ಮಾಡಿದ್ದಾರೆ. ಮುಂಬೈ-ಪುಣೆ ರಸ್ತೆಯಲ್ಲಿ ಭೂಕುಸಿತದ ಬಗ್ಗೆ ತಕ್ಷಣವೇ ಎಚ್ಚರಿಕೆ ನೀಡಲಾಗಿದೆ ಎಂದು ಸಿಎಂ ಹೇಳಿದರು.

ವಿಪತ್ತು ನಿರ್ವಹಣೆ ಮತ್ತು ನಾಗರಿಕ ಆಡಳಿತವು ಪರಿಸ್ಥಿತಿಯನ್ನು ನಿಭಾಯಿಸಲು ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿದ್ದು, ಮಧ್ಯಾಹ್ನ70 ರಿಂದ 90 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com