ಈ ಕೆಲಸ ಮಾಡುದ್ರೆ 1 ನಿಮಿಷದಲ್ಲಿ ತತ್ಕಾಲ್ ಟಿಕೆಟ್ ಕನ್ಫರ್ಮ್! ಏನು ಗೊತ್ತಾ?

ಬೆಳಗ್ಗೆ 10 ಗಂಟೆಗೆ ಎಸಿ, 11 ಗಂಟೆಗೆ ಸ್ಲೀಪರ್‌ ತತ್ಕಾಲ್ ಓಪನ್ ಆಗುತ್ತಿದ್ದಂತೆ ರೈಲ್ವೆ ಸರ್ವರ್ ಜಾಮ್ ಆಗುತ್ತೆ. 30 ಸೆಕೆಂಡ್‌ನಲ್ಲಿ ಎಲ್ಲಾ ಸೀಟ್ ಫುಲ್. ಹಾಗಾಗಿ, ಸರ್ವರ್ ಬಿಜಿ ಇದೆ ಅಂತ ಬೇಜಾರು ಮಾಡೋ ಬದಲು, ಕೆಲವರು ಮಾತ್ರ 1 ನಿಮಿಷದಲ್ಲಿ ಟಿಕೆಟ್ ಕನ್‌ಫರ್ಮ್ ಮಾಡ್ಕೊಳ್ತಾರೆ. ಅದೇಗೆ ಗೋತಾ?
Railway Ticket
ರೈಲ್ವೆ ಟಿಕೆಟ್Online Desk
Updated on

IRCTC Tatkal Booking Hack: ಎಮರ್ಜೆನ್ಸಿ ಟೈಂನಲ್ಲಿ ರೈಲಿನ ಪ್ರಯಾಣಕ್ಕೆ ನಾರ್ಮಲ್ ಟಿಕೆಟ್ ಸಿಗೋದು ಕಷ್ಟವೋ ಕಷ್ಟ! ಹಾಗಾಗಿ, ಬಹುತೇಕರು ತತ್ಕಾಲ್ ಟಿಕೆಟ್ ಬುಕ್ (Book Tatkal Ticket) ಮಾಡೋಕೆ ಟ್ರೈ ಮಾಡುತಾರೆ. ಆದರೆ ಅದೂ ಕೂಡ ಬಹುತೇಕ ಸಮಯ ಸಿಗೋದೇ ಇಲ್ಲ! ಅದರಂತೆ, ಬೆಳಗ್ಗೆ 10 ಗಂಟೆಗೆ ಎಸಿ, 11 ಗಂಟೆಗೆ ಸ್ಲೀಪರ್‌ ತತ್ಕಾಲ್ ಟಿಕೆಟ್ (Tatkal Ticket) ವಿಂಡೋ ಓಪನ್ ಆಗುತ್ತಿದ್ದಂತೆ 30 ಸೆಕೆಂಡ್‌ನಲ್ಲಿ ಎಲ್ಲಾ ಸೀಟ್ ಖಾಲಿ. ಆದರೆ ರೈಲ್ವೆ ಟಿಟಿಇ ಹಾಗೂ ಏಜೆಂಟ್‌ಗಳು ಬಳಸೋ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ 1 ನಿಮಿಷದೊಳಗೆ ಕನ್‌ಫರ್ಮ್ ರೈಲ್ವೆ ಟಿಕೆಟ್ (Confirmed Railway Ticket) ನಿಮ್ಮ ಕೈಯಲ್ಲಿ ಇರುತ್ತೆ; ಅದೇಗೆ ಗೋತಾ?

ಮಾಸ್ಟರ್ ಲಿಸ್ಟ್ ರೆಡಿ ಮಾಡಿ:

ತತ್ಕಾಲ್ ಬುಕಿಂಗ್ ಟೈಂನಲ್ಲಿ ಪ್ರಯಾಣಿಕರ ಹೆಸರು, ವಯಸ್ಸು ಟೈಪ್ ಮಾಡಲು ಹೋದರೆ ಕನಿಷ್ಠ 30 ರಿಂದ 40 ಸೆಕೆಂಡ್ ವ್ಯರ್ಥವಾಗುತ್ತದೆ. ಅಷ್ಟರಲ್ಲೇ ಟಿಕೆಟ್ ಮುಗಿಯುತ್ತದೆ. ಹಾಗಾಗಿ, ಬುಕಿಂಗ್ ಆರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ IRCTC ಆಪ್‌ನಲ್ಲಿ 'ನನ್ನ ಪ್ರೊಫೈಲ್' ಗೆ ಹೋಗಿ 'ಮಾಸ್ಟರ್ ಪಟ್ಟಿ'ಯನ್ನು ರೆಡಿ ಮಾಡಿ. ಅಲ್ಲಿ ಪ್ರಯಾಣಿಕರ ಎಲ್ಲಾ ವಿವರಗಳನ್ನು ಮೊದಲೇ ತುಂಬಿ ಸೇವ್ ಮಾಡಿ. ಅದರಂತೆ ಬುಕಿಂಗ್ ಟೈಂನಲ್ಲಿ ಕೇವಲ ಒಂದು ಕ್ಲಿಕ್ ಮೂಲಕ ಎಲ್ಲರ ಹೆಸರನ್ನು ನೇರವಾಗಿ ಸೆಲೆಕ್ಟ್‌ ಮಾಡಬಹುದು.

Railway Ticket
ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ; 'ಭಾರತೀಯ ರೈಲ್ವೆ ಅಭಿವೃದ್ಧಿಯಾಗಿದೆ' ಎಂದ ನಟ ಸೋನು ಸೂದ್ ವಿರುದ್ಧ ನೆಟ್ಟಿಗರು ಕಿಡಿ!

IRCTC ವ್ಯಾಲೆಟ್ ಬಳಸಿ:

ತತ್ಕಾಲ್ ಬುಕಿಂಗ್ ಟೈಂನಲ್ಲಿ ನೆಟ್ ಬ್ಯಾಂಕಿಂಗ್, ಕಾರ್ಡ್ ಗೆ ಒಟಿಪಿ ಬರೋದ್ರಲ್ಲಿ 20 ಸೆಕೆಂಡ್ ಹೋಗುತ್ತೆ. ಅದರ ಬದಲು ರೈಲ್ವೆ ವೆಬ್‌ಸೈಟ್‌ನಲ್ಲಿ ಯುಪಿಐ ಲೈಟ್ ಅಥವಾ ಅದಕ್ಕಿಂತಲೂ ರೈಲ್ವೆ ವ್ಯಾಲೆಟ್ನಲ್ಲಿಯೇ ಮೊದಲೇ ಬ್ಯಾಲೆನ್ಸ್ ಇಡಿ. ಅದರಂತೆ ಪೇ ನೌ ಕೊಟ್ಟ ತಕ್ಷಣವೇ ಪೇಮೆಂಟ್ ಆಗುತ್ತೆ.

ಟೈಮಿಂಗ್ ಬಹಳ ಮುಖ್ಯ:

ಬೆಳಗ್ಗೆ 10 ಗಂಟೆಗೆ ಎಸಿ, 11 ಗಂಟೆಗೆ ಸ್ಲೀಪರ್‌ ತತ್ಕಾಲ್ ಟಿಕೆಟ್ ವಿಂಡೋ ಓಪನ್ ಆಗೋಕೆ ೫ ರಿಂದ ೧೦ ನಿಮಿಷ ಮುಂಚೆಯೇ ವೆಬೈಸೈಟ್ ಓಪನ್ ಮಾಡಬೇಡಿ. ಬದಲಾಗಿ, 1 ರಿಂದ 2 ನಿಮಿಷ ಮುಂಚೆ ವೆಬೈಸೈಟ್ ಓಪನ್ ಮಾಡಿ. ಅದರಂತೆ, ಎಸಿ ಕ್ಲಾಸ್ ಬೆಳಿಗ್ಗೆ 10:00 ಗಂಟೆಗೆ ಬುಕಿಂಗ್ ಆರಂಭವಾಗುತ್ತದೆ. ಹಾಗಾಗಿ ನೀವು 09:58 ಕ್ಕೆ ಲಾಗಿನ್ ಆಗಿ ಸಿದ್ಧರಿರಬೇಕು. ಜೊತೆಗೆ ಸ್ಲೀಪರ್‌ ಕ್ಲಾಸ್ ಬೆಳಿಗ್ಗೆ 11:00 ಗಂಟೆಗೆ ಆರಂಭವಾಗುತ್ತದೆ. ಹಾಗಾಗಿ, ನೀವು 10:58 ಕ್ಕೆ ಲಾಗಿನ್ ಆಗಿ.

ಉದಾಹರೆಣೆಗೆ: 9:59:55 ಕ್ಕೆ ಪೇಜ್ ರಿಫ್ರೆಶ್ ಮಾಡ್ತಾ ಇರಿ. ಸರಿಯಾಗಿಯೇ 10:00:00 ಕ್ಕೆ ಕ್ಲಿಕ್ ಮಾಡಿ.

Railway Ticket
PRS ರೈಲು ಟಿಕೆಟ್ ಮರೆತಿದ್ದೀರಾ? ಪ್ರಯಾಣದ ಮಧ್ಯದಲ್ಲಿ ರೈಲ್ವೆಯಿಂದ ಸಹಾಯ ಪಡೆಯುವುದು ಹೇಗೆ?: ಇಲ್ಲಿದೆ ಮಾಹಿತಿ

ಈ ಸೆಟ್ಟಿಂಗ್ ಮರೆಯಬೇಡಿ:

ಬುಕಿಂಗ್ ಮಾಡುವಾಗ ಕೊನೆಯಲ್ಲಿ "ಕನಫರ್ಮ್ ಸೀಟು ಸಿಕ್ಕರೆ ಮಾತ್ರ ಬುಕ್ ಮಾಡಿ ಎಂಬ ಬಾಕ್ಸ್ ಅನ್ನು ಟಿಕ್‍ ಮಾಡಿ. ಇದರಿಂದ ಒಂದು ವೇಳೆ ಸೀಟು ಸಿಗದಿದ್ದರೆ ನಿಮ್ಮ ಹಣ ಕಟ್ ಆಗುವುದಿಲ್ಲ ಮತ್ತು ವೈಟಿಂಗ್‍ ಲಿಸ್ಟ್ ಟಿಕೆಟ್ ಬುಕ್ ಆಗುವುದು ಸಹ ತಪ್ಪುತ್ತದೆ.

ಬೋನಸ್ ಟಿಪ್ಸ್: ಗೂಗಲ್ ಕ್ರೋಮ್‌ ಇಂಕಾಗ್ನಿಟೋ ಮೋಡ್ ಬಳಸಿ. ಯಾಕಂದ್ರೆ, ಇದನ್ನ ಬಳಸಿದ್ರೆ ಕ್ಯಾಶೆ ಸ್ಲೋ ಮಾಡಲ್ಲ. ಜೊತೆಗೆ ಇಂಟರ್ನೆಟ್ ಸಂಪರ್ಕವು ಅತ್ಯಂತ ವೇಗವಾಗಿ ಮತ್ತು ಸ್ಥಿರವಾಗಿರಲಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com